ಗೋವಿಂದರಾಜನಗರ: ಯುಗಾದಿ ಹಬ್ಬದ ಅಂಗವಾಗಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಚೇರಿಯಲ್ಲಿ ರಾಜ್ಯ ಯುವ ಮುಖಂಡ ಡಾ. ಅರುಣ್ ಸೋಮಣ್ಣ ಅವರ ನೇತೃತ್ವದಲ್ಲಿ ಯುಗಾದಿ ಪೂಜೆ ವಿಜೃಂಭಣೆಯಿAದ ನೆರವೇರಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ
ವಿ. ಸೋಮಣ್ಣ ಅವರು, ಗೋವಿಂದರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಬಲಿಷ್ಠವಾಗಿದ್ದು, ಮುಂಬರುವ
ವಿಧಾನಸಭಾ ಚುನಾವಣೆಗೆ ಕಾರ್ಯಕರ್ತರು ಸಜ್ಜಾಗ
ಬೇಕು ಎಂದು ಕರೆ ನೀಡಿದರು.ಬಿಜೆಪಿ ಸಂಘಟನೆಗೆ ಡಾ. ಅರುಣ್ ಸೋಮಣ್ಣ ಒತ್ತು ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಿಸಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ದಿನನಿತ್ಯದ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ನಾವು ಸದಾ ಜನರೊಂದಿಗೆ ಇರುತ್ತೇವೆ. ಕ್ಷೇತ್ರದ
ಅಭಿವೃದ್ಧಿ ಹಾಗೂ ಬಡವರ ಹಿತಕ್ಕಾಗಿ ಕಾರ್ಯ ನಿರ್ವಹಿಸುತ್ತೇವೆ. ಗೋವಿಂದರಾಜನಗರದಲ್ಲಿ ಮತ್ತೆ ಅಧಿಕಾರಕ್ಕೆ ಬಂದು ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ ಎಂದು ಸಚಿವ ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಸದಸ್ಯರಾದ ಹೆಚ್. ರವೀಂದ್ರ, ವಿಶ್ವನಾಥ್ ಗೌಡ, ಮೋಹನ್ ಕುಮಾರ್, ದಾಸೆ ಗೌಡ , ಚನ್ನಪ್ಪ , ಶ್ರೀಧರ್, ಹೆಚ್. ರಮೇಶ್, ಸಿದ್ಧಾರ್ಥ, ಪಿ. ಮೂರ್ತಿ, ರಾಮಾಂಜಿನಿ, ಗೋಪಿನಾಥ್ ರಾಜು, ಉಮಾಶಂಕರ್, ಸೇರಿದಂತೆ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಗೋವಿಂದರಾಜನಗರದಲ್ಲಿ ಬಿಜೆಪಿ ಕಚೇರಿಯಲ್ಲಿ ಯುಗಾದಿ ಪೂಜೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ: ಸಚಿವರಾದ ವಿ. ಸೋಮಣ್ಣ ವಿಶ್ವಾಸ



