ಬೆಂಗಳೂರು: ಕೆಂಗೇರಿ ಪೊಲೀಸರು ರಮೇಶ್ ಎಂಬ ಆರೋಪಿಯನ್ನು ಬಂಧಿಸಿ 20 ಲಕ್ಷ ರೂ ಬೆಲೆ ಬಾಳುವ 20 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ.
ಈತನು ಹ್ಯಾಂಡಲ್ ಲಾಕ್ ಮುರಿದು, ವಿವಿಧ ಬಗೆಯ 20 ಕಂಪನಿಗಳ ದ್ವಿಚಕ್ರ ವಾಹನ ಕಳವು ಮಾಡಿದ್ದ. ಫೆಬ್ರವರಿ 13ರಂದು ಸಂದೀಪ್ ಶೆಟ್ಟಿ ಉಪಾಧ್ಯಾಯ ಲೇಔಟ್ ಕೆಂಗೇರಿ ಎಂಬುವರ ಮನೆಯಲ್ಲಿ ದ್ವಿಚಕ್ರ ವಾಹನ ಕಳವಾಗಿದ್ದು ಇವರು ದೂರು ನೀಡಿದ ಅನ್ವಯದ ಮೇಲೆ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿರುತ್ತಾರೆ. ಈತನು ಕೆಂಗೇರಿ ಚಂದ್ರಾ ಲೇಔಟ್ ಸೇರಿದಂತೆ ಸುಮಾರು 10 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಣೋ ಮಾಡಿದ್ದನು.