ಬೆಂಗಳೂರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬೆAಗಳೂರಿನ ಉತ್ತರ ಪ್ರಾದೇಶಿಕ ಕಚೇರಿಯು ದೇವನಹಳ್ಳಿ ಶಾಖೆಯ ಸಹಯೋಗದೊಂದಿಗೆ ಹಣಕಾಸು
ಸೇರ್ಪಡೆ ಪರಿಪೂರ್ಣತೆಅಭಿಯಾನವನ್ನು ಅಂಬೇಡ್ಕರ್ ಭವನ್ ದಲ್ಲಿ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಈ ಕಾರ್ಯಕ್ರಮದಲ್ಲಿ ಪಿ ಎಮ್ ಜೆ ಡಿ ವೈ ಖಾತೆ ತೆರೆಯುವುದು , ಪ್ರಧಾನಮಂತ್ರಿ ಜೀವ ಜ್ಯೋತಿ ಬಿಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆಯಡಿ ನೋಂದಾಣಿ, ಖಾತೆದಾರರ ಮರು ಕೆ ವೈಸಿ, ಉಳಿತಾಯ ಖಾತೆಗಳಲ್ಲಿ ನಾಮನಿರ್ದೇಶನಗಳ ಬಗ್ಗೆ ಅವಶ್ಯಕ ಮಾಹಿತಿ ನೀಡಲಾಯಿತು. ಇದರ ಜೊತೆಗೆ ಡಿಜಿಟಲ್ ವಂಚನೆಗಳ ತಡೆಯುವಿಕೆಯ ಬಗ್ಗೆ ಜನರಲ್ಲಿ ಜಾಗ್ರತಿ
ಮೂಡಿಸಲಾಯಿತು. ಈ ಅಭಿಯಾನದಲ್ಲಿ ಸುಮಾರು ೫೦೦ ಕ್ಕೂ ಹೆಚ್ಚು ಗ್ರಾಹಕರು ಮತ್ತು ಜನರು ಭಾಗವಹಿಸಿ,ಯೋಜನೆ ಮತ್ತು ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು
ಪಡೆದುಕೊಂಡರು.
ಈ ಕಾರ್ಯಕ್ರಮದಲ್ಲಿ ಭಾರತೀಯ ರಿಜರ್ವ್ ಬ್ಯಾಂಕ್ ನ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಕಾಯಾ ತ್ರಿಪಾಠಿ, ಭಾರತೀಯ ರಿಜರ್ವ್ ಬ್ಯಾಂಕ್ ನ ಮಹಾಪ್ರಬಂಧಕರಾದ ಶ್ರೀಮತಿ ಮೀನಾಕ್ಷಿ ಗಂಜು, ಯೂನಿಯನ್ ಬ್ಯಾಂಕ್ ವಲಯ ಕಛೇರಿಯ ಮುಖ್ಯಸ್ಥರಾದ ಶ್ರೀ ಕಲ್ಯಾಣ್ ವರ್ಮ, ದೇವನಹಳ್ಳಿಯ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀ ರಾಕೇಶ್, ಭಾರತೀಯ ರಿಜರ್ವ್ ಬ್ಯಾಂಕ್ ನ ಉಪ ಮಹಾಪ್ರಬಂಧಕರಾದ ಶ್ರೀ ಅರುಣ್ ಕುಮಾರ್, ಯೂನಿಯನ್ ಬ್ಯಾಂಕ್ ಉತ್ತರ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರಾದ ಶ್ರೀ ಜಿ ರಾಮಪ್ರಸಾದ್ , ಹಾರೋಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸುಮಾದೇವಿ , ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಅಧಿಕಾರಿಗಳು,ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ನ ಪ್ರಾದೇಶಿಕ ಕಚೇರಿಯ ಮುಖ್ಯಸ್ಥರು ಉಪಸ್ಥಿತರಿದ್ದರು



