ಮಂಗಳೂರು: ಯುನೀಕ್ ಮಾಸ್ಟರ್ಸ್ ಮತ್ತು ಜುತಿಕಾ ತಂಡಗಳು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಬ್ರಿಜ್ ಚಾಂಪಿಯನ್ಷಿಪ್ನ ಸಿಲ್ವರ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದವು.
ಭಾರತ ಬ್ರಿಜ್ ಫೆಡರೇಷನ್ ಮತ್ತು ಕರ್ನಾಟಕ ರಾಜ್ಯ ಬ್ರಿಜ್ ಸಂಸ್ಥೆಗಳು ಕರಾವಳಿ ಬ್ರಿಜ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿರುವ ಚಾಂಪಿಯನ್ಷಿಪ್ನ ಕ್ವಾರ್ಟರ್ ಫೈನಲ್ನಲ್ಲಿ ಅದು 141-116ರಲ್ಲಿ ಧಂಪುರ್ ಲೆಗಸಿ ವಿರುದ್ಧ ಗೆಲುವು ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಅನ್ಪ್ರೆಡಿಕ್ಟಬಲ್ ಎದುರು ಜುತಿಕಾ 133-126ರಲ್ಲಿ ಜಯ ಸಾಧಿಸಿತು. ಜೈ ಜಗನ್ನಾಥ್ ವಿರುದ್ಧ ಹೆಕ್ಸಗನ್ 114-112ರಲ್ಲಿ ಮತ್ತು ಅಲ್ಫಾ ಏಸ್ ವಿರುದ್ಧ ಏಸ್ ಕಾನ್ಕರರ್ಸ್ 127-76ರಲ್ಲಿ ಗೆದ್ದಿತು.
ಸೆಮಿಫೈನಲ್ಗೆ ಮೇವರಿಕ್ಸ್: ಗೋಲ್ಡ್ ವಿಭಾಗದಲ್ಲಿ ಮೇವರಿಕ್ಸ್ ಸೆಮಿಫೈನಲ್ ಪ್ರವೇಶಿಸಿದೆ. ಕ್ವಾರ್ಟರ್ ಫೈನಲ್ನಲ್ಲಿ ಈ ತಂಡ ಶ್ರೀ ರಾಧೇ ವಿರುದ್ಧ ಜಯ ಸಾಧಿಸಿತು. ಶ್ರೀ ಸಿಮೆಂಟ್ ವಿರುದ್ಧ ಫಾರ್ಮಿಡೇಬಲ್ಸ್, ಫೆನೆಸ್ತಾ ವಿರುದ್ಧ ಮೋನಿಕಾ ಜಾಜೂ, ಸರ್ಲಾ ಫೈಬರ್ಸ್ ಎದುರು ಡಿಯೊರಾಸ್ ಡೆಕ್ಕಾಂಡ್ಸ್ ಗೆದ್ದಿತು.