ಚಳ್ಳಕೆರೆ: ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿಯ ಕೊರ್ಲಕುಂಟೆ ಗ್ರಾಮದಲ್ಲಿ ಪದವಿಪೂರ್ವ ಕಾಲೇಜ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲು. ಚಳ್ಳಕೆರೆ ಶಾಸಕ ಟಿ.ರಘುಮೂರ್ತಿಗೆ ಮನವಿ ಮಾಡಿದ ಗ್ರಾಮದ ಮುಖಂಡ ಹಾಗೂ ಕನ್ನಡ ರಕ್ಷಣಾ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೊರ್ಲಕುಂಟೆ ತಿಪ್ಪೇಸ್ವಾಮಿ.
ತಾಲೂಕಿನ ಆಂಧ್ರ ಗಡಿ ಭಾಗದ ಕೊನೆ ಗ್ರಾಮ ಕೊರ್ಲಕುಂಟೆ ಗ್ರಾಮವು ಅತ್ಯಂತ ಹಿಂದುಳಿದ ಗ್ರಾಮವಾಗಿದ್ದು. ಈ ಗ್ರಾಮದಲ್ಲಿ ವಿವಿಧ ಸಮುದಾಯಗಳು ಸೇರಿ ಸುಮಾರು 3000 ಜನಸಂಖ್ಯೆ ಇದ್ದು. ಬಹುತೇಕರು ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಜನರೇ ಹೆಚ್ಚಾಗಿದ್ದು.
ಈ ಗ್ರಾಮದಲ್ಲಿ ಆರೋಗ್ಯ ಹಾಗೂ ಶೈಕ್ಷಣಿಕವಾಗಿ ಜನರು ಹಿಂದುಳಿದಿದ್ದು. ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಇದ್ದು. ಈ ಪ್ರೌಢಶಾಲೆಯಲ್ಲಿ ಪದವಿಪೂರ್ವ ಕಾಲೇಜು ಹಾಗೂ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸ ಬೇಕೆಂದು. ಮತ್ತು ಕೊರ್ಲಕುಂಟೆ ಗ್ರಾಮದಲ್ಲಿ ಕಾಲೇಜ್ ಸ್ಥಾಪನೆಯಿಂದ. ಬಡಗಡ್ಡೆ ಪುರ್ಲಹಳ್ಳಿ,ವೃಂದಾವನ ಹಳ್ಳಿ, ಪುಟ್ಲಾರಹಳ್ಳಿ, ಬೊಮ್ಮನಕುಂಟೆ ಸುತ್ತಮುತ್ತಲ ಹಳ್ಳಿಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.
ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲು. ರಿ.ಸ.ನಂಬರ್ 21ರಲ್ಲಿ 5 ಎಕರೆ ಸರ್ಕಾರಿ ಗೋಮಾಳ ಜಮೀನು ಇದ್ದು. ಕೊರಳಕುಂಟೆಯಲ್ಲಿ ಆರೋಗ್ಯ ಕೇಂದ್ರ ಸ್ಥಾಪನೆಯಿಂದ ಕೊರ್ಲಕುಂಟೆ ಸೇರಿ ಸುತ್ತ ಮುತ್ತಲ ಗ್ರಾಮಗಳ ಸುಮಾರು 7000 ಸಾವಿರ ಬಡ ಕುಟುಂಬಗಳಿಗೆ ಆರೋಗ್ಯ ರಕ್ಷಣೆಗೆ ಅನುಕೂಲ ವಾಗುತ್ತದೆ.
ಪರುಶುರಾಂಪುರ ಹೋಬಳಿಯ ಜಾಜೂರು, ದೊಡ್ಡಚಲ್ಲೂರು ಗ್ರಾಮಗಳಲ್ಲಿ ಪಿ ಎಚ್ ಸಿ ಆರೋಗ್ಯ ಕೇಂದ್ರಗಳಿದ್ದು. ಆರೋಗ್ಯ ಕೇಂದ್ರಗಳು ಕೊರ್ಲಕುಂಟೆ ಯಿಂದ ಸುಮಾರು ಹದಿನೈದು ಕಿಲೋಮೀಟರ್ ದೂರ ಇದ್ದು. ಆದ್ದರಿಂದ ಕೊರ್ಲಕುಂಟೆ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಬೇಕೆಂದು. ಮಾಜಿ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಕನ್ನಡ ರಕ್ಷಣಾ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೊರ್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.