ಬೆಂಗಳೂರು: ಕನ್ನಡ ನಾಡು ನುಡಿ, ಸಾಹಿತ್ಯ, ಸಂಸ್ಕೃತಿಯನ್ನು ವಿಶ್ವಕ್ಕೆ ಪಸರಿಸುವ ಸದುದ್ದೇಶದಿಂದ “ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್” ಸಂಸ್ಥೆ ಸಿಂಗಾಪುರದಲ್ಲಿ ಹಮ್ಮಿಕೊಂಡಿರುವ “ಎರಡನೇ ವಿಶ್ವ ಕನ್ನಡ ಹಬ್ಬ”ದ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಅಧ್ಯಕ್ಷರಾದ ಶಿವಕುಮಾರ್ ನಾಗರ ನವಿಲೆಯವರು ಹಿರಿಯ ನಟ ದೊಡ್ಡಣ್ಣನವರಲ್ಲಿ ಮನವಿ ಮಾಡಿದರು.
ದೊಡ್ಡಣ್ಣ ಅವರು ಭದ್ರಾವತಿಯ ವಿಗ್ನೇಶ್ವರರ ಕಲಾ ಸ0ಗ ಎ0ಬವುದರಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಿ, ‘ಗಂಧರ್ವ ರಂಗ’ ಎಂಬ ಹೆಸರಿನ ರಂಗಭೂಮಿ ತಂಡವನ್ನು ತಮ್ಮ ಸ್ನೇಹಿತರೊಂದಿಗೆ ಪ್ರಾರ0ಭಿಸುತ್ತಾರೆ. ಯಶಸ್ವಿ ನಾಟಕಗಳನ್ನು ನೀಡುವ ಮೂಲಕ ಅತ್ಯುತ್ತಮ ನಟರಾಗಿ ಹೊರಹೊಮ್ಮಿದ ಇವರು ಆನಂತರ ಕನ್ನಡ ಮತ್ತು ತಮಿಳು ಚಲನಚಿತ್ರೋದ್ಯಮಕ್ಕೆ ಪ್ರವೇಶ ಮಾಡಿದರು.
ಡ್ಡಣ್ಣ ಒಬ್ಬ ಬಹುಮುಖ ನಟ, ಖಳನಾಯಕರು, ಪೊಲೀಸ್ ಮತ್ತು ಇತರ ಪಾತ್ರಗಳಲ್ಲಿ ಅಮೋಘ ನಟನೆ ಮಾಡಿದ್ದಾರೆ. ವಿಶೇಷವಾಗಿ ಹಾಸ್ಯ ನಟರಾಗಿ ಇವರು ಯಶಸ್ವಿಯಾಗಿದ್ದಾರೆ. ಇಂತಹ ಹಿರಿಯ ನಟರನ್ನು ಗೌರವಿಸುವ ಸಲುವಾಗಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆ ಸಿಂಗಾಪುರದ ಎರಡನೇ ವಿಶ್ವ ಕನ್ನಡ ಹಬ್ಬಕ್ಕೆ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ನಟ ದೊಡ್ಡಣ್ಣರವರು ಸಂಸ್ಥೆಯ ಸಾಧನೆಗಳು ಅಪಾರವಾಗಿದ್ದು, ಕಳೆದ ಸಾಲಿನಲ್ಲಿ ದುಬೈ ರಾಷ್ಟ್ರದಲ್ಲಿ ನಡೆದ ಮೊದಲ ವಿಶ್ವ ಕನ್ನಡ ಹಬ್ಬವನ್ನು ಗುಣಗಾನ ಮಾಡುತ್ತಾ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಈ ಅತ್ಯತ್ತಮ ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ತಿಳಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ನಟಿ ರೂಪಿಕಾ, ಕಿಶೋರ್ ಕುಮಾರ್, ಕಲಾನವೀನ್, ಸೈ ರಮೇಶ್ ಹಾಗೂ ಮಂಜುಳಾ ಪಾವಗಡ ಜೊತೆಗಿದ್ದರು.