ಬೆಂಗಳೂರು: ಗೋವಿಂದರಾಜನಗರ ನನ್ನ ಕರ್ಮಭೂಮಿ. ಕಳೆದ 45 ವರ್ಷಗಳಿಂದ ನನ್ನ ರಾಜಕಾರಣದಲ್ಲಿ ಯಶ್ವಸಿಯಾಗಲು ಕಾರಣವಾದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಗೋವಿಂದರಾಜನಗರ ಚಂದ್ರಲೇಔಟ್, ನಾಗರಭಾವಿ ಆಟದ ಮೈದಾನದಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ನನ್ನ ರಾಜಕೀಯ ಜೀವನ ತೆರದ ಪುಸ್ತಕದಂತೆ. ಬಡವರ, ಧ್ವನಿ ಇಲ್ಲದ ಜನರ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ. ಕ್ಷೇತ್ರದ ಜನರನ್ನ ಎಲ್ಲರನ್ನ ಒಂದೇ ರೀತಿಯಲ್ಲಿ ಕಂಡಿದ್ದೇನೆ. ಕಾಂಗ್ರೆಸ್ ಪಕ್ಷದವರು ಷಡ್ಯಂತ್ರ ರಾಜಕೀಯ ಮಾಡುತ್ತಿದ್ದಾರೆ. ಸೋಮಣ್ಣನ್ನ ನಂಬಿದವರನ್ನ ಎಂದು ಕೈಬಿಟ್ಟಿಲ್ಲ, ಕೊವಿಡ್ ಸಾಂಕ್ರಮಿಕ ಸಂದರ್ಭದಲ್ಲಿ ಜನರ ನಡುವೆ ಕೆಲಸ ಮಾಡಿಲಾಯಿತು. ಆದರೆ ವಿರೋಧ ಪಕ್ಷದವರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.
ಆಕ್ಷಿಜನ್,ದಿನಸಿ, ಹಾಲು ಮತ್ತು ಔಷಧಿ ಜನರಿಗೆ ಕೊವಿಡ್ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ನೀಡಿತು. ರಸ್ತೆ, ಕುಡಿಯುವ ನೀರು, ದೇವಸ್ಥಾನ, ಪಾರ್ಕ್ ಗಳ ಸಂಪೂರ್ಣ ಅಭಿವೃದ್ದಿ ಪಡಿಸಲಾಗಿದೆ. 100ಶುದ್ದ ಕುಡಿಯವ ನೀರಿನ ಘಟಕ, 57ಉದ್ಯಾನವನಗಳು, 22ಸರ್ಕಾರಿ ಶಾಲೆ ಅಭಿವೃದ್ದಿ ಹಾಗೂ ದಾಸರಹಳ್ಳಿ ಮತ್ತು ಪಂತರಪಾಳ್ಯದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು. ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ, ವೆಸ್ಟ್ ಆಫ್ ಕಾರ್ಡ್ ರಸ್ತೆ ಮೇಲು ಸೇತುವೆ ಸಾಲು, ಸಾಲು ಅಭಿವೃದ್ದಿ ಕೆಲಸ ಮಾಡಲಾಗಿದೆ.
ಮತದಾರ ಕೊಟ್ಟ ಒಂದು ಮತ ಇಷ್ಟು ಅಭಿವೃದ್ದಿ ಪಡಿಸಲಾಗಿದೆ. ಬಡವ, ಬಡವನಾಗಿ ಜೀವನ ಸಾಗಿಸಬಾರದು, ಅವರ ಆರ್ಥಿಕವಾಗಿ ಸಬಲರಾಗಿ ಸಮಾಜದ ಮುಖ್ಯವಾಹಿನಿಗೆ ತರಬೇಕು.ನಮ್ಮ ಕ್ಷೇತ್ರದ ಮತದಾರ ಸ್ವಾಭಿಮಾನಿಗಳು. ಎಲ್ಲ ವರ್ಗದ ಸಾಮಾನ್ಯ ಕಾರ್ಯಕರ್ತನಿಗೆ ಪಾಲಿಕೆ ಸದಸ್ಯನಾಗಿ ಮಾಡಿದ್ದೇನೆ ಮತ್ತು ಮಹಿಳಾ ಮೇಯರ್ ಆಗಿ ಈ ಕ್ಷೇತ್ರದಿಂದ ಆಯ್ಕೆ ಮಾಡಲಾಯಿತು. ಶ್ರೀ ಶಿವಕುಮಾರ ಸ್ವಾಮೀಜಿಗಳು, ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಆಶೀರ್ವಾದದ ಫಲದಿಂದ ಜನಸೇವೆ ಮಾಡಿದ್ದೇನೆ.
ಬೆಂಗಳೂರುನಗರ ಅಭಿವೃದ್ದಿಗೆ ಬಸವರಾಜ್ ಬೊಮ್ಮಾಯಿ ಸರ್ಕಾರ 8000ಕೋಟಿ ಅನುದಾನ ನೀಡಿದ್ದಾರೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರಮೋದಿ ಮತ್ತು ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರ ಮತ್ತೋಮ್ಮೆ ಮುಖ್ಯಮಂತ್ರಿಯಾಗಬೇಕು ಎಂದರು.
ದಾಸರಹಳ್ಳಿ ವಾರ್ಡ್ ಕಾಂಗ್ರೆಸ್ ಪಕ್ಷದ ಮುಖಂಡ ಕಿಟ್ಟಿರವರು ನೂರಾರು ಬೆಂಬಲಿಗರ ಜೊತೆಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯರವರು, ತೋಟಗಾರಿಕೆ ಸಚಿವರಾದ ಮುನಿರತ್ನ, ವಿಧಾನಪರಿಷತ್ ಸದಸ್ಯರಾದ ಅ.ದೇವೇಗೌಡ, ಮಾಜಿ ವಿಧಾನಪರಿಷತ್ ಸದಸ್ಯರಾದ ಅಶ್ವಥ್ ನಾರಾಯಣ್, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಎನ್.ಆರ್.ರಮೇಶ್ ರವರು, ರಾಜ್ಯ ಬಿಜೆಪಿ ಯುವ ಮುಖಂಡರಾದ ಡಾ.ಅರುಣ್ ಸೋಮಣ್ಣ, ಮಂಡಲದ ಅಧ್ಯಕ್ಷರಾದ ವಿಶ್ವನಾಥಗೌಡರು ಉದ್ಘಾಟನೆ ನೇರವೆರಿಸಿದರು.
ಗೋವಿಂದರಾಜನಗರ ಚುನಾವಣಾ ಉಸ್ತುವಾರಿಗಳಾದ ಸೋಮಶೇಖರ್,ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಮೋಹನ್ ಕುಮಾರ್, ಕೆ.ಉಮೇಶ್ ಶೆಟ್ಟಿ, ದಾಸೇಗೌಡ, ಶ್ರೀಮತಿ ರೂಪಲಿಂಗೇಶ್ವರ್, ಪಲ್ಲವಿ ಚನ್ನಪ್ಪ, ರಾಮಪ್ಪ, ಗಂಗಭೈರಯ್ಯ, ಜಯರತ್ನರವರು ಭಾಗವಹಿಸಿದ್ದರು.
Leave a Review