ವಿಜಯನಗರದ ನಾಡೋಜ ಡಾ. ಎಂ ಚಿದಾನಂದಮೂರ್ತಿ ಸಭಾಂಗಣದಲ್ಲಿ ಖ್ಯಾತ ಸಮಾಜ ಸೇವಕರಾದ ಲಯನ್ ಡಾ. ಛಾಯಾಬಸವರಾಜ್ ಮತ್ತು ಡಾ. ಆಶಾ ನವೀನ್ ರವರ ಸಾರಥ್ಯದಲ್ಲಿ ವಿನೂತನವಾದ ಯುಗಾದಿ ಸಂಭ್ರಮ ಕಾರ್ಯಕ್ರಮವನ್ನು ಆಚರಿಸಲಾಯಿತು.
ಸಾಂಸಾರಿಕ ಬದುಕು ಮತ್ತು ಮಕ್ಕಳ ಏಳಿಗೆಗಾಗಿ ದುಡಿಯುವ ಮಹಿಳಾ ಮಣಿಗಳು ಸಮಾಜದ ಕಣ್ಣುಗಳು. ಮಹಿಳೆಯರೇ ಸೇರಿಕೊಂಡು ಸಾಂಪ್ರದಾಯಿಕ ಹಬ್ಬವನ್ನು ವಿನೂತನವಾಗಿ ಆಚರಿಸುವ ಮೂಲಕ ನಾಡಿನ ಸಾಂಸ್ಕೃತಿಕ ಸೊಬಗಿಗೆ ಕೊಡುಗೆಯನ್ನು ನೀಡಿದರು.ಬೇವು ಬೆಲ್ಲದಂತೆ ಬದುಕು ಇರಬೇಕು ಎನ್ನುವ ಆಶಯದಿಂದ, ಹಾಡು,ಕುಣಿತ, ಕೋಲಾಟ, ಶಾಸ್ತ್ರೀಯ ನೃತ್ಯ, ವಿನೂತನ ಫ್ಯಾಷನ್ ಶೋ, ಸಾಧಕರಿಗೆ ಸನ್ಮಾನ ಹೀಗೆ ಹಲವಾರು ವಿಷಯಗಳ ಸಂಗಮವಾಗಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಮುಖ್ಯ ಅತಿಥಿಗಳಾಗಿ ಲಯನ್ ಶೀಲಾ ನಂಜುಂಡಯ್ಯ, ಲಯನ್ ಡಾ. ಸತ್ಯವತಿ ಬಸವರಾಜ್ ಲಯನ್ ಡಾ. ಮಧುರ ಅಶೋಕ್ ಕುಮಾರ್, ಲಯನ್ ಡಾ. ಜ್ಯೋತಿ ರೆಡ್ಡಿ, ಶ್ರೀಮತಿ ವರಲಕ್ಷ್ಮಿ ಗುಣವಂತ ಮಂಜು, ಲಯನ್ ಡಾ. ವಿಜಯಶಂಕರ್ ಮುಂತಾದವರು ಭಾಗವಹಿಸಿದ್ದರು. ಮತ್ತು ನೂರಕ್ಕೂ ಅಧಿಕ ಮಹಿಳಾ ಮಣಿಗಳು ವಯಸ್ಸಿನ ಅಂತರವನ್ನು ಮರೆತು ಎಲ್ಲ ವಯೋಮಾನದವರು ಈ ಸಂಭ್ರಮದಲ್ಲಿ ಭಾಗಿಯಾಗಿ ಮುಂದಿನ ಪೀಳಿಗೆಗೆ ಸಮನ್ವಯದ ಸಂದೇಶವನ್ನು ನೀಡಿದರು.