ಸ್ನೇಹಾಲಯಂ ಕ್ರಿಯೇಷನ್ಸ್ ಲಾಂಛನದಲ್ಲಿ ಅಹಿನಾ ಮನೋ ಹಾಗು ಮಂಜುನಾಥ್ ಗೌರಜ್ಜಿ ನಿರ್ಮಿಸುತ್ತಿರುವ ಶಿಲ್ಪಾ ಶ್ರೀನಿವಾಸ್ ಚಿತ್ರದ ಸ್ಪೆಷಲ್ ಹಾಡಲ್ಲಿ ಹಿರಿಯ ನಟ ಅಭಿಜಿತ್ ಹೆಜ್ಜೆ ಹಾಕಲಿದ್ದಾರೆ.
“ಈ ಸಿನಿಮಾ ಅಂತೀವಲ್ಲಾ ಅದು ದೊಡ್ಡ” ಎಂಬ ಸಾಲುಗಳಿಂದ ಪ್ರಾರಂಭವಾಗುವ ಪ್ರತಾಪ್ ಭಟ್ ಅವರ ಸಾಹಿತ್ಯಕ್ಕೆ ಅನಿರುದ್ಧ ಶಾಸ್ತ್ರೀ ಸಂಗೀತ ಸಂಯೋಜನೆ ಮಾಡುವ ಜೊತೆಗೆ ಅವರೇ ಹಾಡಿದ್ದಾರೆ.
ಹಾರರ್ , ಥ್ರಿಲ್ಲರ್ ಜೊತೆಗೆ ಸಿನಿಮಾ ಇಂಡಸ್ಟ್ರಿಯಲ್ಲಿನ ಹುಳುಕು ತೊಡಕುಗಳನ್ನ ಎತ್ತಿ ತೋರಿಸುವ ಕಥಾವಸ್ತುವನ್ನು ಒಳಗೊಂಡಿರುವ ಶಿಲ್ಪಾ ಶ್ರೀನಿವಾಸ್ ಈಗಾಗಲೇ ತನ್ನ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಸೆನ್ಸಾರ್ ಹಂತದಲ್ಲಿದೆ. ಫಸ್ಟ್ ಕಾಪಿ ನೋಡಿದ ನಿರ್ದೇಶಕರಿಗೆ ಇನ್ನೂ ಒಂದು ಹಾಡು ಇದ್ದಿದ್ರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದನಿಸಿದೆ. ಹಾಗಾಗಿ ನಿರ್ದೇಶಕ ರಾಜೀವ್ ಕೃಷ್ಣ ಅವರು ಹೊಸ ಹಾಡನ್ನು ಸಿದ್ದಪಡಿಸಿ ಅದರಲ್ಲಿ ನಟ ಅಭಿಜಿತ್ ಅವರಿಂದ ಹೆಜ್ಜೆ ಹಾಕಿಸುತ್ತಿದ್ದಾರೆ.
ಈಗ ಶಿಲ್ಪಾ ಶ್ರೀನಿವಾಸ್ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳು ಹಾಗೂ ಎರಡು ಫೈಟ್ ಗಳಿದ್ದು ಮೇ ತಿಂಗಳ ಕೊನೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಬೇಕೆಂಬ ಯೋಜನೆಯನ್ನು ನಿರ್ದೇಶಕರು ಹಾಕಿಕೊಂಡಿದ್ದಾರೆ.
ಈ ಚಿತ್ರದಲ್ಲಿ ನಿರ್ಮಾಪಕರು, ವಿತರಕರೂ ಆದ ಶಿಲ್ಪಾ ಶ್ರೀನಿವಾಸ್ ಅವರೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ಶೋಭರಾಜ್, ನಾಗೇಂದ್ರ ಅರಸ್, ಶಂಖನಾದ ಆಂಜಿನಪ್ಪ,, ಅನ್ನಪೂರ್ಣ, ನಂದಿನಿ ಕಮ್ಮಯ್ಯ. ಪಂಚಾಕ್ಷರಯ್ಯ ಮರಿಸ್ವಾಮಿ, ವೀರ ಧನುಷ್. ಕಿಶೋರ್ ಕಾಸರಗೋಡು, ಸ್ವಾತಿ ಲಿಂಗರಾಜ್, ಬೆಂಗಳೂರು ಮನು,ಪ್ರಿಯ ಮುಂತಾದವರು ನಟಿಸಿದ್ದಾರೆ.
ಈ ಚಿತ್ರಕ್ಕೆ ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ, ಅನಿರುದ್ದ ಶಾಸ್ತ್ರೀ ಅವರ ಸಂಗೀತ, ಪ್ರತಾಪ್ ಭಟ್ ಅವ ಸಾಹಿತ್ಯ,ಕೆ. ಮಲ್ಲಿ ವಡ್ಡರಹಟ್ಟಿ ಅವರ ಸಹ ನಿರ್ದೇಶನ, ಡಿ ಮಲ್ಲಿ ಅವರ ಸಂಕಲನ.ಸಾನ್ವಿ ಅವರ ನೃತ್ಯ ನಿರ್ದೇಶನ ಇರುವ ಶಿಲ್ಪಾ ಶ್ರೀನಿವಾಸ್ ಚಿತ್ರಕ್ಕೆ ರಾಜೀವ್ ಕೃಷ್ಣ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ
ಮಾಡಿದ್ದಾರೆ.
ಶಿಲ್ಪಾ ಶ್ರೀನಿವಾಸ್ ಚಿತ್ರದಲ್ಲಿ ಹಿರಿಯ ನಟ ಅಭಿಜಿತ್



