ಪೀಣ್ಯ ದಾಸರಹಳ್ಳಿ: ವಿಧಾನಸಭಾ ಕ್ಷೇತ್ರದ ರಾಜಗೋಪಾಲನಗರ ವಾರ್ಡಿನ ಪೀಣ್ಯ 2ನೇ ಹಂತದ ಆರ್ ವಿ ಶಾಲೆಯಲ್ಲಿ ಶ್ರೀ ಕನ್ನಿಕಾ ಪರಮೇಶ್ವರಿ ಆರ್ಯವೈಶ್ಯ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಅದ್ದೂರಿ ವಾಸವಿ ಜಯಂತಿ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ದಾಸರಹಳ್ಳಿಯ ಶಾಸಕ ಎಸ್. ಮುನಿರಾಜು ಅವರು ಆಗಮಿಸಿ ಕನ್ನಿಕಾ ಪರಮೇಶ್ವರಿ ಪೂಜಾ ವಿಧಿ ವಿಧಾನದಲ್ಲಿ ಪಾಲ್ಗೊಂಡಿದ್ದರು.
ಪಾರ್ವತಿ ಪರಮೇಶ್ವರರ ಭಕ್ತರು ಆದ ಇವರ ದೇವಿ ಕನ್ನಿಕಾ ಪರಮೇಶ್ವರಿ ಕುಲದೇವತೆ ಕೂಡ ಹೌದು ದುರ್ಗಾಪರಮೇಶ್ವರಿ, ಕಟೀಲು ಪರಮೇಶ್ವರಿ, ಗಂಗಾಪರಮೇಶ್ವರಿ, ಅಂಗಾಳ ಪರಮೇಶ್ವರಿ ನಾನ ಹೆಸರುಗಳಿಂದ ಕರೆಯುವ ಕನ್ನಿಕಾ ಪರಮೇಶ್ವರಿ ಇವರ ಆರಾಧ್ಯ ದೇವತೆ. ಬೆಳಗ್ಗೆಯಿಂದಲೇ ಶಾಂತಿ ಹೋಮ, ಗಣೇಶ ಹೋಮ, ನವಗ್ರಹ ಹೋಮ, ವಾಸವಿ ಹೋಮ, ಪೂರ್ಣಹುತಿ,
ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಕೂಡ ಮಾಡಲಾಯಿತು.ಸಮಿತಿ ಅಧ್ಯಕ್ಷರಾದ ಜಯಂ ರಾಧಾಕೃಷ್ಣಯ್ಯ ಶೆಟ್ಟಿ, ಗೌರವಾಧ್ಯಕ್ಷ ರಾಮನಾಥ ಶೆಟ್ಟಿ, ನಾಗೇಶ್ ಶೆಟ್ರು, ಬಾಬಣ್ಣ, ಗೋಪಾಲಕೃಷ್ಣಯ್ಯ ಶೆಟ್ಟಿ, ಎನ್.ಮಹೇಶ್ಕುಮಾರ್ ಇವರುಗಳ ನೇತೃತ್ವದಲ್ಲಿ ರಾಜಗೋಪಾಲನಗರ ರಸ್ತೆ ಮಾರ್ಗವಾಗಿ ಹೆಗ್ಗನಹಳ್ಳಿ ಮುಖ್ಯ ರಸ್ತೆ ಮುಖಾಂತರ ತಮಟೆ ವಾಲಗ,ಡೊಳ್ಳು ಕುಣಿತ, ಪೂಜಾಕುಣಿತ, ವಿವಿಧ ಕಲಾವಿದರ ತಂಡದ ಜೊತೆಗೆಬೆಳ್ಳಿರಥದಲ್ಲಿ ಕನ್ನಿಕಾ ಪರಮೇಶ್ವರಿ ದೇವಿಯ ಮೆರವಣಿಗೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡರಮೇಶ್, ಮಂಜುನಾಥ್, ರಾಜೇಶ್ ಶೆಟ್ರು, ವೆಂಕಟೇಶ್ ಬಾಬು, ಶ್ರೀನಿವಾಸ್, ಬಾಲಾಜಿ, ವಿಜಯ್, ಜಗದೀಶ್, ಅನಿಲ್, ರಾಜು, ಸತ್ಯ ಪ್ರಕಾಶ್ ಇನ್ನಿತರರು ಮಹಿಳೆಯರು ಸಾರ್ವಜನಿಕರು ಪಾಲ್ಗೊಂಡಿದ್ದರು.