ಕಳೆದ ಮೂರು ನಾಲ್ಕು ವರುಷಗಳಿಂದ ಹರಿದಾಸರ ಬಗ್ಗೆ ಚಲನಚಿತ್ರ ಬರ್ತಾ ಇವೆ. ಸಾಧಾರಣ 1960,1970 ರ ದಶಕದಲ್ಲಿ ದಾಸವರೇಣ್ಯರ ಚಿತ್ರ ಎಂದರೆ ಪುರಂದರದಾಸರ ಹಾಗೂ ಭಕ್ತ ಕನಕದಾಸರ ಚಿತ್ರ.
ಅದಾದ ನಂತರ ಮೂವತೈದು ವರ್ಷ ಹರಿದಾಸರ ಬಗ್ಗೆ ಒಂದೂ ಚಲನ ಚಿತ್ರ ಬರಲಿಲ್ಲ, ಬರಿ ಕಮರ್ಷಿಯಲ್ ಚಿತ್ರಗಲೇ ಬಂದವು. 2020 ರಲ್ಲಿ ಅತ್ಯಂತ ದೊಡ್ಡ ಕನಸನ್ನು ಹೊತ್ತು ಕೊಂಡು ಹರಿದಾಸರ ಚಿತ್ರಗಳನ್ನು ನಾನು ಯಾಕೆ ನಿರ್ಮಾಣ ಮಾಡಬಾರದು ಎಂದು ಬಂದವರು ಹೊಸಪೇಟೆ ಯ ಹವಾಲ್ದಾರ ಕುಟುಂಬ ದ ಕುಡಿ ಮಧುಸೂದನ ಹವಾಲ್ದಾರ.
ದೇಶ ವಿದೇಶಗಳಲ್ಲಿ ಈ ಎಲ್ಲಾ ಚಲನಚಿತ್ರ ಗಳು ಮಾನ್ಯತೆಯನ್ನು ಪಡೆದವು. ಮತಾಂಬುಜಾ ಮೂವೀಸ್ ತಾಯಿಯ ಹೆಸರಲ್ಲಿ ನಿರ್ಮಾಣ ಮಾಡಿ ತಾಯಿಯ ಕನಸನ್ನು ನನಸಾಗಿ ಮಾಡಿದ ಕೀರ್ತಿ ಗೆಳೆಯ ಮಧುಸೂದನ ಹವಾಲ್ದಾರ್ ಅವರಿಗೆ ಸಲ್ಲುತ್ತದೆ. ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ಜೊತೆಯಾದವರು ಎಲ್ಲಾ ದಾಸ ಸಾಹಿತ್ಯದ ಚಲನಚಿತ್ರ ಯಶಸ್ವಿಯಾಗಲು ಹಾಗೂ ನಿರ್ಮಾಣ ಮಾಡಲು ಸಹಕರಿಸಿದವರು ರಾಯಚೂರಿನ ರಾಜಕಾರಣಿ, ಪತ್ರಕರ್ತ, ಸಮಾಜ ಸೇವಕ ತ್ರಿವಿಕ್ರಮ ಜೋಶಿ. ಇವರು ನಿರ್ಮಾಣದ ಜೊತೆಗೆ ನಟನಾ ಕ್ಷೇತ್ರಕ್ಕೂ ಕೂಡ ಕೈ ಹಾಕಿ ವೀಕ್ಷಕರ ಅಭಿಮಾನಕ್ಕೆ ಪಾತ್ರರಾದರು ಶ್ರೀ ವಿಜಯದಾಸರ ಪಾತ್ರದಲ್ಲಿ ಮಿಂಚಿದರು.