“ಸಮ್ಮಿಲನ”ಕಲೆ -ಸಾಹಿತ್ಯ -ಸಾಂಸ್ಕೃತಿಕ ವೇದಿಕೆಯು 9/4/2023ರಂದು ಶೇಷಾದ್ರಿಪುರಂನ ಕೆನ್ ಕಲಾ ಶಾಲೆಯಲ್ಲಿ ವರನಟ ಡಾ:ರಾಜ್ ಸಂಸ್ಮರಣೆಯ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ರಂಗಭೂಮಿ ಕಲಾವಿದರಾದ ಶ್ರೀ ಎಲ್ಲೇಗೌಡ ಬೆಸಗರಹಳ್ಳಿ ಅವರಿಗೆ “ಗಾಯಕ ಎನ್.ಯಲ್ಲಪ್ಪ ಸ್ಮಾರಕ ಪ್ರಶಸ್ತಿ”, ಶ್ರೀಶಿವನಂಜಪ್ಪರವರಿಗೆ “ಸಮ್ಮಿಲನ ಡಾ.ರಾಜ್ ಸಂಸ್ಮರಣಾ ಸಮ್ಮಾನ”, ಡಾ.ಆರ್.ಎನ್. ರವೀಂದ್ರರವರಿಗೆ “ಶಾರದಾ ಸುಪುತ್ರ ಪ್ರಶಸ್ತಿ”, ಕವಯಿತ್ರಿಯರಾದ ಶ್ರೀಮತಿ ಗೀತಾ ಬನ್ನೂರು, ಶ್ರೀಮತಿ ನೇತ್ರಾವತಿ ಹೆಚ್. ಹಾಗೂ ಶ್ರೀಮತಿ ನಿಶಾ ಮುಳಗುಂದ ಅವರಿಗೆ “ಶಾರದಾ ಸುಪುತ್ರಿ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗಣ್ಯಮಾನ್ಯರುಗಳಾದ ಸದಾಶಿವಯ್ಯ ಜರಗನಹಳ್ಳಿ, ಬಿ.ಶೃಂಗೇಶ್ವರ್,ಆಶಾ ಎಲ್.ಎಸ್,ಆರ್.ಶ್ರೀಧರ, ಬಾಲಕೃಷ್ಣ ಶೆಣೈ, ನಾಗೇಶ್.ಡಿ.ಪಾಟಕ್ ,ಸಿ.ಎನ್. ಉಮೇಶ್ ಹಾಗೂ ‘ಸಮ್ಮಿಲನ’ದ ಸಂಸ್ಥಾಪಕ ಕುವರಯಲ್ಲಪ್ಪ ಉಪಸ್ಥಿತರಿದ್ದಾರೆ
Leave a Review