ಮಕಾಯ್ (ಆಸ್ಟೆçÃಲಿಯಾ): ಇಲ್ಲಿನ ಗ್ರೇಟ್ ಬ್ಯಾರಿಯರ್ ರೀಫ್ ಅರೇನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟೆçÃಲಿಯಾ ನಡುವಿನ ೧೯ ವರ್ಷದೊಳಗಿನವರ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ, ಭಾರತದ ಸಿಡಿಲಮರಿ ಎನಿಸಿರುವ ವೈಭವ್ ಸೂರ್ಯವಂಶಿಯವರು ಅಂಪೈರ್ ಅವರ ತಪುö್ಪ ನಿರ್ಧಾರದಿಂದಾಗಿ ಕೇವಲ ೨೦ ರನ್ ಗಳಿಗೆ ಔಟಾಗುವಂತಾಗಿದೆ!
ಈ ಸಂದರ್ಭದಲ್ಲಿ ತೀವ್ರ ಹತಾಶೆಗಳಗಾದ ಅವರು, ಅಂಪೈರ್ ಅವರನ್ನು ತಾವು ನಾಟೌಟ್ ಎಂದು ಪರಿಪರಿಯಾಗಿ ಬೇಡಿ ಕೊಂಡಿದ್ದಾರೆ. ಅದಕ್ಕೆಅಂಪೈರ್ ಸೊಪುö್ಪ ಹಾಕದಿದ್ದಕ್ಕೆ ಅಂಪೈರ್ ಮೇಲೆ ಹತಾಶರಾಗಿದ್ದಾರೆ ಆ ಹದಿಹರೆಯದ ಹುಡುಗ. ಈ ಘಟನೆ ನಡೆದಿದ್ದು ಪಂದ್ಯದಲ್ಲಿ ಭಾರತದ ಮೊದಲನೇ ಇನಿಂಗ್ಸ್ ವೇಳೆ. ಇನಿಂಗ್ಸ್ ಆರಂಭಿಸಿದ ವಿಹಾನ್ ಮಲ್ಹೋತ್ರಾ ಅವರು ಔಟಾದಾಗ ಕ್ರೀಸ್ ಗೆ ಇಳಿದಿದ್ದ ವೈಭವ್ ಸೂರ್ಯವಂಶಿ, ಕ್ರೀಸ್ ನಲ್ಲಿದ್ದ ಮತ್ತೊಬ್ಬ ಆರಂಭಿಕ
ಆಯುಶ್ ಮ್ಹಾತ್ರೆ ಅವರ ಜೊತೆಗೆ ಇನಿಂಗ್ಸ್ ಕಟ್ಟಲು ಸಿದ್ದವಾಗಿದ್ದರು. ಮೊದಲ ಪಂದ್ಯದಲ್ಲಿ ಕೇವಲ ೮೪ ಎಸೆತಗಳಲ್ಲಿ ೧೧೩ ರನ್ ಬಾರಿಸಿದ್ದ ವೈಭವ್
ಸೂರ್ಯವಂಶಿ ಅವರು ಈ ಇನಿಂಗ್ಸ್ ನಲ್ಲೂ ಅದ್ಭುತ ಪ್ರದರ್ಶನಕ್ಕೆ ಸಜ್ಜಾಗಿದ್ದರು. ಇನಿಂಗ್ಸ್ ಆರಂಭದಿAದಲೇ ಸಿ ಡಿ ಲ ಬ ್ಬ g À z À ಬ್ಯಾಟಿಂಗ್ ಆಡುತ್ತಾ
ವೈಯಕ್ತಿಕವಾಗಿ ೨೦ ರನ್ ಪೇರಿಸಿದ್ದರಷ್ಟೇ.
ಆಗ, ಇನಿಂಗ್ಸ್ ನ ೭ನೇ ಓವರ್ ನ ೪ನೇ ಎಸೆತದಲ್ಲಿ ಸೂರ್ಯವಂಶಿ ಅವರು ಚಾರ್ಲ್್ಸ ಲ್ಯಾಚ್ಮುಂಡ್ ಅವರ ಎಸೆತದಲ್ಲಿ ವಿಕೆಟ್ ಕೀಪರ್ ಲೀ ಯಂಗ್ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದರು. ಅಂಪೈರ್ ಕೂಡ ಔಟ್ ಕೊಟ್ಟುಬಿಟ್ಟರು. ಆದರೆ, ನಿಜವಾಗಿಯೂ ಅವರು ಔಟಾಗಿರಲಿಲ್ಲ. ಚೆಂಡು ಅವರ ಬ್ಯಾಟ್ ಗೆ ಕನೆಕ್ಟ್ ಆಗಿರಲಿಲ್ಲ. ಚೆಂಡಿಗೂ ಬ್ಯಾಟಿಗೂ ಗ್ಯಾಪ್ ಇತ್ತು. ಅದನ್ನು ತಪ್ಪಾಗಿ ಅರ್ಥೆÊಸಿ ಅಂಪೈರ್ ಔಟ್ ಕೊಟ್ಟಿದ್ದರು. ಇದನ್ನು ಅಂಪೈರ್ ಅವರಿಗೆ ಪರಿಪರಿಯಾಗಿ ವೈಭವ್ ಅವರು ವಿವರಿಸಿದರೂ ಅಂಪೈರ್ ಅವರ ಮಾತನ್ನು ಕೇಳಲಿಲ್ಲ.
ಇದರಿಂದ ಸಿಟ್ಟಿಗೆದ್ದ ಯುವಕ ಸೂರ್ಯವಂಶಿ, ಅಂಪೈರ್ ಅವರ ತೀರ್ಮಾನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಆ ಇಪ್ಪತ್ತು ರನ್ ಗಳನ್ನು ೧೪ ಎಸೆತಗಳಲ್ಲೇ ಗಳಿಸಿದ್ದರು. ಅದರಲ್ಲಿ ಎರಡು ಬೌಂಡರಿ, ಒಂದು ಸಿಕ್ಸರ್ ಇತ್ತು. ಟೆಲಿವಿಷನ್ ರಿಪ್ಲೆöÊ ಗಳಲ್ಲಿ ಚೆಂಡು ಅವರ ಬ್ಯಾಟಿಗೆ ತಾಕಿರಲಿಲ್ಲ. ಆದರೂ, ಆಸೀಸ್ ಗಳ ಅಪೀಲು ಬಂದ ಕೂಡಲೇ ಅಂಪೈರ್ ತರಾತುರಿಯಲ್ಲಿ ತಮ್ಮ ತೋರು ಬೆರಳೆತ್ತಿ ಔಟ್ ಕೊಟ್ಟುಬಿಟ್ಟಿದ್ದರು. ಸೂರ್ಯವಂಶಿ ಹೇಳಿದ್ದೇ ಸರಿಯಾಗಿತ್ತು.