ಮೇಲುಕೋಟೆ: ಚೆಲುವನಾರಾಯಣಸ್ವಾಮಿಯ ವೈರಮುಡಿ ಬ್ರಹ್ಮೊತ್ಸವದ “ಬ್ರಹ್ಮಮಹಾರಥ’ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದಲಕ್ಷಾಂತರಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ಶ್ರಿದೇವಿ-ಭೂದೇವಿ ಕಲ್ಯಾಣ ನಾಯಕಿಯರೊಡನೆ ರಥಾರೂಡನಾದ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದು ರಥಕ್ಕೆ ಹಣ್ಣು ದವನ ಎಸೆದು ಸಂಭ್ರಮಿಸಿದರು. ರಥೋತ್ಸವಕ್ಕೂ ಮುನ್ನ ನಡೆದ ಉತ್ಸವದಲ್ಲಿ ಮೇಲುಕೋಟೆ ಶಾಸಕ ದರ್ಶನ್ಪುಟ್ಟಣ್ಣಯ್ಯ ಭಾಗವಹಿಸಿದ್ದರು. ವೈರಮುಡಿ ಜಾತ್ರಾಮಹೋತ್ಸವದ 7ನೇ ತಿರುನಾಳ್ ಅಂಗವಾಗಿ ನಡೆದ ಮಹಾರಥಕ್ಕೆ ಮದ್ಯಾಹ್ನ ಶುಭ ವೃಷಭ ಲಗ್ನಕೂಡಿದ 12-30ರ ವೇಳೆಗೆ ಜಿಲ್ಲಾ ಉಸ್ತುವಾರಿ ಸಚಿವರ ಪುತ್ರ ಹಾಗೂ ಮಂಡ್ಯ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸಚಿನ್ ಚೆಲುವರಾಯಸ್ವಾಮಿ ಅಪರಜಿಲ್ಲಾಧಿಕಾರಿ ಶಿವಾನಂದಮೂರ್ತಿ ಮತ್ತಿತರ ಅಧಿಕಾರಿ ಗಳು ತೆಂಗಿನಕಾಯಿ ಒಡೆದು ಚೈನ್ಎಳೆಯುವ ಮೂಲಕ ಚಾಲನೆ ನೀಡಿದರು. ರಥೋತ್ಸವ ಚಾಲನೆಯ ವೇಳೆ ಆಕಾಶದಲ್ಲಿ ಕಾಣಿಸಿಕೊಂಡ ಗರುಡಪಕ್ಷಿಗಳು ಪ್ರದಕ್ಷಿಣೆ ಹಾಕಿದ್ದು ಭಕ್ತರಲ್ಲಿ ಸಂಭ್ರಮೋಲ್ಲಾಸ ಉಂಟುಮಾಡಿ ಶುಭಸೂಚನೆ ನೀಡಿತು
ಭಕ್ತರ ಜಯಘೋಷದೊಂದಿಗೆ ಮಾರಿಗುಡಿಬೀದಿ, ರಾಜಬೀದಿಗಳಲ್ಲಿ ಸಾಗಿದ ಮಹಾರಥ1-40ರ ವೇಳೆಗೆ ದೇವಾಲಯದ ರಾಜಗೋಪುರದ ಬಳಿನೆಲೆನಿಂತಿತು. ಅಲ್ಲಿ ದೇವಾಲಯದಿಂದ ಪೂಜೆ ನೆರವೇರಿದ ನಂತರ ವಾನಮಾಮಲೈ ಬೀದಿ ರಥದ ಬೀದಿಯಲ್ಲಿ ಸಾಗಿದ ಬೃಹತ್ರಥ 3-00ರ ವೇಳೆಗೆ ಸ್ವಸ್ಥಾನವಾದ ರಥದಮಂಟಪಕ್ಕೆ ತಲುಪಿತು. ದೇವಾಲಯದ ಶ್ರೀಪಾದದವರು, ಬಂಡೀಕಾರರು, ಗ್ರಾಮದ ಯುವಕರು ಮಹಾರಥ ಸಗುಮ ಚಾಲನೆಗೆ ಶ್ರಮಿಸಿ ರಥೋತ್ಸವ ಯಶಸ್ವಿಗೊಳಿಸಿದರು. ಮಹಾರಥೋತ್ಸವದಲ್ಲಿ ಪಾಂಡವಪುರ ಉಪವಿಬಾಗಾಧಿಕಾರಿ ಶ್ರೀನಿವಾಸ್ ತಹಶೀಲ್ದಾರ್ ಬಸವರಾಜ ರೆಡ್ಡಪ್ಪ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪರಮೇಶ್ಗೌಡ, ಮತ್ತು ಸದಸ್ಯರು ದೇವಾಲಯದ ಶೀಲಾ ಶಾಸಕರ ಸಹೋದರ ರಾಘವಪ್ರಕಾಶ್ಇದ್ದರು. ಪಾರುಪತ್ತೇಗಾರರಾದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ. ಎಂಎನ್ ಪಾರ್ಥಸಾರಥಿ ರಥೋತ್ಸವದ ಯಶಸ್ಸಿಗೆ ಶ್ರಮಿಸಿದ್ದರು. ಮಾಜಿ ಸಚಿವರಾದ ಸಿ.ಎಸ್ ಪುಟ್ಟರಾಜು ಸಹ ಆಗಮಿಸಿ ದೇವರದರ್ಶನ ಪಡೆದರು.
ಇದಕ್ಕೂ ಬೆಳಿಗ್ಗೆ 6ಗಂಟೆಗೆ ಮಹಾರಥೋತ್ಸವ ಕಾರ್ಯಕ್ರಮಗಳು ಆರಂಭವಾದ ನಂತರ 8-30 ಗಂಟೆಯವೇಳೆಗೆ ರಥಬಲಿಪೂರೈಸಿ ನಂತರ ಯಾತ್ರಾದಾನ ಕೈಗೊಳ್ಳಲಾಯಿತು. ರಾಮಾನುಜಾಚಾರ್ಯರೊಂದಿಗೆ ಶ್ರೀದೇವಿ ಭೂದೇವಿ ಕಲ್ಯಾಣನಾಯಕಿ ಅಮ್ಮನವರೊಂದಿಗೆ ವಜ್ರಖಚಿತ ರಾಜಮುಡಿ ಧರಿಸಿದ ಚೆಲುವನಾರಾಯಣಸ್ವಾಮಿಯ ಉತ್ಸವ ವಿಶೇಷಮಂಗಳವಾದ್ಯ ಹಾಗೂ ವೇದಘೋಷದೊಂದಿಗೆ ರಥದ ಮಂಟಪದ ಬಳಿಗೆ ಸಾಗಿ ಮೂರು ಪ್ರದಕ್ಷಿಣೆ ಹಾಕಿ ಮಹೂರ್ತಪಠಣೆಯ ನಂತರ ರಥಾರೋಹಣನಡೆಯಿತು. ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕವೇದಿಕೆ ವತಿಯಿಂದ ಯತಿರಾಜದಾಸರ್ ಗುರುಪೀಠದಿಂದ ನಡೆಯುತ್ತಿರುವ 11ನೇ ವರ್ಷದ ನಾದೋಪಾಸನಸೇವೆಯಡಿ ವಿದ್ವಾನ್ ಆನಂದಕುಮಾರ್ ತಂಡ ವಿಶೇಷ ನಾದಸ್ವರ ಕೈಂಕರ್ಯ ನಡೆಸಿದರು. ಮಹಾರಥೋತ್ಸವದಲ್ಲಿ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿ ಮೇಲುಕೊಟೆಯ ಪ್ರಮುಖಬೀದಿಗಳಲ್ಲಿ ರಥದರ್ಶನಕ್ಕೆ ಕಾಯುತ್ತಿದ್ದ ದೃಶ್ಯಕಂಡು ಬಂತು ಸರ್ಕಲ್ ಇನ್ಸ್ಪೆಕ್ಟರ್ ಶರತ್ ಕುಮಾರ್ ಮಾರ್ಗದರ್ಶನದಲ್ಲಿ ಪೊಲೀಸರು ಭದ್ರತೆ ನೀಡಿದ್ದರು.
ಗಮನ ಸೆಳೆದ ಬಾಳೆಹಣ್ಣಿನ ಮೇಲೆ ಬರೆದ ಪ್ರಾರ್ಥನೆ ಎರಡು ಹೆಣ್ಣುಮಕ್ಕಳಿರುವ ನಮ್ಮ ತಂದೆತಾಯಿಯನ್ನು ಕಾಪಾಡು ಭಗವಂತ ಎಂದು ಹೆಣ್ಣುಮಗಳೊಬ್ಬಳು ಬಾಳೆಹಣ್ಣಿನ ಮೇಲೆ ಬರೆದು ರಥಕ್ಕೆ ಸಮರ್ಪಿಸಿದ್ದನ್ನು ನೋಡಿ ಅಧಿಕಾರಿಗಳ ಮನಸ್ಸು ಕಲಕಿತು ಭಗವಂತ ಆ ಹೆಣ್ಣುಮಗುವಿನ ಪ್ರಾರ್ಥನೆ ಈಡೇರಿಸಪ್ಪ ಎಂದರು. ಕೆಲವುಭಕ್ತರು ನನಗೆ ಮದುವೆ ವದುಕರುಣಿಸು, ಸಾಲದಿಂದ ಮುಕ್ತಿಮಾಡು, ಆರೋಗ್ಯಕರುಣಿಸುವ ತಂದೆ ತಾಯಿಯನ್ನು ಕಾಪಾಡು ಹೆಚ್ಚಿನ ಅಂಕ ಕರುಣಿಸಿ ಆರ್.ಸಿ.ಬಿ ವಿಜಯಶಾಲಿಯನ್ನಾಗಿ ಮಾಡು ಎಂದು ಬಾಳೆಹಣ್ಣುಗಳ ಮೇಲೆ ಬರೆದು ದವನದೊಂದಿಗೆ ರಥಕ್ಕೆಸೆದು ಚೆಲುವನಾರಾಯಣಸ್ವಾಮಿಯ ಮೊರೆಹೊಗಿದ್ದರು. ಭಕ್ತರ ಮೊರೆಯನ್ನು ಆಲಿಸಿ ಒಳಿತನ್ನು ಮಾಡುತ್ತಾನೆ ಎಂದು ಅರ್ಚಕರು ಹಾರೈಸಿದರು. ಪ್ರತಿದಿನ ಸುಡುಬಿಸಿಲಿನ ವಾತಾವರಣವಿರುತ್ತಿದ್ದ ಮೇಲುಕೋಟೆಯಲ್ಲಿ ಇಂದು ಬಿಸಿಲಿನ ತಾಪ ಕಡಿಮೆಯಾಗಿ ಮೋಡಕವಿದ ವಾತಾವರಣ ಇದ್ದು ಭಕ್ತರಲ್ಲಿ ಉಲ್ಲಾಸದ ವಾತಾವರಣ ಮೂಡಿಸಿತ್ತು. ತೇರೆಳೆಯವ ಭಕ್ತರ ದಾಹ ತಣಿಸಲು ಯತಿರಾಜದಾಸರ್ ಗುರುಪೀಠ ಹಾಗೂ ಚಿನ್ನಜೀಯರ್ ಮಠದವತಿಯಿಂದ ಮಜ್ಜಿಗೆ ಪಾನಕ ನೀಡಿದ್ದು ಕಂಡು ಬಂತು.
ಸಂಭ್ರಮದಿಂದ ನಡೆದ ವೈರಮುಡಿ ಮಹಾರಥೋತ್ಸವ



