ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ರಂಗಮಂದಿರ ಅವರಣದಲ್ಲಿ ವಸತಿ ಸಚಿವ ವಿ.ಸೋಮಣ್ಣ ಅವರ ಅಭಿವೃದ್ಧಿ ಕೆಲಸಗಳನ್ನು ಹಾಗೂ ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಮೆಚ್ಚಿ ಇಂದು ಭಾರತೀಯ ಜನತಾ ಪಕ್ಷವನ್ನು ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರಾದ ಡಾ||ಹೇಮಲತಾರವರು ಸಂಗಡಿಗರು ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಬಿ.ಜೆ.ಪಿ.ಪಕ್ಷಕ್ಕೆ ಸೇರ್ಪಡೆಯಾದರು..
ಸಚಿವರಾದ ವಿ.ಸೋಮಣ್ಣರವರು ಮಾತನಾಡಿ ದೇಶ ಅಭಿವೃದ್ದಿಯತ್ತ ಹೊಸ ಸಂದೇಶದೊಂದಿಗೆ ಭಾರತ ಭವಿಷ್ಯದತ್ತ ಪ್ರಧಾನಿ ನರೇಂದ್ರಮೋದಿರವರ ನೇತೃತ್ವದಲ್ಲಿ ಯಶ್ವಸಿಯಾಗಿ ಸಾಗುತ್ತಿದೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ 9ವರ್ಷಗಳ ಅಭಿವೃದ್ದಿ ಕಾಣದೇ ಹೋಗಿತ್ತು . ಅಪ್ಪ 15ವರ್ಷ ಮಗ 9ವರ್ಷ ಶಾಸಕರಾಗಿ ಮಾಡಿದ ಸಾಧನೆ ಏನು ಮಾಡಿದ್ದಾರೆ. ಕಳೆದ ನಾಲ್ಕು ಮೂಕ್ಕಾಲು ವರ್ಷದಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಅಭಿವೃದ್ದಿ ಪಥದತ್ತ ಸಾಗುತ್ತಿದೆ.
ಹಿಂದೂ, ಮುಸ್ಲಿಂ ಕ್ರಿಶ್ಚಿಯನ್ ಎಲ್ಲ ಧರ್ಮದವರು ಒಟ್ಟಾಗಿ ನಮ್ಮ ಕ್ಷೇತ್ರದಲ್ಲಿ ಬಾಳುತ್ತಿದ್ದಾರೆ. ಜನರಿಗೆ ದ್ರೋಹ ಮಾಡುವ ಕೆಲಸ ಮಾಡಬಾರದು .ರಾಜಕೀಯ ನಿಂತ ನೀರಲ್ಲ .ಅಧಿಕಾರ ಕೊಟ್ಟಗ ಜನ ಸೇವೆ ಮಾಡುವ ಕೆಲಸ ಮಾಡಬೇಕು. ನಾಲ್ಕು ಮೂಕ್ಕಲು ವರ್ಷ ನಮ್ಮ ಕ್ಷೇತ್ರದ ಅಭಿವೃದ್ದಿ ಸಾಧನೆ ಬಗ್ಗೆ ವಿರೋಧಿಗಳು ಬನ್ನಿ ಚರ್ಚೆ ಮಾಡೋಣ . ಕೊರೋನ ಸಾಂಕ್ರಮಿಕ ರೋಗ ಸಂದರ್ಭದಲ್ಲಿ ಎಲ್ಲಿ ಹೋಗಿದ್ದರು ಈ ಮಹಾನ್ ವ್ಯಕ್ತಿಗಳು ,ಸುಳ್ಳು ಹೇಳಿಕೊಂಡು, ಜನರಿಗೆ ಮೋಸ ಮಾಡುತ್ತಿದ್ದಾರೆ. ರಂಗನಾಥಸ್ವಾಮಿ ಭೂಕಬಳಿಕೆ ಮಾಡಿಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು.
ಬೆಂಗಳೂರು ನಿವಾಸಿಗಳಿಗೆ ಮೊನ್ನೆ 55ಸಾವಿರ ಮನೆಗಳನ್ನು ಹಸ್ತಾಂತರ ಮಾಡಲಾಯಿತು. 40ವರ್ಷ ರಾಜಕೀಯ ಜೀವನದಲ್ಲಿ ಬಡವರ,ಧ್ವನಿ ಇಲ್ಲದ ಜನರ ಸೇವೆ ಮಾಡಿದ್ದೇನೆ. ಶ್ರೀ ಶಿವಕುಮಾರ ಮಹಾಸ್ವಾಮೀಜಿ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿರವರ ಆಶೀರ್ವಾದದಿಂದ 305ಹಾಸಿಗೆಯ ಸಾಮರ್ಥದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಸವಿ ಸ್ಮರಣೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಪುನೀತ್ ರಾಜ್ ಕುಮಾರ್ ಸ್ಮರಣೆಯಲ್ಲಿ ಪಂತರಪಾಳ್ಯದಲ್ಲಿ ಆಸ್ಪತ್ರೆ ನಿರ್ಮಾಣ, 8ಕಿಲೋ ಮೀಟರ್ ಹೈಟೆನ್ಷನ್ ವಿದ್ಯುತ್ ತಂತಿಯನ್ನ ಭೂಗತ ಕೇಬಲ್ ಆಗಿ ಆಳವಡಿಸಲಾಗಿದೆ.
70ಕ್ಕೂ ಹೆಚ್ಚು ಕುಡಿಯುವ ನೀರಿನ ಘಟಕ, 57ದೇವಸ್ಥಾನ ಮತ್ತು ಉದ್ಯಾನವನ ನವೀಕರಣ ಮಾಡಲಾಗಿದೆ. ಚುನಾವಣೆ ಹತ್ತಿರ ಬರುತ್ತಿದೆ, ಹಣ ಹಂಚಿ ಸುಳ್ಳು ಹೇಳುವವರು ಬರುತ್ತಾರೆ 9ವರ್ಷದ ನಿಮ್ಮ ಸಾಧನೆ ಏನು ಎಂದು ಜನರು ಅವರನ್ನ ಹೇಳಬೇಕು. ಬಸವೇಶ್ವರ ಆದರ್ಶ ಸಿದ್ದಾಂತವನ್ನು ಆಳವಡಿಕೊಂಡು ಎಲ್ಲ ವರ್ಗ, ಧರ್ಮದವರು ಜೊತೆ ನಾನು ಬಾಳುತ್ತಿದ್ದೇನೆ ಎಂದು ಹೇಳಿದರು.
ರಾಜ್ಯ ಬಿ.ಜೆ.ಪಿ.ಯುವ ನಾಯಕ ಡಾ||ಅರುಣ್ ಸೋಮಣ್ಣ,ಗೋವಿಂದರಾಜನಗರ ಮಂಡಲ ಬಿ.ದೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಮೋಹನ್ ಕುಮಾರ್, ದಾಸೇಗೌಡ ಮತ್ತು ಬಿ.ಜೆ.ಪಿ.ಮುಖಂಡರುಗಳು ಪಾಲ್ಗೊಂಡಿದ್ದರು.
Leave a Review