ಚಂದಾಪುರ: ಸಂಚಾರ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ಬೀದಿ ಬದಿ ವ್ಯಾಪಾರಿಗಳ ಹಿತ ರಕ್ಷಣೆಗಯೇ ನಮ್ಮ ಮುಖ್ಯ ಉದ್ದೇಶವಾಗಿದೆ ಎಂಬುದಾಗಿ ಮುಖ್ಯಾಧಿಕಾರಿ ಶ್ರೀನಿವಾಸ್ ತಿಳಿಸಿದರು.
ಚಂದಾಪುರ ಪುರಸಭೆ ವತಿಯಿಂದ ಚಂದಾಪುರದ ಅನ್ನಪೂಣೇಶ್ವರಿ ಕಲ್ಯಾಣ ಮಂಟಪದ ಆವರಣದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸಂಬಂದಿಸಿ ಸಮಸ್ಯೆಗಳನ್ನು ಆಲಿಸಲು ತುರ್ತು ಸಭೆಯನ್ನು ಕರೆಯಲಾಗಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಶಾಂತಿ ಮತ್ತು ಸುವ್ಯವಸ್ಥೆ ಪಾಲನೆ:
ಸೂರ್ಯ ಸಿಟಿ ಪೊಲೀಸ್ ಸಹಕಾರ ಹಾಗೂ ನಮ್ಮ ಪುರಾಭೆಯ ಸಹಯೋಗದೊಂದಿಗೆ ಚಂದಾಪುರದ ಸಂತೆಯ ವೃತ್ತದಲ್ಲಿ ಹಾಗೂ ಪ್ರಮುಖ ರಸ್ತೆಯಲ್ಲಿ ಸಂಚಾರ ದಟ್ಟಣೆ ಹಾಗೂ ಟ್ರಾಫಿಲ್ ಜಾಮ್ ಆಗಿ ಸಾರ್ವಜನಿಕರಿಂದ ದೂರುಗಳು ಬಂದಿವೆ ಇದನ್ನು ಸೂಕ್ತವಾದ ರೀತಿಯಲ್ಲಿ ಪರಿಹರಿಸಲು ರಸ್ತೆ ಬದಿಯಲ್ಲಿ ಅವ್ಯವಸ್ಥಿತವಾಗಿ ಹಾಕಿಕೊಂಡಿರುವ ಅಂಗಡಿಗಳನ್ನು ತೆರವುಗೊಳಿಸಿ,
ಸೂಕ್ತ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸ್ಥಳ ಅವಕಾಶವನ್ನು ಮಾಡಲಾಗಿದೆ ಇದರ ಬಗ್ಗೆ ನಿಗಧಿತ ಸ್ಥಳ ಪತ್ರವನ್ನು ನೀಡಲಾಗುತ್ತದೆ ದಯವಿಟ್ಟು ಶಿಸ್ತುಬದ್ಧ ಹಾಗೂ ನಿಯಮ ಪಾಲನೆ ಮಾಡಿ ಯಾವುದೇ ರೀತಿಯಲ್ಲಿ ತೊಂದರೆಗಳು ಆಗದಂತೆ ತಾವೆಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಇನ್ನು ತುರ್ತು ಸಭೆಯಲ್ಲಿ ಬೀದಿ ವ್ಯಾಪಾರಿಗಳು ತಮ್ಮ ತಮ್ಮ ಸಮಸ್ಯೆಗಳನ್ನು ಅದಿಕಾರಿಗಳ ಮುಂದೆ ಹೇಳಿಕೊಂಡ ದೃಶ್ಯ ಕಂಡು ಬಂತು.ಹಿರಿಯ ಕಂದಾಯ ಅಧಿಕಾರಿ ಸುಧಾಕರ್ ಮಾತನಾಡಿ ಬೀದಿ ಬದಿ ವ್ಯಾಪಾರಿಗಳು ಹಲವು ಸಮಸೆಗಳನ್ನು ತಿಳಿಸಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸುಧಾರಣೆ ತಂದು ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಇನ್ನು ತುರ್ತು ಸಭೆಯಲ್ಲಿ ಚಂದಾಪುರ ಪುರಸಭೆ ಮುಖ್ಯಾದಿಕಾರಿ ಶ್ರೀನಿವಾಸ್, ಆರ್,ಓ ಸುದಾಕರ್, ಜಿಲ್ಲಾ ನೋಡಲ್ ಅದಿಕಾರಿ ನರಸಿಂಹಯ್ಯ, ಇಂಜಿಯರ್ ಆದರ್ಶ್, ಪ್ರಥಮ ದರ್ಜೇ ಸಹಾಯಕರಾದ ಮಂಜುಳ, ಬೀದಿ ವ್ಯಾಪಾರಿಗಳ ಸಂಘದ ಹೀಲಲಿಗೆ ನಂಜಪ್ಪ, ರುಕ್ಕಮ್ಮ, ಸುನೀಲ್ ಮತ್ತು ಬೀದಿ ಬದಿ ವ್ಯಾಪಾರಿಗಳು ಬಾಗವಹಿಸಿದ್ದರು.