ಮೈಸೂರು: ಈ ಬಾರಿ ನನಗಾಗಿಯೇ ಮೀಸಲಿಟ್ಟ ಚಾಮರಾಜ ಕ್ಷೇತ್ರದ ಟಿಕೆಟ್ ಕೈತಪ್ಪಲು ಹಾಗೂ ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ನನ್ನನು ಸೋಲಿಸಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನೇ ಹೊರತು ಬೇರೆಯವರು ಯಾರು ಅಲ್ಲ ಎಂದು ವಾಸು ಕಿಡಿಕಾರಿದ್ದಾರೆ.
ಮೈಸೂರಿನ ಹೋಟೆಲ್ ಯೊಂದರಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ನನಗೆ ಚಾಮರಾಜ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಾಸು ಎಂದು ಪಕ್ಷ ಮೊದಲ ಪಟ್ಟಿಯಲ್ಲೇ ಆಯ್ಕೆ ಮಾಡಲು ಜಿಲ್ಲಾ ಸಮಿತಿ, ರಾಜ್ಯ ಸಮಿತಿ ಹಾಗೂ ರಾಷ್ಟ್ರೀಯ ಮಟ್ಟದ ನಾಯಕರುಗಳ ಸಮಿತಿ ನಿರ್ಧರಿಸಿತ್ತು ಅದರೆ ಸಿದ್ದರಾಮಯ್ಯ ನನ್ನ ಮೇಲೆ ಇದ್ದ ಹಗೆತನದಿಂದಲ್ಲೂ , ಹಠ ಮತ್ತು ಚಟದಿಂದಲ್ಲೂ ನನಗೆ ಟಿಕೆಟ್ ತಪ್ಪುವಂತೆ ಮಾಡಿದೆ. 2013ರಲ್ಲಿ ನಾ ಶಾಸಕನಾಗಿದ್ದಾಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲೇ ಹೆಚ್ಚು ಅನುದಾನವನ್ನು ಚಾಮರಾಜ ಕ್ಷೇತ್ರಕ್ಕೆ ತಂದು, ಈ ಕ್ಷೇತ್ರದಲ್ಲಿ ಆಸ್ಪತ್ರೆ, ಕಾಲೇಜು ಕಟ್ಟಡ ನಿರ್ಮಾಣ ಮಾಡಲು ಶ್ರಮಿಸಿದ್ದೇನೆ.
ನನ್ನ ಅಧಿಕಾರದವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಬಳಿ ಒಂದು ವರ್ಗಾವಣೆ ಸೇರಿದಂತೆ ಯಾವುದೇ ವೈಯಕ್ತಿಕ ಕೆಲಸ ಮಾಡಿಸಿಕೊಂಡಿಲ್ಲ , ಆದರೂ ನನಗೆ ಟಿಕೆಟ್ ಕೈತಪ್ಪಿಸಲು ಕಸರತ್ತು ನಡೆಸಿ ಸಿದ್ದರಾಮಯ್ಯ ಯಶಸ್ವೀಯಾಗಿದ್ದಾರೆ ಎಂದು ವಾಸು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಾಮರಾಜ ಕ್ಷೇತ್ರದ ಶಾಸಕನಾಗಿದ್ದಾಗ ನಾ ಕ್ಷೇತ್ರಕ್ಕೆ ಜಯದೇವದಂತಹ ದೊಡ್ಡ ಮಟ್ಟದ ಆಸ್ಪತ್ರೆಗಳು , ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ 5 ಜಿಲ್ಲೆಗಳ ಜನರಿಗೆ ಅನುಕೂಲವಾಗುವಂತಹ ಅಭಿವೃದ್ಧಿ ಕೆಲಸ ಮಾಡಿದೆ ಹಾಗೆ 2018ರಲ್ಲಿ ಗೆದ್ದಿದ್ದರೆ ಮೈಸೂರಿಗೆ ನಿಮಾನ್ಸ್ ಘಟಕ, ಕಿದ್ವಾಯಿ ಕೇಂದ್ರ ಸ್ಥಾಪಿಸಲು ಗುರಿ ಹೊಂದಿದೆ , ಆ ಗುರಿಗಳನ್ನು ಸಿದ್ದರಾಮಯ್ಯ ನುಚ್ಚು ನೂರು ಮಾಡಿದರು ಎಂದು ವಾಸು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದರು.
ವಾಸು ಮನೆಗೆ ಸಚಿವ ವಿ.ಸೋಮಣ್ಣ ಭೇಟಿ
ನಿನ್ನೆ ಸಂಜೆ ಜಯಲಕ್ಷ್ಮಿಪುರಂನಲ್ಲಿರುವ ವಾಸುರವರ ಮನೆಗೆ ಮಾಜಿ ಸಚಿವ, ವರುಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಭೇಟಿ ನೀಡಿ ಉಭಯ ಕುಶಲೋಪರಿ ವಿಚಾರಿಸಿದರು ಹಾಗೆ ತಮ್ಮ ಹಾಗೂ ವಾಸುರವರ ಗೆಳೆತನ ಸುಮಾರು 30 ವರ್ಷಗಳ ಹಳೆ ಯದು ಹಾಗೂ ನಾವಿಬ್ಬರೂ ತುಂಬಾ ಅತ್ಮೀಯ ಮಿತ್ರರು , ವಾಸುರವರ ಹೃದಯ ವೈಶಾಲ್ಯತೆ ಬಹಳಷ್ಟಿದೆ, ಅವರು ಉತ್ತಮ ಶಾಸಕರು ಮಾತ್ರವಲ್ಲ ಉತ್ತಮ ವ್ಯಕ್ತಿತ್ವ ವ್ಯಕ್ತಿ ಹಾಗೆ ಸರಳ ಸಜ್ಜನಿಕೆ ಸ್ವಭಾವದವರು, ಅವರ ಹೆಚ್ಚೆ ಗುರುತು ಮೈಸೂರಿನಲ್ಲಿ ಮಾತ್ರವಲ್ಲ ರಾಜ್ಯದ ಮೂಲೆ ಮೂ ಲೆಯಲ್ಲಿವೆ, ಶಿಕ್ಷಣ ಸಂಸ್ಥೆ ಮೂಲಕ ರಾಜ್ಯಕ್ಕೆ ಉತ್ತಮ ಸಂದೇ ಶ ನೀಡಿದ್ದಾರೆ ಅವರ ಮಗ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಗಾಗಿ ಮಗನಿಗೆ ಮತ್ತು ನನಗೆ ಹರಿಸಿ ಎಂದು ಕೇಳಿಕೊಂಡು ಹೋಗಲು ಬಂದಿದ್ದೇನೆ ಎಂದರು.
Leave a Review