ಬೆಂಗಳೂರು: ಬೆಂಗಳೂರಿನ 60 ಖಾಸಗಿ ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಕರೆ ಪ್ರಕರಣವು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹಾಗೂ ಹೆಚ್ಚುವರಿ ಆಯುಕ್ತ (ಪಶ್ಚಿಮ)ಎನ್. ಸತೀಶ್ ಕುಮಾರ್ ನೇತೃತ್ವದಲ್ಲಿ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ಆರೋಪಿ- ಗಳು ಬಳಸಲಾದ ಇ-ಮೇಲ್ಐಡಿ ನಕಲು ಎಂಬುದು ಪತ್ತೆಯಾಗಿದೆ. ಕೃತ್ಯ ಎಸಗಲೆಂದೆ ಆರೋಪಿಗಳು ನಕಲಿ ಐಡಿ ರಚಿಸಿದ್ದಾರೆ.
ನುರಿತ ಸೈಬರ್ ಪೊಲೀಸ್ ಅಧಿಕಾರಿಗಳು ಹಾಗೂ ಸೈಬರ್ ತಜ್ಞರು, ಈ ಹಿಂದೆ ಬಂದಿದ್ದ ಹುಸಿ ಬಾಂಬ್ ಇ-ಮೇಲ್ಗಳನ್ನೂ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.ಪದೇ ಪದೇ ನಡೆಯುತ್ತಿರುವ ಈ ಕೃತ್ಯದ ಹಿಂದಿರುವ ದುಷ್ಕರ್ಮಿಗಳ್ಯಾರು ಕೃತ್ಯದ ಹಿಂದಿನ ಅಸಲಿ ಕಾರಣವೇನು ಶಾಲೆಗಳನ್ನೇ ಟಾರ್ಗೆಟ್ ಮಾಡಿ ಇ-ಮೇಲ್ ಕಳುಹಿಸುತ್ತಿರುವ ಹಿಂದಿನ ಉದ್ದೇಶವೇನು ಈ ಕೃತ್ಯಕ್ಕೆ ಇ-ಮೇಲ್ ಬಳಸುತ್ತಿರುವ ಆ ದುಷ್ಕರ್ಮಿ ಯಾರು ಎಂದು ಹಲವು ಆಯಾಮಗಳಲ್ಲಿ ತನಿಖೆ ಕೈಕೊಂಡಿದ್ದಾರೆ.
ದುಷ್ಕರ್ಮಿಯು ವಚ್ರ್ಯುಯಲ್ ಪ್ರವೇಟ್ ನೆಟ್ವರ್ಕ್ (ವಿಪಿಎನ್) ಬಳಸಿ ಇ-ಮೇಲ್ ಸಂದೇಶಗಳ ಕಳುಹಿಸಿದ್ದಾರೆ. ಹೀಗಾಗಿ ಪೊಲೀಸರು ದುಷ್ಕರ್ಮಿಗಳು ಬಳಸಿದ ಕಂಪ್ಯೂಟರ್, ಸೈಬರ್ ಕೆಫೆ ಅಥವಾ ಲ್ಯಾಪ್ ಟಾಪ್ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಿಡಿಗೇಡಿ ದೂರದ ದೇಶದ ನೆಟ್ವರ್ಕ್ ಬಳಸಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.