ಹೊಸಕೋಟೆ: ನಗರದ ಶ್ರೀಕಂಠೇಶ್ವರ ಕಲ್ಯಾಣಮಂಟಪದಲ್ಲಿ ಆರ್ಯ ವೈಶ್ಯ ಸಂಘದ ವತಿಯಿಂದ ವಾಸವಿ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಡಾ: ನರಸಿಂಹ ಪ್ರಸಾದ್ ಜನಾಂಗವು ಸಂಘಟಿತಗೊಂಡು ಇಂತಹ ಕಾರ್ಯ ಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳ ಬೇಕು. ಪ್ರಥಮ ಬಾರಿಗೆ ನಗರದ ಕೆಇಬಿ ವೃತ್ತದಲ್ಲಿ ಸಾರ್ವಜನಿಕರಿಗೆ ಅನ್ನದಾಸೋಹ ಮಾಡುತ್ತಿರುವುದು ಅಭಿನಂದನಾರ್ಹ ಎಂದರು.
ಸಂಘದ ಅಧ್ಯಕ್ಷ ಮುರಳಿಕೃಷ್ಣ ಮಾತನಾಡಿ ಪರಸ್ಪರ ಪರಿಚಯ ಮಾಡಿಕೊಳ್ಳುವುದರೊಂದಿಗೆ ವಿಶ್ವಾಸ ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮ ಗಳು ಸಹಕಾರಿಯಾಗಿವೆ. ತಾಲೂಕಿನಲ್ಲಿರುವ ಜನಾಂಗದ ಪ್ರತಿಯೊಬ್ಬರೂ ಸಹ ಸಂಘದ ಸದಸ್ಯರಾಗಿ ನೋಂದಾಯಿಸಿಕೊಂಡು ಬಲಿಷ್ಠ ಗೊಳಿಸಬೇಕು. ಇದರಿಂದ ಮಾತ್ರ ಸರಕಾರದ ಸವಲತ್ತುಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷ ಸತೀಶ್, ಕಾರ್ಯದರ್ಶಿ ನಾಗೇಂದ್ರ ಸಾಯಿ, ಜಂಟಿ ಕಾರ್ಯದರ್ಶಿ ಬೆಸ್ಕಾಂನ ಎಇಇ ಅನಿಲ್ ಕುಮಾರ್, ನಿದೇರ್ಶಕ ಧರ್ಮೇಂದ್ರ, ಆಡಳಿತ ಮಂಡಳಿ ಸದಸ್ಯರುಗಳು ಭಾಗವಹಿಸಿದ್ದರು.ಕಾರ್ಯಕ್ರಮದ ಅಂಗವಾಗಿ ಕನ್ನಿಕಾಪರಮೇಶ್ವರಿಗೆ ವಿಶೇಷ ಪೂಜೆ, ಹೋಮ ನೆರವೇರಿಸಲಾಯಿತು.ಸಾಂಸ್ಕøತಿಕ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳನ್ನು ಸಹ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಬಾರಿಗೆ ನಗರದ ಕೆಇಬಿ ವೃತ್ತದಲ್ಲಿ ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಿದ್ದು ಸುಮಾರು 400 ಜನರಿಗೆ ವಿತರಿಸಲಾಯಿತು.