ಬೇತಮಂಗಲ: ಹೋಬಳಿಯಾದ್ಯಂತ ಸಂಭವಿಸಿದ ಏಕಾಏಕಿ ಗುಡುಗು, ಸಿಡಿಲು ಹಾಗೂ ಭಾರಿ ಗಾಳಿ ಮಳೆಗೆ ರೈತರ ಬದುಕು ದುಸ್ತರವಾಗಿದೆ. ಅಂಕತಟ್ಟಹಳ್ಳಿ ಗ್ರಾಮದ ಯುವ ರೈತ ವಿನೋದ್ ಅವರಿಗೆ ಸೇರಿದ ಸೇವಂತಿ ಹೂವಿನ ತೋಟ ಸಂಪೂರ್ಣವಾಗಿ ನೆಲಕ್ಕೆ ಉರುಳಿದ್ದು, ಲಕ್ಷಾಂತರ ರೂಪಾಯಿ ಹಾನಿಯಾಗಿದೆ.
ಕೆಜಿಎಫ್ ತಾಲೂಕಿನ ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕತಟ್ಟಹಳ್ಳಿ ಗ್ರಾಮದ ಯುವ ರೈತ ವಿನೋದ್ ಅವರಿಗೆ ಸೇರಿದ ಸೇವಂತಿ ಹೂವಿನ ತೋಟ ಸಂಪೂರ್ಣವಾಗಿ ನೆಲಕ್ಕೆ ಉರುಳಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ: ಕಳೆದ ಎರಡು-ಮೂರು ತಿಂಗಳಿನಿAದ ಹಗಲಿರುಳು ಶ್ರಮಿಸಿ, ಹೂವಿನ ಬೆಳೆಯನ್ನೇ ನಂಬಿಕೊAಡಿದ್ದ ವಿನೋದ್ ಅವರು ಲಕ್ಷಾಂತರ ರೂಪಾಯಿ ಸಾಲ ಮಾಡಿ ಈ ತೋಟವನ್ನು ಬೆಳೆಸಿದ್ದರು. ಹೂವು ಕಟಾವಿಗೆ ಬಂದು ಆರ್ಥಿಕ ಚೇತರಿಕೆಯ ನಿರೀಕ್ಷೆಯಲ್ಲಿದ್ದ ಸಂದರ್ಭದಲ್ಲೇ ಪ್ರಕೃತಿ ವಿಕೋಪ ಅಪ್ಪಳಿಸಿದೆ.
ರಭಸವಾಗಿ ಬೀಸಿದ ಗಾಳಿಗೆ ಗಿಡಗಳು ಬುಡಸಮೇತ ವಾಲಿ ಹಾನಿಗೀಡಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತ ವಿನೋದ್ ಕಣ್ಣೀರು ಹಾಕಿದ್ದಾರೆ.
15 ಲಕ್ಷಕ್ಕೂ ಅಧಿಕ ನಷ್ಟದ ಅಂದಾಜು: ಸುಮಾರು 12 ರಿಂದ 15 ಲಕ್ಷ ರೂಪಾಯಿಗಳಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಮಾಡಿದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆಯಲ್ಲಿ ರೈತ ಕುಟುಂಬ ಕಂಗಾಲಾಗಿದೆ.
ವೈಜ್ಞಾನಿಕ ಪದ್ಧತಿ ಅಳವಡಿಕೆ: ಯುವ ರೈತ ವಿನೋದ್ ಅವರು ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು ಮೇಸು ಹಾಗೂ ಕಬ್ಬಿಣದ ಶೇಡ್ ನಿರ್ಮಿಸಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೇಸಿಗೆಯ ಬಿಸಿಲಿನಲ್ಲೂ ಲೆಕ್ಕಿಸದೆ ಹೂವಿನ ಬೆಳೆ ಬೆಳೆದಿದ್ದರು, ಅಂದರೆ ಪ್ರಕೃತಿಯ ವಿಕೋಪದಿಂದ ಸಂಪೂರ್ಣವಾಗಿ ಹಾಳಾಗಿದೆ.
ಅಧಿಕಾರಿಗಳ ಭೇಟಿಗೆ ಗ್ರಾಮಸ್ಥರ ಆಗ್ರಹ: ಘಟನಾ ಸ್ಥಳಕ್ಕೆ ಸಂಬAಧಪಟ್ಟ ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ತಕ್ಷಣ ಭೇಟಿ ನೀಡಬೇಕು. ಹಾನಿಯ ಬಗ್ಗೆ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ, ಸರ್ಕಾರದಿಂದ ಸೂಕ್ತ ಪರಿಹಾರವನ್ನು ಕಲ್ಪಿಸಿಕೊಡುವ ಮೂಲಕ ಸಂಕಷ್ಟದಲ್ಲಿರುವ ರೈತನ ನೆರವಿಗೆ ಧಾವಿಸಬೇಕು ಎಂದು ಗ್ರಾಮಸ್ಥರಾದ ಅಂಬರೀಷ್ ಹಾಗೂ ವಿವೇಕ್ ಒತ್ತಾಯಿಸಿದ್ದಾರೆ.
ಅಕಾಲಿಕ ಗಾಳಿ ಮಳೆ ಆರ್ಭಟ: ನೆಲಕಚ್ಚಿದ ಸೇವಂತಿ ತೋಟ, ರೈತ ಕಂಗಾಲು



