ಬೊಮ್ಮನಹಳ್ಳಿ: ವಿವಿಧ ದಲಿತಪರ ಸಂಘಟನೆಗಳಿಂದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಗೆ ಬೆಂಬಲ ನೀಡುವುದಾಗಿ ಬಹುಜನ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಆರ್ ಎಂ ಎನ್ ರಮೇಶ್ ತಿಳಿಸಿದ್ದಾರೆ.
ಅವರು ಬೊಮ್ಮನಹಳ್ಳಿಯಲ್ಲಿ ವಿವಿಧ ದಲಿತಪರ ಸಂಘಟನೆಗಳ ಮುಖಂಡರುಗಳು ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು
ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಗೆ ಬೆಂಬಲ : ಮೋದಿಯ ಸರ್ವಾಧಿಕಾರಿ ಧೋರಣೆಯ ಖಂಡಿಸಿ ನಾವುಗಳ ಸಂವಿಧಾನ ಉಳಿಸಲು ನಮ್ಮ ಐಕ್ಯತೆ ಮತ್ತು ಬೆಂಬಲವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡುತ್ತಿರುವುದಾಗಿ ಹೇಳಿದ್ದಾರೆ.
ದಲಿತ ಸೇವಾ ಸಂಘ ರಾಜ್ಯಾಧ್ಯಕ್ಷ ಜೆ.ಚಂದ್ರಪ್ಪ ಸೇರಿ ಹತ್ತಕ್ಕೂ ಹೆಚ್ಚು ಸಂಘಟನೆಗಳು ಒಕ್ಕೂಟದ ಜೊತೆಗೆ ಸೌಮ್ಯ ರೆಡ್ಡಿ ಪರ ಈ ಬಾರಿ ಮತ ಕೇಳಲು ಮುಂದಾಗಿದ್ದು ದಲಿತ ಸಂಘಟನೆಗಳ ಒಕ್ಕೂಟ ಒಗ್ಗಟ್ಟಾಗಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಆರ್.ಎಮ್.ಎನ್ ರಮೇಶ್-ಬಹುಜನದಲಿತ ಸಂಘರ್ಶ್ ಸಮಿತಿ, ಚಂದ್ರಪ್ಪ-ದಲಿತ ಸೇವಾ ಸಂಘ, ರಾಮಚಂದ್ರ, ಮಾಲತಿ ನಂದೀಶ್, ಕೃಷ್ಣಮೂರ್ತಿ ರಾಜ್ಯ ಕಾರ್ಯದರ್ಶಿ, ಮುರುಳಿ ವೆಂಕಟೇಶ್, ಅಗರ ಶಂಕರ್, ಮೀನಾಕ್ಷಿ, ಚಂದ್ರಮ್ಮ, ಸುಶಿಲ ಕುಮಾರಿ ಇನ್ನೂ ಮುಂತಾದವರು ಹಾಜರಿದ್ದರು.