ರೈಸಿಂಗ್ ಏಷ್ಯಾ ಕಪ್ ಟೂರ್ನಿಯಲ್ಲಿ ಅದ್ಭುತ ಫಾರ್ಮ್ ನಲ್ಲಿರುವ ೧೪ರ ಹರೆಯದ ಬಾಲಕ ವೈಭವ್ ಸೂರ್ಯವಂಶಿ ಅವರನ್ನು ಸೂಪರ್ ಓವರ್ ನಲ್ಲಿ ಬ್ಯಾಟಿಂಗ್ ಗೆ ಕಳಿಸದ
ಭಾರತ ಎ ತಂಡ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಎ ತಂಡದ ವಿರುದ್ಧ ಆಘಾತಕಾರಿ ಸೋಲನುಭವಿಸಿದೆ. ತಂಡದಬ ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ಇದೀಗ ಜಿತೇಶ್ ಶರ್ಮಾ ಅವರು ಹೊತ್ತುಕೊಂಡಿದ್ದಾರೆ. ಸೂಪರ್ ಓವರ್ ನಲ್ಲಿ ಚೆನ್ನಾಗಿ ಆಡುವ ವೈಭವ್ ಸೂರ್ಯವಂಶಿ ಅವರು ಡೆತ್ ಓವರ್ ಗಳಲ್ಲಿ ಸೂಕ್ತರಲ್ಲ ಎಂಬ ಕಾರಣಕ್ಕೆ ಅನುಭವಿಗಳನ್ನು
ಬ್ಯಾಟಿಂಗ್ ಇಳಿಸಲಾಯಿತು ಎಂದು ಜಿತೇಶ್ ಶರ್ಮಾ ಈ ಬಗ್ಗೆ ಪಂದ್ಯದ ಬಳಿಕ ಮಾತನಾಡಿದ್ದ ಅವರು, ವೈಭವ್ ಸೂರ್ಯವಂಶಿ ಅವರನ್ನು ಸೂಪರ್ ಓವರ್ಗೆ ಕಳುಹಿಸದಿರುವ ನಿರ್ಧಾರ ತಂಡದ್ದಾಗಿತ್ತು ಎಂದು ಸ್ಪಷ್ಟಪಡಿಸಿದರು. “ವೈಭವ್ ಮತ್ತು ಪ್ರಿಯಾಂಶ್ ಆರ್ಯ ಪವರ್ಪ್ಲೇನಲ್ಲಿಮಾಸ್ಟರ್ಗಳು, ಆದರೆ ಡೆತ್ ಓವರ್ಗಳಲ್ಲಿ, ನಾನು, ಆಶು ಮತ್ತು ರಾಮನ್ ದೊಡ್ಡ ಹೊಡೆತಗಳನ್ನು ಬಾರಿಸಬಲ್ಲವರು. ಹೀಗಾಗಿ ವೈಭವ್ ಅವರನ್ನು ಕಳಿಸದಿರುವ ನಿರ್ಧಾರ ತಂಡದ್ದಾಗಿತ್ತು” ಎಂದು ಅವರು ಹೇಳಿದರು.
ನಮಗೆಲ್ಲರಿಗೂ ಪಾಠ ಎಂದ ಜಿತೇಶ್ “ಹಿರಿಯ ಆಟಗಾರನಾಗಿ, ನಾನು ಪಂದ್ಯವನ್ನು ಮುಗಿಸಬೇಕಿತ್ತು. ಈ ಸೋಲಿನ ಜವಾಬ್ದಾರಿಯನ್ನು ನಾನು ಸಂಪೂರ್ಣವಾಗಿ ತೆಗೆದುಕೊಳ್ಳುತ್ತೇನೆ. ಇದು ನಾವೆಲ್ಲರಿಗೂ ಕಲಿಯಬೇಕಾದ ಒಂದು ಪಾಠ. ತಂಡದಲ್ಲಿ ಪ್ರತಿಭೆ ಇದೆ, ಆದರೆ ಯುವ ಆಟಗಾರರು ಕೊನೆಯ ಓವರ್ಗಳಲ್ಲಿ ಒತ್ತಡವನ್ನು ನಿಭಾಯಿಸುವುದನ್ನು ಕಲಿಯಬೇಕು” ಎಂದು ಅವರು ಹೇಳಿದರು. ಸೂಪರ್ ಓವರ್ ಬ್ಲಂಡರ್ ಪಂದ್ಯ ಸೂಪರ್ ಓವರ್ ಕಂಡಾಗ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಅವರನ್ನು ಕಣಕ್ಕಿಳಿಸದಿರುವುದು ಅತ್ಯಂತ
ದುಬಾರಿಯಾಯಿತು. ಅವರು ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮತ್ತು ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರಾಗಿದ್ದರು. ಅವರನ್ನು ಹೊರಗಿಟ್ಟುನಾಯಕ ಜಿತೇಶ್, ರಾಮದೀಪ್ ಸಿಂಗ್ ಮತ್ತು ಆಶುತೋಷ್ ಶರ್ಮಾ ಅವರನ್ನು ಸೂಪರ್ ಓವರ್ಗೆ ಕಳುಹಿಸುವ ತಂಡದ ನಿರ್ಧಾರ ಕೈಗೂಡಲಿಲ್ಲ. ಬಾಂಗ್ಲಾದೇಶದ ವೇಗಿ ರಿಪಾನ್ ಮೊಂಡಲ್ ಅವರ ಅತ್ಯುತ್ತಮ ಯಾರ್ಕರ್ ಗೆ ಜಿತೇಶ್ ಬೌಲ್ಡ್ ಆದರು ಮುಂದಿನ ಎಸೆತದಲ್ಲೇ ಆಶುತೋಷ್ ಅವರನ್ನು ಮೊಂಡಲ್ ಕ್ಯಾಚ್ ಔಟ್ ಮಾಡಿದರು. ಇದರಿಂದಾಗಿ ಭಾರತ ಎ ತಂಡ ಸೂಪರ್ ಓವರ್ನಲ್ಲಿ ಯಾವುದೇ ರನ್ ಗಳಿಸಲಾಗದೆ ಸೋಲೊಪ್ಪಬೇಕಾಯಿತು.



