ತಿ. ನರಸೀಪುರ: ಬೇವಿನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್. ಗಿರೀಶ, ಉಪಾಧ್ಯಕ್ಷರಾಗಿ ಬಿ.ಎಂ.ಕೃಷ್ಣಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಸಲಾಯಿತು.
ಅಧ್ಯಕ್ಷ ಸ್ಥಾನಕ್ಕೆ ಎನ್. ಗಿರೀಶ.ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಎಂ ಕೃಷ್ಣಮೂರ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಸಿದ ಹಿನ್ನೆಲೆ. ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯ ಬಯಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಎನ್ ಗಿರೀಶ ಅಧ್ಯಕ್ಷರಾಗಿ ಬಿ ಎಂ ಕೃಷ್ಣಮೂರ್ತಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿ
ಕಾರಿಯಾಗಿ ಕಾರ್ಯ ನಿರ್ವಹಿಸಿದ ಸಹಕಾರಿ ಸಂಘದ ಅಧಿಕಾರಿ ರಾಜಣ್ಣ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಎನ್.ಗಿರೀಶ್ ಮಾತನಾಡಿ ನಮ್ಮ ಸಂಘವು ಹೋಬಳಿಯಲ್ಲಿ ಮಾದರಿಯಾಗಿದ್ದು. ಮುಂದೇನು ಸಹ ಸಂಘದ ಎಲ್ಲಾ ನಿರ್ದೇಶಕರ ಸಹಕಾರದೊಂದಿಗೆ ಇದೇ ರೀತಿ ನಡೆಸಿಕೊಂಡು ಹೋಗುತ್ತೇವೆ. ಅಲ್ಲದೆ ಸರಕಾರ ಮತ್ತು ಮಹಾಮಂಡಳಿಯಿಂದ ಬರುವಂತಹ ಎಲ್ಲಾ ಸವಲತ್ತುಗಳನ್ನು ಹಾಲು ಉತ್ಪಾದಕರಿಗೆ ಹಾಗೂ ರೈತರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ನಿರ್ದೇಶನಗಳಾದ. ಬಿ.ಪಿ ಮಲ್ಲಿಕಾರ್ಜುನ, ಬಿ ಎಂ ಮಹದೇವು,ಬಿ ಆರ್ ಯೋಗಾನಂದ, ಸೋಮಶೇಖರ್ ನಾಗರಾಜು, ಲೋಕೇಶ, ನಾಗರಾಜು ಹಾಗು ಸಂಘದ ಕಾರ್ಯದರ್ಶಿ ಅಭಿಷೇಕ್ ಗೌಡ, ಹಾಗೂ ರಾಕೇಶ್ ಗೌಡ, ನಿಖಲ್ ಹಾಗೂ ಇನ್ನಿತರರು ರಾಜರಿದ್ದರು.