ಭಾಗ್ಯನಗರ: ಪಟ್ಟಣದ ಪತ್ರಕರ್ತರ ಭವನದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಯುಗಾದಿ ಹಬ್ಬದ ಅಂಗವಾಗಿ ಪೂಜಾ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಹಮ್ಮಿಕೊಳ್ಳಲಾಯಿತು.
ಸಂಘದ ಅಧ್ಯಕ್ಷರಾದ ಡಿ.ಎನ್. ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು ಹಾಗೂ ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ಅಂಗವಾಗಿ ಹಾಜರಿದ್ದ ಎಲ್ಲರಿಗೂ ಬೇವು-ಬೆಲ್ಲ, ಸಿಹಿ ಮತ್ತು ಖಾರವನ್ನು ವಿತರಿಸಿ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ಡಿ.ಎನ್. ಕೃಷ್ಣಾರೆಡ್ಡಿ ಅವರು, ?ಯುಗಾದಿ ಹಬ್ಬವು ಹೊಸ ವರ್ಷದ ಆರಂಭವನ್ನು ಸೂಚಿಸುವುದಷ್ಟೇ ಅಲ್ಲದೆ, ಜೀವನದಲ್ಲಿ ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸುವ ಸಂದೇಶವನ್ನು ನೀಡುತ್ತದೆ. ಬೇವು-ಬೆಲ್ಲದಂತೆಯೇ ಜೀವನದಲ್ಲಿಯೂ ಸಿಹಿ-ಕಹಿ ಅನುಭವಗಳು ಸಹಜ. ಪತ್ರಕರ್ತರು ಸಮಾಜದ ಕನ್ನಡಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸತ್ಯವನ್ನು ನಿಷ್ಠೆಯಿಂದ ಜನರಿಗೆ ತಲುಪಿಸುವ ಮಹತ್ವದ ಹೊಣೆಗಾರಿಕೆಯನ್ನು ಹೊಂದಿದ್ದಾರೆ. ಇಂತಹ ಹಬ್ಬಗಳು ಪರಸ್ಪರ ಏಕತೆ ಮತ್ತು ಸಹೋದರತ್ವವನ್ನು ಹೆಚ್ಚಿಸುತ್ತವೆ, ಪತ್ರಕರ್ತರ ನಡುವೆ ಸಹಕಾರ, ಒಗ್ಗಟ್ಟು ಹಾಗೂ ವೃತ್ತಿಪರ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯವೆಂದು ತಿಳಿಸಿದರು.ಕಾರ್ಯಕ್ರಮದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಎಸ್. ಸುರೇಶ್, ಅಶ್ವತ್ಥನಾರಾಯಣ (ಮಣಿಕಂಠ), ಪ್ರಧಾನ ಕಾರ್ಯದರ್ಶಿ ಸೈಯದ್ ಸಿದ್ದೀಕ್, ಕಾರ್ಯದರ್ಶಿ ಎಸ್.ಎಸ್.ಶ್ರೀನಿವಾಸ್, ಪತ್ರಕರ್ತರಾದ ಅಬ್ದುಲ್ ಕರೀಂಸಾಬ್, ಬಿ.ಆರ್. ಕೃಷ್ಣಾ, ಎ.ಜಿ. ನಾರಾಯಣಸ್ವಾಮಿ, ಗೋಪಾಲರೆಡ್ಡಿ, ರಂಗನಾಥ್, ನಾಗರಾಜ್, ಬಾಬು ಸೇರಿದಂತೆ ಮತ್ತಿತರರು ಹಾಜರಿದ್ದರು.
ಯುಗಾದಿ ಹಬ್ಬ: ಪತ್ರಕರ್ತರ ಭವನದಲ್ಲಿ ಪೂಜಾ ಕಾರ್ಯಕ್ರಮ



