ಹೊಸಕೋಟೆ: ನಗರದ ಪ್ರತಿಷ್ಠಿತ ಸಿಟಿಜನ್ ಪ್ರೌಢಶಾಲೆಯಲ್ಲಿ ವಿಶಿಷ್ಟವಾದ ವಿಜ್ಞಾನ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಎಲ್ಲರಿಗೂ ಆರೋಗ್ಯ ಎಂಬ ಪರಿಕಲ್ಪನೆಯೊಂದಿಗೆ ಸಾಂಪ್ರದಾಯಿಕ ಆಹಾರ ಸೇವನೆಗೆ ಬಳಸಬೇಕಾದ ಸಾಮಗ್ರಿಗಳು ಬಗ್ಗೆ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಯೋಗ ಪ್ರದರ್ಶನ, ನಗುವಿನಿಂದ ಆರೋಗ್ಯ ಬಗ್ಗೆ ಚಿತ್ರಪ್ರದರ್ಶನ ಸಹ ಏರ್ಪಡಿಸಲಾಗಿತ್ತು.
ವಿದ್ಯಾರ್ಥಿಗಳಿಗೆ ಪಠ್ಯಾಭ್ಯಾಸದೊಂ ದಿಗೆ ವಿಷಯಗಳ ಬಗ್ಗೆ ಪ್ರಾತ್ಯಕ್ಷಿಕವಾಗಿ ಹಾಗೂ ಪರಿಣಾಮಕಾರಿಯಾಗಿ ಅರ್ಥೈಸಿಕೊಳ್ಳಲು ಇಂತಹ ವಸ್ತುಪ್ರದರ್ಶನಗಳು ಸಹಕಾರಿಯಾಗಿವೆ. ಶಾಲೆಯಲ್ಲಿ ಪ್ರತಿವರ್ಷವೂ ಕಲಿಕೆಗೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ.
ಇದರಿಂದ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನವೂ ಸಹ ವೃದ್ಧಿಗೊಳ್ಳಲು ಸಾಧ್ಯವಾಗುತ್ತಿದೆ. ಈ ಬಾರಿ ಸರ್ವರಿಗೂ ಆರೋಗ್ಯ ಎಂಬ ವಿಷಯವನ್ನು ಅಳವಡಿಸಿಕೊಂಡು ಪೋಷಕರಿಗೆ, ವೀಕ್ಷಕರಿಗೆ ಅರಿವು ಮೂಡಿಸಲಾಗಿದೆ ಎಂದು ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಎಜಾಜುಲ್ಲಾ ಖಾನ್ ತಿಳಿಸಿದರು.
ವಸ್ತುಪ್ರದರ್ಶನವನ್ನು ವೀಕ್ಷಿಸಿದ ಪೋಷಕರು ವಿದ್ಯಾರ್ಥಿಗಳ ಪರಿಣಾಮಕಾರಿಯಾಗಿ ನಿರೂಪಣೆ ಮಾಡಿದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಶಾಲೆಯ ಆಡಳಿತಾಧಿಕಾರಿ ಜರೀನಾ ಬೇಗಂ, ಪ್ರಿನ್ಸಿಪಾಲ್ ಲಾವಣ್ಯ ಸಿಂಬು, sಸಂಯೋಜಕರಾದ ಅಯಿಷಾ ಫಾತಿಮಾ ಮತ್ತು ಸುಜಾ ದೀಪಕ್, ಶಿಕ್ಷಕರು ಭಾಗವಹಿಸಿದ್ದರು.