ದೆಹಲಿ: ರಾಜಕೀಯ ಚುನಾವಣೆಗಳು ನೋಡಿದ್ದೀರಿ. ಆದರೆ, ರಾಷ್ಟ್ರ ರಾಜಧಾನಿಯಲ್ಲಿ ದೆಹಲಿ ಕರ್ನಾಟಕ ಸಂಘಕ್ಕೆ ವಿಶ್ವದ ಮಟ್ಟದಕ್ಕೆ ಎತ್ತರಕ್ಕೆ ತೆಗೆದುಕೊಂಡ ಹೋದ ಸಿಎಂ ನಾಗರಾಜ ಪ್ರಧಾನ ಮಂತ್ರಿಗಳನ್ನು ಕರೆತರಿಸಿ ಅಮೃತ ಮಹೋತ್ಸವ ಸಂದರ್ಭದಲ್ಲಿ ಎರಡು ಗಂಟೆ 10 ನಿಮಿಷ ದೆಹಲಿ ಕರ್ನಾಟಕ ಸಂಘಕ್ಕೆ ಸಮಯ ನೀಡಿ ಸರಿಸುಮಾರು ಕರ್ನಾಟಕದಿಂದ 3500 ಕಲಾವಿದರನ್ನು ಕರೆತರಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿಸಿದ ಕೀರ್ತಿ ಇವರದ್ದು.
ಸರಿ ಸುಮಾರು ನಾಲ್ಕೂವರೆ ಕೋಟಿ ಧನ ಸಹಾಯ, ಒಂದುವರೆ ಕೋಟಿ ಸಂಘದ ಖಾತೆಗೆ ಜಮಾ ಮಾಡಿ ಅಧ್ಯಕ್ಷರಾದಗಿನಿಂದಲೂ ಸಹ ಒಂದು ರೂಪಾಯಿಯೂ ಸಹ ಸಂಘದಿಂದ ತೆಗೆಯದೆ ಕೋಟ್ಯಾಂತರ ರೂಪಾಯಿ ಹೊರಗಡೆ ತಂದು ಧನ ಸಂಗ್ರಹಣ ಮಾಡಿ ರಾಷ್ಟ್ರ ರಾಜಧಾನಿಯಲ್ಲಿ ನಮ್ಮ ಕರ್ನಾಟಕದಿಂದ ಬರುವ ಮಕ್ಕಳಿಗೆ ಯುಪಿಎಸ್ಸಿ ಉನ್ನತ ಶಿಕ್ಷಣ ಮಕ್ಕಳಿಗೆ ವಸತಿ ಶಾಲೆ ಮಾಡಬೇಕೆಂಬುದು ಇವರ ಮನದಾಸೆ.
ಆದರೆ, ಇವರ ಚುನಾವಣೆ ಸಂದರ್ಭದಲ್ಲಿ ಇವರ ಬಗ್ಗೆ ಅತಿ ಹೆಚ್ಚು ಅಪಪ್ರಚಾರ ಮಾಡಿ ಅತಿ ಹೆಚ್ಚು ಜಾತಿ ರಾಜಕೀಯ ಅಸ್ತ್ರ ಬಳಸಿಕೊಂಡು ಇವರನ್ನು ಸೋಲಿಸಲು ಮೊದಲಿದ್ದ ಎಲ್ಲಾ ಅಧ್ಯಕ್ಷರುಗಳು ಪದಾಧಿಕಾರಿಗಳು ಒಂದಾದರೂ ಸಹ ಇವರು ಇವರನ್ನು ಸೋಲಿಸಲು ಸಾಧ್ಯವಾಗಲಿಲ್ಲ.
ಇವರ ಪಟ್ಟ ಶ್ರಮ ವಿಶ್ವಮಟ್ಟಕ್ಕೆ ಕರ್ನಾಟಕ ಸಂಘವನ್ನು ಪರಿಚಯಿಸಿದ ಕೀರ್ತಿ ಇವರನ್ನ ಮತ್ತೊಮ್ಮೆ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರನ್ನಾಗಿ ದೆಹಲಿ ಕನ್ನಡಿಗರು ಮಾಡಿದ್ದಾರೆ.ಇವರು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಹೋಬಳಿಯ ಚವರಮಂಗಳದ ಗ್ರಾಮದವರು.
ಇವರು ದೆಹಲಿ ಕನ್ನಡಿಗರಿಗೆ ತಮ್ಮ ಕುಟುಂಬಗಳಿಗಿಂತ ಚೆನ್ನಾಗಿ ನೋಡಿಕೊಂಡು ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಮಾರಕ ರೋಗ ಕರೋನಾ ಸಂದರ್ಭದಲ್ಲಿ ಎಲ್ಲರೂ ಭಯದಿಂದ ಒಳಗಡೆ ಇದ್ದರೆ ಅವರ ಅಂತ್ಯ ಸಂಸ್ಕಾರಗಳನ್ನು ಕೂಡ ಸ್ವತಹ ಇವರೇ ಮಾಡಿ ದೊಡ್ಡತನ ಮೆರೆದಿದ್ದಾರೆ.
ಇವರು ಯಾವುದೇ ಜಾತಿ ಮತ ಪ್ರಾಂತ್ಯ ಬಿಟ್ಟು ದೆಹಲಿಯಲ್ಲಿ ಎಲ್ಲಾ ಒಂದೇ ಜಾತಿ ಅದು ಕನ್ನಡ ಜಾತಿ ಎಂಬ ಒಂದು ಸ್ಲೋಗನ್ ದಿಂದ ಕೆಲಸ ಮಾಡುತ್ತಿರುವ ಇವರನ್ನ ಮತ್ತೊಮ್ಮೆ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಆಯ್ಕೆ ಮಾಡಿ ಇನ್ನು ಹೆಚ್ಚಿನ ಜವಾಬ್ದಾರಿಗಳು ನೀಡಿದ್ದಾರೆ.
ಕರ್ನಾಟಕ ಸಂಘದ ಚುನಾವಣೆ ಯಾವುದೇ ರಾಜಕೀಯ ಪಕ್ಷಗಳ ಚುನಾವಣೆಗಿಂತ ಹೆಚ್ಚು ಮೊಟ್ಟಮೊದಲಿಗೆ ದೆಹಲಿ ಕರ್ನಾಟಕ ಸಂಘದಲ್ಲಿ ನಡೆದಿದೆ.ಸೋಲಿಲ್ಲದ ಸರದಾರ ಸಿ.ಎಂ. ನಾಗರಾಜ್ ಸತತವಾಗಿ ಎಂಟನೇ ಬಾರಿ ಚುನಾವಣೆಯಲ್ಲಿಗೆ ಜಯಶೀಲರಾಗಿದ್ದಾರೆ.