ಚೈತ್ರ ಮಾಸದಲ್ಲಿ ಬರುವ ಮೊದಲ ಹಬ್ಬ ಯುಗಾದಿ, ಹಿಂದೂ ಸಂಪ್ರದಾಯದ ಹೊಸ ವರ್ಷ ಯುಗಾದಿ ಹಬ್ಬ. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಹೊಸ ವರುಷಕ್ಕೆ ಹೊಸದು ಹೊಸದು ತರುತ್ತಿದೆ.
ಈ ಯುಗಾದಿ ಹಬ್ಬ ನಮಗೆ ಮಾತ್ರವಲ್ಲ, ಪ್ರಕೃತಿಗೊ ಸಹ ಹೊಸ ವರುಷವಾಗಿರುತ್ತದೆ. ಚೈತ್ರ ಮಾಸದಿಂದ ಪ್ರಾರಂಭವಾಗುವ. ಈ ಮಾಸದಲ್ಲಿ ಮರ ಗಿಡಗಳು ಚಿಗರೊಡೆದು ಪ್ರಕೃತಿಯೂ ಅಚ್ಚ ಹಸಿರಿನಿಂದ ಕಂಗೊಳಿಸುತ್ತದೆ. ಬೇವು ಬೇಲ್ಲದ ಸಂಭ್ರಮವೇ ಈ ಯಗಾದಿ ಹಬ್ಬ ಮನೆಯಂಗಳದಲ್ಲಿ ಸಗಣಿ ಸಾರಿಸಿ ರಂಗೋಲಿ ಬಿಡಿಸಿ ಬಣ್ಣ ಮತ್ತು ಹೂವುಗಳಿಂದ ಅಲಂಕರಿಸಲಾಗುತ್ತದೆ. ಮನೆಯ ಹೊಸ್ತಿಲು ಮತ್ತು ದೇವರ ಕೋಣೆಯನ್ನು ಬೇವು ಮಾವಿನ ತಳಿರು ತೋರಣ ಮತ್ತು ಹೂವುಗಳಿಂದ ಅಲಂಕರಿಸುತ್ತಾರೆ.
ಬೇವು ಬೇಲ್ಲ ವನ್ನು ತಿಂದು ಹಿಂದಿನ ನೋವು ಮರೆತು ಸ್ನೇಹಿತರಿಗೆ ಯುಗಾದಿ ಹಬ್ಬದ ಶುಭಾಷಯಗಳನ್ನು ಹೇಳಿ ಯುಗಾದಿ ಹಬ್ಬ ಆಚರಿಸಲಾಗುತ್ತದೆ. ಕಳೆದ ವರ್ಷದ ಕಹಿ ಘಟನೆಗಳನ್ನು ಮರೆಯೋಣ, ಮತ್ತು ಸಿಹಿ ಘಟನೆಗಳನ್ನು ಸವಿಯೋಣ, ಎನ್ನುವ ಸಂದೇಶವನ್ನು ಯುಗಾದಿ ಹಬ್ಬವು ಬೇವು ಬೆಲ್ಲ ಹಂಚುವುದು ಮೂಲ ಉದ್ದೇಶ ಜೀವನದಲ್ಲಿ ಕಷ್ಟ ಸುಖಗಳು ಬರುತ್ತಲೇ ಇರುತ್ತವೆ.
ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಸಮಾನವಾಗಿ ತೆಗೆದುಕೊಂಡು ಬಾಳಬೇಕೆಂಬುವ ಸಂಕೇತವನ್ನು ಯುಗಾದಿ ಹಬ್ಬ ಆಚರಣೆಯಿಂದ ತಿಳಿದುಕೊಳ್ಳಬಹುದಾಗಿದೆ. ಬೇವಿನ ಎಲೆ, ಹೂವು ಮತ್ತು ಬೆಲ್ಲದ ತುರಿ ಜೊತೆಗೆ ಸ್ವಲ್ಪ ತುಪ್ಪ ಹಾಕಿ ಕಲಿಸಿದ ಮಿಶ್ರಣವೇ ಬೇವು ಬೆಲ್ಲ ಮನೆಯಲ್ಲಿ ದೇವರಿಗೆ ಪೂಜೆ ಮಾಡಿ ಬೇವು ಬೆಲ್ಲ ಮನೆಯವರೆಲ್ಲ ತಿನ್ನುತ್ತಾರೆ. ಸಾಯಂಕಾಲ ಪಂಚಾಂಗ ಓದುವ ಕಾರ್ಯಕ್ರಮ ಮನೆಯ ಹಿರಿಯರು ಅಥವಾ ದೇವಸ್ಥಾನದ ಅರ್ಚಕರು ಪಂಚಾಂಗ ಓದುವುದನ್ನು ಎಲ್ಲಾರೂ ಕೇಳಿಸಿಕೊಳ್ಳುತ್ತಾರೆ. ಈ ಬೇವು ಬೇಲ್ಲದ ಸಂಭ್ರಮವೇ ಯುಗಾದಿ ಹಬ್ಬ.