ಕೆಂಗೇರಿ : ಬಹು ನಿರೀಕ್ಷಿತ ಕುಂಬಳಗೋಡು ಗ್ರಾಮ ಪಂಚಾಯತಿಗೆ ಕಂಬೀಪುರದ ಪಿ ಅಶ್ವಿನಿ ಅದ್ಯಕ್ಷೆ ಯಾಗಿ ಮತ್ತು ಕುಂಬಳಗೋಡಿನ ವೆಂಕಟೇಗೌಡ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಐವತ್ತು ಸದಸ್ಯ ಬಲವನ್ನು ಹೊಂದಿರುವ ಗ್ರಾಮ ಪಂಚಾಯತಿಯಲ್ಲಿ ನಿಕಟಪೂರ್ವ ಕುಂಬಳಗೋಡು ಗ್ರಾಮ ಪಂಚಾಯತಿ ಅದ್ಯಕ್ಷೆ ಯಾಗಿದ್ದ ರಂಜಿತ ಮತ್ತು ಉಪಾಧ್ಯಕ್ಷ ರಾಗಿದ್ದ ನರಸಿಂಹಮೂರ್ತಿ ಇವರ ರಾಜೀನಾಮೆಯಿಂದ ತೆರವಾಗಿದ ಸ್ಥಾನಕ್ಕೆ ಬಿಇಓ ರಾಜಶೇಖರ್ ಚುನಾವಣಾಧಿಕಾರಿಯಾಗಿ ಭಾಗವಹಿದ ಸಂದರ್ಭದಲ್ಲಿ ಇತರೆ ಯಾರು ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಪಿ ಅಶ್ವಿನಿ ಅದ್ಯಕ್ಷೆ ಯಾಗಿ ವೆಂಕಟೇಗೌಡ ಉಪಾಧ್ಯಕ್ಷ ರಾಗಿ ಅವರೋಧ ಆಯ್ಕೆಯನ್ನು ಘೋಷಿಸಿದರು.
ನಂತರ ಪತ್ರಿಕೆಯೂಂದಿದೆ ಮಾತನಾಡಿದ ಪಿ ಅಶ್ವಿನಿ ಅವರು ಕುಂಬಳಗೋಡು ಗ್ರಾಮ ಪಂಚಾಯತಿ ಬೆಂಗಳೂರು ದಕ್ಷಿಣ ತಾಲ್ಲೂಕು ಪಂಚಾಯತಯಲ್ಲಿ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ಗ್ರಾಮ ಪಂಚಾಯತಿ ಯಾಗಿದೆ ಇಲ್ಲಿ ನಾಗರೀಕ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಕಷ್ಟ ಅದರೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗು ಸಹಕಾರ ಸಚಿವರಾದ ಎಸ್ ಟಿ ಸೋಮಶೇಖರ್ ರವರ ವಿಶೇಷವಾದ ಕಾಳಜಿಯಿಂದ ಕುಂಬಳಗೋಡು ಗ್ರಾಮ ಪಂಚಾಯತಿಯಲ್ಲಿ ಶೇಕಡಾ 90 ರಷ್ಟು ಅಭಿವೃದ್ಧಿ ಕಾಮಗಾರಿಯು ನಡೆದಿದ್ದು ಉಳಿದ ಕಾಮಗಾರಿಯನ್ನು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಮತ್ತು ನಿಕಟಪೂರ್ವ ಕುಂಬಳಗೋಡು ಗ್ರಾಮ ಪಂಚಾಯತಿ ಅದ್ಯಕ್ಷ ಚಿಕ್ಕರಾಜು ಮತ್ತು ಗ್ರಾಮದ ಹಿರಿಯ ಸಲಹೆ ಮತ್ತು ಸೂಚನೆ ಮೇರೆಗೆ ಕೆಲಸವನ್ನು ನಿರ್ವಹಿಸಲಾಗುತ್ತದೆ ಎಂದು ತಿಳಿಸಿದರು.
ನಂತರ ಮಾತನಾಡಿದ ಉಪಾಧ್ಯಕ್ಷ ವೆಂಕಟೇಗೌಡ ಹಲವಾರು ವರ್ಷಗಳಿಂದ ಕುಂಬಳಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ವಾಸವಿದ್ದು ಸ್ಥಳೀಯ ಸಮಸ್ಯೆಗಳು ನನ್ನ ಗಮನದಲ್ಲಿಟ್ಟುಕೊಂಡು ಮಾನ್ಯ ಶಾಸಕರು ಹಾಗು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ರವರ ಮಾರ್ಗದರ್ಶನದಲ್ಲಿ ಹಾಗು ಕುಂಬಳಗೋಡು ಗ್ರಾಮದ ಹಿರಿಯರ ಮಾರ್ಗದರ್ಶನದಲ್ಲಿ ಇನ್ನು ಹೆಚ್ಚು ಅಭಿವೃದ್ಧಿ ಕಾಮಗಾರಿಯನ್ನು ನಡೆಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗು ಸಹಕಾರ ಸಚಿವರಾದ ಎಸ್ ಟಿ ಸೋಮಶೇಖರ್ ಅವರು ನೂತನವಾಗಿ ಅಯ್ಕೆಯಾದ ಪಿ ಅಶ್ವಿನಿ ಮತ್ತು ಉಪಾಧ್ಯಕ್ಷ ವೆಂಕಟೇಗೌಡ ಇವರನ್ನು ಅಭಿನಂದಿಸಿದರು ನಿಕಟಪೂರ್ವ ಕುಂಬಳಗೋಡು ಗ್ರಾಮ ಪಂಚಾಯತಿ ಅದ್ಯಕ್ಷ ಚಿಕ್ಕರಾಜು ನಿಕಟಪೂರ್ವ ಉಪಾಧ್ಯಕ್ಷ ನರಸಿಂಹಮೂರ್ತಿ ಬಿಜೆಪಿ ಹಿರಿಯ ಮುಖಂಡ ಬಿ ಕೃಷ್ಣಪ್ಪ ಅಭಿನಂಧಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಮಣ್ಣಿನಮಗ ರಾಮಕೃಷ್ಣ ದೇವರಾಜು ಯಶೋಧಮ್ಮ ಗೋಪಾಲಕೃಷ್ಣ ಮುಖಂಡ ಕೆ ನಂಜೇಗೌಡ ಅನೀಶ್ ಧರ್ಮಯ್ಯ ಶ್ರೀನಿವಾಸ್ ಸೇರಿದಂತೆ ಹಲವಾರು ಮುಖಂಡರು ಮತ್ತು ಕುಂಬಳಗೋಡು ಗ್ರಾಪಂ ಎಲ್ಲಾ ಸದಸ್ಯರು ಭಾಗವಹಿಸಿ ಅಭಿನಂದಿಸಿದೆರು. ಈ ಸಂದರ್ಭದಲ್ಲಿ ಕುಂಬಳಗೋಡು ಗ್ರಾಮ ಪಂಚಾಯತಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಸವರಾಜ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Leave a Review