ಯಲಹಂಕ: ಬಿಜೆಪಿ ಎಸ್ಟಿ ಮೋರ್ಚಾ ವತಿಯಿಂದ ಯಲಹಂಕ ಉಪನಗರದ ಬಿಜೆಪಿ ಕಚೇರಿಯಲ್ಲಿ ಸಮಾಜ ಸುಧಾರಕ, ಆದಿಕವಿ “ವಾಲ್ಮೀಕಿ ಜಯಂತಿ”ಯನ್ನು ಟಿ.ಟಿ.ಡಿ ಆಡಳಿತ ಮಂಡಳಿಯ ಸದಸ್ಯರು ಹಾಗೂ ಯಲಹಂಕ ಕ್ಷೇತ್ರದ ಜನಪ್ರಿಯ ಶಾಸಕರಾದ ಎಸ್. ಆರ್ ವಿಶ್ವನಾಥ್ ರವರ ಅಧ್ಯಕ್ಷತೆಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಆಚರಿಸಲಾಯಿತು.
ಜಯಂತಿ ಕಾರ್ಯಕ್ರಮದಲ್ಲಿ ಪ್ರಬುದ್ದ ಶಾಸಕರು, ಟಿಟಿಡಿ ಸದಸ್ಯರು, ಮಾಜಿ ಬಿಡಿಎ ಅಧ್ಯಕ್ಷರು ಆದ ಎಸ್ ಆರ್ ವಿಶ್ವನಾಥ್ ರವರು ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ನಗರ ಪಾಲಿಕೆ ಸದಸ್ಯರು,ನಗರ ಮಂಡಲ ಅಧ್ಯಕ್ಷರು ಆದ ಎಂ ಸತೀಶ್, ಎಸ್. ಟಿ ಆಗಮಿಸಿದ್ದರು.
ಮೋರ್ಚಾ ಅಧ್ಯಕ್ಷರಾದ ಬಿ.ಆರ್.ಮೋಹನ್, ಬಿಜೆಪಿ ಉತ್ತರ ಜಿಲ್ಲಾ ಎಸ್. ಟಿ ಮೋರ್ಚಾ ಉಪಾಧ್ಯಕ್ಷರಾದ ಎ.ಸಿ ಮುನಿಕೃಷ್ಣ ಅವರು ವೇದಿಕೆ ಹಂಚಿಕೊಂಡರು.ಅತಿಥಿಗಳಾಗಿ ಪವನ್ ಕುಮಾರ್, ರಾಜಣ್ಣ, ಮುನಿರಾಜು, ನಟರಾಜು, ಮಧುಸೂದನ್, ನಾರಾಯಣಸ್ವಾಮಿ, ಶೇಷಾದ್ರಿ ಇನ್ನೂ ಮುಂತಾದವರು ವೇದಿಕೆ ಅಲಂಕರಿಸಿದ್ದರು.
ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಸ್ವತಃ ಶಾಸಕರಾದ ಎಸ್ ಆರ್ ವಿಶ್ವನಾಥ್ ರವರೇ ಪೂಜೆ ಗೈದು ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀಯುತರನ್ನು ಮೋರ್ಚಾ ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿದರು. ನಂತರ ಸಭಿಕರನ್ನು ಉದ್ದೇಶಿಸಿ ಜನಪ್ರಿಯ ಶಾಸಕರು ಭರತ ಖಂಡದ, ಐತಿಹಾಸಿಕ ಮಹತ್ವ ಸಾರಿದ, ಉನ್ನತ ಜೀವನ ಮೌಲ್ಯಗಳು ಮತ್ತು ಆದರ್ಶ ವ್ಯಕ್ತಿಯ ಗುಣಲಕ್ಷಣಗಳನ್ನು ಪ್ರತಿಬಿಂಬಿಸುವ ‘ರಾಮಾಯಣ’ ಎಂಬ ಮಹಾಕಾವ್ಯ ರಚಿಸಿರುವ ಸಮಾಜ ಸುಧಾರಕ, ಆದಿಕವಿ “ ವಾಲ್ಮಿಕಿ” ಮಹರ್ಷಿಯ ಬಗ್ಗೆ ಸವಿವರವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ ಟಿ ಮೋರ್ಚಾ.ಪ್ರಧಾನ ಕಾರ್ಯದರ್ಶಿ: ಗಂಗಾಧರ್ ಪದಾಧಿಕಾರಿಗಳಾದ ಪ್ರದೀಪ್, ರಾಮಾಂಜಿ, ಹರೀಶ್, ಇತರ ಎಲ್ಲಾ ಪದಾಧಿಕಾರಿಗಳು, ಹಾಗೂ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.