ನವದೆಹಲಿ: ಪ್ರೇಮಿಗಳ ದಿನದಂದು ಪ್ರೀತಿಪಾತ್ರರ ಜೊತೆಗಿರುವುದು ಎಂದರೆ ಬಲವಂತದ ಲೈಂಗಿಕ ಕ್ರಿಯೆಗೆ ಸಿಕ್ಕ
ಪರವಾನಗಿ ಅಲ್ಲ” ಎಂದು ದೆಹಲಿ ಹೈಕೋರ್ಟ್ ಅತ್ಯಂತ ಗಂಭೀರವಾದ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯ ಜಾಮೀನು ಅರ್ಜಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ಮೌಖಿಕ ಎಚ್ಚರಿಕೆ ನೀಡಿದೆ.
ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿಯು ತನಗೆ ಜಾಮೀನು ನೀಡುವಂತೆ ಕೋರಿದ್ದನು. ಘಟನೆ ನಡೆದದ್ದು ಪ್ರೇಮಿಗಳ ದಿನದಂದು ಮತ್ತು ಅದು ಸಮ್ಮತಿಯಿಂದ ನಡೆದದ್ದು ಎಂಬ ವಾದವನ್ನು ನ್ಯಾಯಾಲಯ ಸಾರಾಸಗಟಾಗಿ ತಿರಸ್ಕರಿಸಿದೆ.
“ಯಾವುದೇ ವಿಶೇಷ ದಿನ ಅಥವಾ ಆಚರಣೆಯು ಒಬ್ಬ ವ್ಯಕ್ತಿಗೆ ಇನ್ನೊಬ್ಬರ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗುವ ಹಕ್ಕನ್ನು ನೀಡುವುದಿಲ್ಲ. ಕಾನೂನಿನ
ದೃಷ್ಟಿಯಲ್ಲಿ ಅಪ್ರಾಪ್ತರ ಸಮ್ಮತಿಗೆ ಯಾವುದೇ ಬೆಲೆಯಿಲ್ಲ,” ಎಂದು ನ್ಯಾಯಮೂರ್ತಿಗಳು ಕಿಡಿಕಾರಿದ್ದಾರೆ.



