ದೊಡ್ಡಬಳ್ಳಾಪುರ: ಶೋಷಿತ ಸಮುದಾಯದ ಮೇಲೆ ನಡೆಯುತ್ತಿರುವ ಅನ್ಯಾಯಗಳನ್ನು ಸಂಘಟಿತರಾಗಿ ಎದುರಿಸುವ ಮೂಲಕ ನ್ಯಾಯ ಒದಗಿಸಲು ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಎಸ್ ಟಿ ಸಮಿತಿ ಸ್ಥಾಪಿಸಿದ್ದೇವೆ ಎಂದು ರಾಜ್ಯ ಸಮಿತಿ ಅದ್ಯಕ್ಷ ಮುನಿರಾಜು (ಚಿಕ್ಕಪ್ಪಿ) ತಿಳಿಸಿದರು.
ನಗರದ ಸಾಯಿಬಾಬಾ ಮಂದಿರದ ಸಮೀಪ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಮಹರ್ಷಿ ವಾಲ್ಮೀಕಿ ಎಸ್ ಟಿ ಸಮಿತಿ ಪದಾಧಿಕಾರಿಗಳಾಗಿ ರಾಜ್ಯ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಉಪಾಧ್ಯಕ್ಷ ರಾಮಚಂದ್ರ ಎನ್, ರಾಜ್ಯ ಸಂಘಟನಾ ಕಾರ್ಯದರ್ಶಿ,ರಾಜಣ್ಣ. ಎನ್(ಜೆಮ್ಸ್), ಗಂಗರಾಜು.ಟಿ.ಎಚ್, ರಾಜ್ಯ ಕಾನೂನು ಸಲಹೆಗಾರ ಅಂಬರೀಶ್. ಎ, ನಿರ್ದೇಶಕರಾಗಿ ರಾಜ್ ಕುಮಾರ್, ರಘು.ಬಿ, ನವೀನ್ ಕುಮಾರ್. ಎಲ್ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದ ಅವರು, ಸಮುದಾಯದ ಜನರಿಗೆ ಸಿಗಬೇಕಾದ ಸೌಲಭ್ಯಗಳನ್ನು ಸಂಘಟಿತವಾಗಿ ಪಡೆಯುವ ಮೂಲಕ ನಮ್ಮ ಸಮುದಾಯದವನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲರಾಗುವಂತೆ ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವ ಮುಖ್ಯ ಗುರಿಹೊಂದಲಾಗಿದೆ ಎಂದರು.
ನಂತರ ಮಾತನಾಡಿದ ರಾಜ್ಯ ಸಮಿತಿ ಖಜಾಂಚಿ ರಾಜಣ್ಣ. ಎನ್ (ಜೆಮ್ಸ್) ಅವರು ಇತಿಹಾಸದ ಪುಟಗಳಲ್ಲಿ ತಮ್ಮದೇ ಆದಂತಹ ಚಾಪನ್ನ ಮೂಡಿಸಿರುವ ಸಮುದಾಯದ ಪ್ರಸ್ತುತ ಎಲ್ಲಾ ರೀತಿಯ ಸೌಲಭ್ಯಗಳಿಂದ ವಂಚಿತರಾಗಿರುವುದು ವಿಪರ್ಯಾಸವೆಂದರೆ ತಪ್ಪಾಗಲಾರದು, ಇದೇ ಕಾರಣ ನಾವು ಜನಾಂಗವನ್ನು ಸಂಘಟಿಸುವ ಯೋಜನೆಯ ಹೊಂದಿ ಈ ಸಂಘವನ್ನ ಸ್ಥಾಪಿಸಿದ್ದೇವೆ ಎಂದರು.
ಕಾನೂನು ಸಲಹೆಗಾರ ಅಂಬರೀಶ್ ಮಾತನಾಡಿ ವಾಲ್ಮೀಕಿ ಸಮುದಾಯಕ್ಕೆ ಸಿಗಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೊಡಿಸುವಂತಹ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಹಾಗೂ ಉಚಿತ ಕಾನೂನು ಸೇವೆಯನ್ನು ಒದಗಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಉಪಾಧ್ಯಕ್ಷ ರಾಮಚಂದ್ರ ಎನ್, ರಾಜ್ಯ ಸಂಘಟನಾ ಕಾರ್ಯದರ್ಶಿ ಗಂಗರಾಜು.ಟಿ.ಎಚ್, ರಾಜ್ಯ ಕಾನೂನು ಸಲಹೆಗಾರ ಅಂಬರೀಶ್. ಎ, ಹಾಗೂ ನಿರ್ದೇಶಕರಾದ ರಾಜ್ ಕುಮಾರ್, ರಘು.ಬಿ, ನವೀನ್ ಕುಮಾರ್. ಎಲ್ ಸೇರಿದಂತೆ ಪ್ರಮುಖರು ಹಾಜರಿದ್ದರು.