ದೇವನಹಳ್ಳಿ: ದೇವನಹಳ್ಳಿ ತಾಲೂಕು ಬಿದಲ ಪುರ ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನಾರಾಯಣಪ್ಪ ಉಪಾಧ್ಯಕ್ಷರಾಗಿ ಎಲ್ಲಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಚೇತನ್ ಆರ್ ತಿಳಿಸಿದ್ದಾರೆ.
ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ನಾರಾಯಣಪ್ಪ ಮಾತನಾಡಿ ರೈತರಿಗೆ ಹಾಲು ಸರಬರಾಜು ಮಾಡುವುದರಿಂದ ಆರ್ಥಿಕವಾಗಿ ಸಬಲರಾಗುವುದಕ್ಕೆ ಅನುಕೂಲವಾಗುತ್ತದೆ ರೈತರಿಗೆ ಹೈನುಗಾರಿಕೆ ಮಾಡುವುದು ಕಷ್ಟಕರವಾಗುವುದಿಲ್ಲ ಬೊಮ್ಮಲ್ ನಿಂದ ಹಲವಾರು ಸೌಲಭ್ಯಗಳು ಸಿಗುತ್ತವೆ ಆಸುಗಳಿಗೆ ಉಚಿತ ಚಿಕಿತ್ಸೆ ವಿಮೆ ಯೋಜನೆ ಕಾಲಕಾಲಕ್ಕೆ ಸಾಂಕ್ರಾಮಿಕ ರೋಗಗಳಿಗೆ ಉಚಿತ ಚುಚ್ಚುಮದ್ದು ಇನ್ನು ಮುಂತಾದ ಸೌಲಭ್ಯಗಳು ಸಿಗುತ್ತವೆ ಎಂದರು.
ಗ್ರಾಪಂ ಸದಸ್ಯ ಲಲಿತೇಶ್ ಮಾತನಾಡಿ ಸಹಕಾರಿ ಸಂಘದ ಆಡಳಿತ ಮಂಡಳಿ ಹಾಗೂ ಸದಸ್ಯರ ಸಹಕಾರದಿಂದ ಸಂಘವು ಅಭಿವೃದ್ಧಿ ಪಡಿಸಬೇಕು ಗುಣಮಟ್ಟದ ಹಾಲು ಸರಬರಾಜು ಮಾಡಿದರೆ ಸಂಘ ಅಭಿವೃದ್ಧಿಯಾಗುತ್ತದೆ ರೈತರಿಗೂ ವರ್ಷಕ್ಕೆ ಬೋನಸ್ ಸಿಗುತ್ತದೆ ಎಂದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಬಿಎಸ್ ನಂಜೇಗೌಡ ಮುನೇಗೌಡ ರಮೇಶ್ ನಾಗರಾಜ್ ಚಂದ್ರಪ್ಪ ಸುಮಿತ್ರ ಮುನಿಯಪ್ಪ ಶಿವಮೂರ್ತಿ ಎಂ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಹಾಗೂ ಸಂಘದ ಸಿಬ್ಬಂದಿ ವರ್ಗದವರು ಗ್ರಾಮಸ್ಥರು ಹಾಜರಿದ್ದರು.