ಹೊಸಕೋಟೆ: ವೀರಶೈವ ಧರ್ಮ ಸಂಸ್ಥಾಪಕರಾದ ರೇಣುಕಾಚಾರ್ಯರ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸುವಲ್ಲಿ ವೀರಶೈವ ಸಂಘಟನೆಗಳು ಪ್ರಮುಖ ಪಾತ್ರ ವಹಿಸಬೇಕಾದ್ದುಇಂದಿನ ಪರಿಸ್ಥಿತಿಯಲ್ಲಿ ಅತ್ಯವಶ್ಯವಾಗಿದೆ ಎಂದು ಮಾಲೂರು ತಾಲೂಕು ಬೆಳ್ಳಾವಿ ಮಹಾಸಂಸ್ಥಾನದ ಮಠಾಧ್ಯಕ್ಷರಾದ ಮಹಂತ ಶಿವಾಚಾರ್ಯಮಹಾಸ್ವಾಮಿ ಹೇಳಿದರು.
ಅವರು ನಗರದ ಗಾಣಿಗರಪೇಟೆಯಲ್ಲಿ ರುವ ಮಾತೃಶ್ರೀ ವೀರಮ್ಮನವರ ಮಠದ ಆವರಣದಲ್ಲಿ ತಾಲೂಕು ವೀರಶೈವ ಆಗಮಿಕರು, ಪುರೋಹಿತರು ಹಾಊ ಅರ್ಚಕರ ಸಂಘದ ವತಿಯಿಂದ ಏರ್ಪಡಿಸಿದ್ದ ಹತ್ತನೇ ವರ್ಷದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಪರಂಪರೆಯನ್ನು ಉಳಿಸಿ ಬೆಳೆಸಬೇಕಾದ್ದು ಪ್ರತಿಯೊಬ್ಬ ವೀರಶೈವರ ಆದ್ಯ ಕರ್ತವ್ಯವಾಗಿದೆ.
ಕಳೆದ 10 ವರ್ಷಗಳಿಂದ ಸಂಘವು ನಿರಂತರವಾಗಿ ರೇಣುಕಾಚಾರ್ಯರ ಜಯಂತಿಯನ್ನು ಆಚರಿಸುತ್ತಿರುವುದು ಅಭಿನಂದನಾರ್ಹ. ವಿಶ್ವಗುರು ರೇಣುಕಾ ಚಾರ್ಯರುಜಗದ್ವಿಖ್ಯಾತಿ ಪಡೆದುಕೊಂಡಿರುವ ಬಸವಣ್ಣನವರಂತೆ ವೀರಶೈವ ಸಮುದಾಯದ ಎರಡುಕಣ್ಣುಗಳಿದ್ದಂತೆ. ಅರ್ಚಕರು ಭಕ್ತಾಧಿಗಳಿಗೆ ದೇವರ ನಡುವಿನ ಕೊಂಡಿಯಂತಿದ್ದು ನಿಸ್ವಾರ್ಥ ಸೇವಾ ಮನೋಭಾವದಿಂದ ಕಾರ್ಯನೆರವೇರಿಸುವ ಮೂಲಕ ಜನಮನ್ನಣೆ ಪಡೆಯಬೇಕು ಎಂದರು.
ಮಠದ ವತಿಯಿಂದ ರೇಣುಕಾಚಾರ್ಯರ ಜಯಂತಿ ಆಚರಣೆಯ ದಾಸೋಹದ ಸಂಪೂರ್ಣ ವೆಚ್ಚವನ್ನು ಭರಿಸಲಾಗುವುದು. ಇದೇ ರೀತಿ ಸಿದ್ಧಗಂಗೆಯ ಮಠಾಧ್ಯಕ್ಷರಾಗಿದ್ದ ಡಾ: ಶಿವಕುಮಾರಸ್ವಾಮೀಜಿಯವರ ಪುಣ್ಯಸ್ಮರಣೆಯ ಪ್ರಯುಕ್ತ ನಡೆಯುವ ದಾಸೋಹ ದಿನಾಚರಣೆಗೆ 10 ಮೂಟೆ ಅಕ್ಕಿಯನ್ನು ಸಹ
ಕೊಡುಗೆಯಾಗಿ ನೀಡಲಾಗುವುದು.
ಮಠವುಬೆಳ್ಳಾವಿಯಲ್ಲಿ ಉಚಿತ ವಿದ್ಯಾರ್ಥಿನಿಲಯವನ್ನು ನಿರ್ಮಿಸಿದ್ದು 2024ರ ಜೂನ್ನಿಂದ ಕಾರ್ಯಾಚರಿಸಲಿದ್ದು 50 ವಿದ್ಯಾರ್ಥಿಗಳಿಗೆ ಪ್ರವೇಶವ
ಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.ತಾಲೂಕು ವೀರಶೈವ ಆಗಮಿಕರು, ಪುರೋಹಿತರು ಹಾಊ ಅರ್ಚಕರ ಸಂಘದ ಅಧ್ಯಕ್ಷನಟರಾಜ ಶಾಸ್ತ್ರಿಗಳು ಮಾತನಾಡಿ ಕಳೆದ 10 ವರ್ಷಗಳಿಂದ ಮಾತೃಶ್ರೀ ವೀರಮ್ಮನವರ ಮಠದ ಆವರಣದಲ್ಲಿ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ಏರ್ಪಡಿಸಲಾ
ಗುತ್ತಿದೆ.
ಈ ಬಾರಿ ಲೋಕಸಭಾ ಚುನಾವಣೆಯನೀತಿ ಸಂಹಿತೆ ಜಾರಿಯಲ್ಲಿರುವ ಕಾರಣದಿಂದಾಗಿ ಸರಳವಾಗಿ ಆಚರಿಸಲಾಗುತ್ತಿದೆ. ಬೆಳಿಗ್ಗೆ ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಿಸಲಾಗಿದೆ. ಮುಂದಿನ ವರ್ಷದ ಆಚರಣೆಯನ್ನು ಐವರು ಮಠಾಧೀಶರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಆಚರಿಸಲು ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.
ಸಂಘದ ಗೌರವಾಧ್ಯಕ್ಷ ಚನ್ನವೀರಯ್ಯ ನವರು, ಉಪಾಧ್ಯಕ್ಷರಾದ ವಿಶ್ವನಾಥಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ನಾಗೇಂದ್ರಪ್ರಸಾದ್, ಕಾರ್ಯದರ್ಶಿ ರವೀಶ್ಚಂದ್ರ ಶಾಸ್ತ್ರಿ, ಸಹ ಕಾರ್ಯದರ್ಶಿ ಚೇತನ್, ಸಂಘಟನಾ ಕಾರ್ಯದರ್ಶಿ ಮಂಜುನಾಥಶಾಸ್ತ್ರಿ, ಶಿವಕುಮಾರಶಾಸ್ತ್ರಿ, ಖಜಾಂಚಿ ಚಂದ್ರಶೇಖರಶಾಸ್ತ್ರಿ, ವೀರಶೈವ ಸೇವಾ ಸಮಾಜದ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಪರಮೇಶ್, ಮುಖಂಡ ಜೆ.ಸಿ.ವೀರಭದ್ರಯ್ಯ ಇದ್ದರು.