ಬೆಂಗಳೂರು: ಬದಲಾದ ಸನ್ನಿವೇಶದಲ್ಲಿ ಜೆಡಿಎಸ್ ಪಕ್ಷ ತನ್ನ ವರುಣಾ ಕ್ಷೇತ್ರದ ಅಭ್ಯರ್ಥಿಯನ್ನು ಬದಲಾವಣೆ ಮಾಡಿದೆ. ಮಾಜಿ ಶಾಸಕ ಭಾರತಿ ಶಂಕರ್ ಅವರನ್ನು ವರುಣಾದಿಂದ ಕಣಕ್ಕಿಳಸಲು ಜೆಡಿಎಸ್ ನಿರ್ಧರಿಸಿದ್ದು, ಈಗಾಗಲೇ ಘೋಷಣೆ ಮಾಡಿದ್ದ ಅಭಿಷೇಕ್ ಅವರನ್ನು ಬದಲಾಯಿಸಿ ಭಾರತೀ ಶಂಕರ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ ಎಂದು ಹೇಳಲಾಗಿದೆ.
ಅದೇ ರೀತಿಯಾಗಿ ಅರಸೀಕೆರೆ ಕ್ಷೇತ್ರದಿಂದ ಅಶೋಕ್ ಎಂಬುವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದ ಜೆಡಿಎಸ್ ಇದೀಗ ಮಾಜಿ ಮುಖ್ಯಮಂತ್ರಿ ಬಿಜೆಪಿಯ ಯಡಿಯೂರಪ್ಪ ಅವರ ಸಂಬಂಧಿ ಎನ್ನಲಾದ ಎನ್.ಆರ್.ಸಂತೋಷ್ ಅವರಿಗೆ ಟಿಕೆಟ್ ಘೋಷಣೆ ಮಾಡಲು ನಿರ್ಧರಿಸಿ ಈಗಾಗಲೇ ಜೆಡಿಎಸ್ ವರಿಷ್ಠ ದೇವೇಗೌಡರ ಮುಖಾಂತರ ಎನ್.ಆರ್.ಸಂತೋಷ್ ಟಿಕೆಟ್ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
Leave a Review