ಚಂದಾಪುರ: ಆನೇಕಲ್ ತಾಲ್ಲೂಕಿನ ಸಮಾಜ ಸುಧಾರಕ ಕಿತ್ತಗಾನಹಳ್ಳಿವಾಸು ಅವರ ಸೇವೆಗಳು ಚಿರಸ್ಮರಣೀಯ ಎಂಬುದಾಗಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಸ್ಮರಿಸಿಕೊಂಡರು ಅವರು ಸಮಾಜ ಸೇವಕರು ಹಾಗೂ ಬಿಜೆಪಿ ಮುಖಂಡರಾದ ದಿವಂಗತ ಕಿತ್ತಗಾನಹಳ್ಳಿ ವಾಸು ರವರ ಹುಟ್ಟು ಹಬ್ಬ ಅಂಗವಾಗಿ ಕಿತ್ತಗಾನಹಳ್ಳಿ ಗೇಟ್ ಬಳಿಯಲ್ಲಿ ಅನ್ನದಾಸೋಹ ಆಯೋಜನೆ ಮತ್ತು ಸಿಪಾನಿ ಸೇವಾ ಸದನದಲ್ಲಿ ಅನ್ನದಾಸೋಹ ಸೇರಿದಂತೆ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ವಾಸಣ್ಣ ಅಭಿಮಾನಿಗಳು ಹಮ್ಮಿಕೊಂಡಿದ್ದ ವಿವಿಧ ಸಮಾಜ ಮುಖಿಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದರು.
ಕಿತ್ತಗಾನಹಳ್ಳಿ ವಾಸು ಹೆಸರೇ ಒಂದು ಸ್ಪೂರ್ತಿಯಾಗಿತ್ತು. ಕಿತ್ತಗಾನಹಳ್ಳಿ ವಾಸು ರವರು ಬದುಕಿದ್ದ ಸಮಯದಲ್ಲಿ ಎಲ್ಲಾ ಜಾತಿಯ ಬಡವರಿಗೆ ಸಹಾಯವನ್ನು ಮಾಡಿದ್ದರು ಜೊತೆಗೆ ನಮ್ಮ ಮನೆಯ ಮಗನಾಗಿದ್ದ ಹಾಗೂ ಪಕ್ಷ ಸಂಘಟನೆಯಲ್ಲಿ ಮುಂದೆ ಇದ್ದ, ಕಿತ್ತಗಾನಹಳ್ಳಿ ವಾಸು ರವರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಅವರು ಹಾಕಿ ಕೊಟ್ಟ ಮಾರ್ಗದಲ್ಲಿಯೇ ನಾವೆಲ್ಲರೂ ಸಾಗೋಣ ಎಂದು ಸ್ಪೂರ್ತಿ ತುಂಬಿದರು.
ಅಣ್ಣನ ನೆನಪೇ ದಾರಿ ದೀಪ:- ಇನ್ನು ಕಾರ್ಯಕ್ರಮದ ನೇತೃತ್ವವನ್ನು ಕಿತ್ತಗಾನಹಳ್ಳಿ ಹಿತೇಂದ್ರ ಮಾತನಾಡಿ ನಮ್ಮ ವಾಸಣ್ಣ ಅವರು ಹಾಕಿಕೊಟ್ಟ ಮಾರ್ಗದರ್ಶನ ಮತ್ತು ಸಾಮಾಜಿಕ ಸೇವೆಗಳ ನೆನಪು ನಮಗೆ ಸದಾ ದಾರಿದೀಪಗಳಾಗಿವೆ ಆ ಬೆಳಕಿನಲ್ಲಿ ನಾವು ನಡೆದು ಪಾವನರಾಗಬೇಕು, ಇದೇ ಜನ್ಮ ಸಾರ್ಥಕ ಎಂದು ಸ್ಮರಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಕಿತ್ತಗಾನಹಳ್ಳಿ ಹರಿ ಪ್ರಸಾದ್, ನಾಗರಾಜ್ ಶೆಟ್ಟಿ, ಚಿಕ್ಕನಾಗಮಂಗಲ ಗುರು, ಚಿಂತಲಮಡಿವಾಳ ಶೇಖರ್, ಶೀತಲ್ ನಾರಾಯಣ ಸ್ವಾಮಿ, ಕೌಶಲ್ ನಾರಾಯಣಸ್ವಾಮಿ. ಶಿರಿಶಾ ನಾರಾಯಣಸ್ವಾಮಿ, ದನುಷ್ ಶ್ರೀನಿವಾಸ್ ಪ್ರಸಾದ್, ಭುವನ ಶ್ರೀನಿವಾಸ್ ಪ್ರಸಾದ್, ಆಟೋ ರಾಮಣ್ಣ, ವಿಶ್ವ, ಮದು, ರಾಮು, ಸುಜಿತ್, ಸಂತೋಷ್, ವೆಂಕಿ, ಮಂಜು, ವಿನೋದ್, ಶಾಂತರಾಜ್, ಶಶಿ, ರಂಜಿತ್, ಹೆಚ್.ಎ.ಎಲ್. ಕುಮಾರ್, ಹೆಚ್.ಎ.ಎಲ್. ನಾಗರಾಜ್, ಹೆಚ್.ಎ.ಎಲ್. ಮಂಜು. ಸರ್ಜಾಪುರ ಸತೀಸ್, ಬೊಮ್ಮಸಂದ್ರ ಅರುಣ್ ಕುಮಾರ್, ವೆಂಕಟೇಶ್, ಕೆ.ಎಂ.ರಾಜು. ಬಸವರಾಜ್, ಮಾಂತೇಶ್ ಸೋಮು ಪಾಟೀಲ್, ನಂದಕುಮಾರ್, ಮಹದೇವ್, ಹೊಸಹಳ್ಳಿ ರಾಜೇಶ್, ಅನಿಲ್ ಕುಮಾರ್ ಮತ್ತು ವಾಸಣ್ಣ ಅಭಿಮಾನಿಗಳು ಬಾಗವಹಿಸಿದ್ದರು.