ಯಲಹಂಕ. ಸದಾ ಒಂದುಲ್ಲೊಂದು ಕಾರ್ಯಕ್ರಮದ ಮೂಲಕ ಸದ್ದು ಮಾಡುವ ಹುಸ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಾ. ಬಿ ರಮೇಶ್ ವಿಶೇಷ ಮಕ್ಕಳ ಗ್ರಾಮ ಸಭೆಯ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಸರ್ಕಾರದ ಆದೇಶದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿ ವರ್ಷವೂ ಮಕ್ಕಳ ಹಕ್ಕುಗಳ ಮಾಸಾಚರಣೆ ಪ್ರಯುಕ್ತ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಂದು ದಿನ ಮಕ್ಕಳ ಗ್ರಾಮ ಸಭೆ ಏರ್ಪಡಿಸಬೇಕಾಗಿರುತ್ತದೆ. ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುಸ್ಕೂರು ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ಹುಸ್ಕೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ವಿಭಿನ್ನ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಮಕ್ಕಳ ಸಂರಕ್ಷಣೆಯ ಹಕ್ಕು, ಸವಲತ್ತುಗಳು,ವ್ಯವಸ್ಥೆಯ ಹಕ್ಕು ಮತ್ತು ಕುಂದು ಕೊರತೆಗಳನ್ನುಹೇಳಿಕೊಳ್ಳುವ ಹಾಗೂ ತಮ್ಮ ಬಗ್ಗೆ ತೀರ್ಮಾನಿಸುವ ವಿಷಯಗಳ ಬಗ್ಗೆ ಚರ್ಚಿಸುವ ಸಲುವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿತ್ತು.
ಹುಸ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಂಪಾಳ್ಯ, ಹುಸ್ಕೂರು, ಪಿಳ್ಳಹಳ್ಳಿ,ವಡೆರಹಳ್ಳಿ,ಬೆತ್ತನಗೆರೆ, ಮತ್ತಹಳ್ಳಿ, ತೊರೆನಾಗ
ಸಂದ್ರ ಹೊನ್ನಸಂದ್ರ, ಗ್ರಾಮಗಳ ಸರ್ಕಾರಿ ಶಾಲಾ ಮಕ್ಕಳು ಗ್ರಾಮ ಸಭೆಯಲ್ಲಿ ಭಾಗವಹಿಸಿ ವಿಜ್ಞಾನ ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಭಾಷಣ ಪ್ರಶ್ನೋತ್ತರ ಹೀಗೆ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು,
ಮಕ್ಕಳ ಶೈಕ್ಷಣಿಕ ಕುಂದು ಕೊರತೆಗಳ ವಿಚಾರವನ್ನು ಚರ್ಚಿಸಲಾಗಿ ಸ್ಥಳದಲ್ಲಿ ಅಧ್ಯಕ್ಷ ಡಾ. ಬಿಆರ್ ರಮೇಶ್ ಪರಿಹಾರ ಒದಗಿಸಿದರು.
ಮಕ್ಕಳ ಗ್ರಾಮ ಸಭೆಯ ಅಣುಕು ಪ್ರದರ್ಶನಮಕ್ಕಳೇ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಕರಾದ ಹನುಮಂತ ರಾಯಪ್ಪ ಹುಸ್ಕೂರು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧ್ಯಕ್ಷ ಡಾಕ್ಟರ್ ಬಿ ರಮೇಶ ರವರ ಕಾರ್ಯವನ್ನು ಮುಕ್ತ ಕಂಠದಿಂದ ಹಾಡಿ ಹೊಗಳಿದರು ಸೈದಾಮಿ ಪಾಳ್ಯ ರಮೇಶ್ ಅಧ್ಯಕ್ಷರಾದ ಮೇಲೆ ಸರ್ಕಾರಿ ಶಾಲೆಗಳಿಗೆ ಬರಪೂರ ಕೊಡುಗೆಗಳನ್ನು ನೀಡುತ್ತಿದ್ದಾರೆ.
ಕುಡಿಯುವ ನೀರಿನ ಫಿಲ್ಟರ್, ಪರೀಕ್ಷಾ ಕಿಟ್, ಆಟದ ಸಾಮಗ್ರಿಗಳು, ಪುಸ್ತಕಗಳು, ಕುರ್ಚಿ ಬೆಂಚು, ಟಿವಿ, ಕಂಪ್ಯೂಟರ್, ಹೀಗೆ ಕೇಳಿದ ಎಲ್ಲವನ್ನೂ ನೀಡುತ್ತಿರುವ ಕಾಮಧೇನು ಬಹುಶಃ ಕರ್ನಾಟಕದಲ್ಲಿ ಅತಿ ಹೆಚ್ಚು ಅನುದಾನವನ್ನು ನೀಡಿರುವ ಪಂಚಾಯಿತಿ ಹುಸ್ಕೂರು ಗ್ರಾಮ ಪಂಚಾಯಿತಿ ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಮೂರು ಲಕ್ಷ ರೂಪಾಯಿ ವಿದ್ಯಾರ್ಥಿವೇತನವನ್ನು ಎಸ್ ಸಿ ಎಸ್ ಟಿ ಸಮುದಾಯದ ಎಲ್ಲ ಮಕ್ಕಳಿಗೂ ಹಾಗೂ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಧ್ಯಕ್ಷ ಡಾಕ್ಟರ್ ಬಿ ರಮೇಶ್ ಚೆಕ್ ಮೂಲಕ ವಿತರಿಸಿದರು.ಈ ವಿಶೇಷ ಗ್ರಾಮ ಸಭೆಯನ್ನು ಉದ್ದೇಶಿಸಿ ಅಧ್ಯಕ್ಷೀಯ ಭಾಷಣ ಮಾಡಿದ ಅಧ್ಯಕ್ಷ ಸೈದಾಮಿ ಪಾಳ್ಯ ಡಾ. ಬಿ ರಮೇಶ್ ಸರ್ಕಾರದ ಆದೇಶದಂತೆ ಮಕ್ಕಳ ಗ್ರಾಮ ಸಭೆಯನ್ನು ಆಯೋಜಿಸಿದ್ದೇವೆ.
ಮಕ್ಕಳ ಹಕ್ಕುಗಳು ಮತ್ತು ಅವರ ಬದ್ಧತೆಯನ್ನು ಪ್ರತಿಪಾದಿಸಲು ಒಂದು ವೇದಿಕೆಯನ್ನು ಕಲ್ಪಿಸಲಾಗಿದೆ ನಾನು ಅಧಿಕಾರಕ್ಕೆ ಬಂದಾಗಿಂದಲೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿದ್ದು ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಕಾರ್ಯನಿರ್ವಹಿಸಲು ಬೇಕಾದ ಎಲ್ಲ ಸವಲತ್ತುಗಳನ್ನು ನೀಡುತ್ತಿದ್ದೇನೆ ಎಂದರು.
ಈ ವಿಭಿನ್ನ ಸಭೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್ ಆರ್ ರಾಜೇಶ್ ಗ್ರಾ.ಪಂ.ಉಪಾಧ್ಯಕ್ಷರಾದ ಕೆಂಪಮ್ಮ,ಸದಸ್ಯರಾದ ಅನ್ನಪೂರ್ಣ,ಭಾಗ್ಯಮ್ಮ, ಮಂಜುನಾಥ್, ಲೋಕೇಶ್, ನಾಗರತ್ನಮ್ಮ, ರಮೇಶ್ , ಅಂಬಿಕಾ, ಕುಸುಮ, ನಾಗರಾಜು, ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.