ನೆಲಮಂಗಲ : ಹಿರಿಯ ನಟಿ, ಡಾ.ಎಂ.ಲೀಲಾವತಿ 87 ವರ್ಷ ವಯಸ್ಸಾದ ಹಿನ್ನಲೆ, ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದಾರೆ, ಅವರ ಬಹುದಿನದ ಕನಸಾದ ಪಶು ಆಸ್ಪತ್ರೆಯನ್ನು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಬಳಿಯ ಧರ್ಮನಾಯಕನ ತಾಂಡ್ಯದ ಬಳಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಗಳವಾರ ಉದ್ಘಾಟಸಿದರು.
ಇದಕ್ಕೂ ಮುನ್ನ ಡಾ.ಎಂ.ಲೀಲಾವತಿ ಯವರ ತೋಟದ ಮನೆಯಲ್ಲಿ ಲೀಲಾವತಿಯವರ ಆರೋಗ್ಯವನ್ನು ಉಪ ಮುಖ್ಯಮಂತ್ರಿಗಳು ವಿಚಾರಿಸಿದರು. ನಂತರ ಬೆಂ.ಗ್ರಾ.ಜಿಲ್ಲಾಡಳಿತ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ನಿರ್ಮಿಸಿದ್ದ ನೂತನ ಪಶು ಆಸ್ಪತ್ರೆಯನ್ನು, ಗೋ ಪೂಜೆ ಮಾಡಿ, ಮೇವಿನ ಬೀಜ ವಿತರಿಸಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.
ನಂತರ ಮಾತನಾಡಿದ ಡಿಕೆ.ಶಿವಕುಮಾರ್, ಒಂದು ವಾರದ ಹಿಂದೆ ಲೀಲಾವತಿ ಹಾಗೂ ವಿನೋದ್ ರಾಜ್ ನಮ್ಮ ಮನೆಗೆ ಬಂದಿದ್ದರು, ಪಶು ವೈಧ್ಯ ಶಾಲೆ ಕಟ್ಟೀದ್ದೀವಿ ಉದ್ಘಾಟನೆ ಮಾಡಿಕೊಡಿ ಎಂದಿದ್ದರು, ಒಂದು ದೊಡ್ಡ ಸಂದೇಶ ಇಬ್ಬರು ಸಹ ಕೊಟ್ಟಿದ್ದಾರೆ, ಎಷ್ಟೇ ದುಡ್ಡಿರಬಹುದು ಇಂತಹ ಮನಸ್ಸು ಎಲ್ಲರಿಗೂ ಬರುವುದಿಲ್ಲ.
ಅವರೇನು ಶ್ರೀಮಂತರೇನು ಅಲ್ಲ. ಸಮಾಜಕ್ಕೆ ಕೊಡುಗೆ ಕೊಡಬೇಕು ಅಂತಾ ಎಲ್ಲರಿಗೂ ಮಾರ್ಗದರ್ಶನ ವಾಗಿದ್ದಾರೆ
ಅವರ ಆಲೋಚನೆ ತುಂಬಾ ದೊಡ್ಡದು,, ಬೆಂಗಳೂರಿಗೆ ಹತ್ತಿರವಾದ ಸ್ಥಳ ಇದು. ಇದು ಇಡೀ ನಮ್ಮ ಎಲ್ಲಾ ವರ್ಗದ ಜನರಿಗೆ ಮಾದರಿ, ವ್ಯವಸಾಯದಲ್ಲೇ ಬದುಕಿದ್ದರು, ಇಂತಹ ಸೇವೆ ಮಾಡುತ್ತಿದ್ದಾರೆ,
ಅವರ ಸೇವೆ 60 ವರ್ಷಗಳಿಂದ ನಡೆದು ಬಂದಿದೆ, ಸರ್ಕಾರದ ಪ್ರತಿನಿಧಿಯಾಗಿ ಬಂದಿದ್ದೀನಿ. ಇಂತಹ ಪವಿತ್ರ ಕಾರ್ಯಕ್ಕೆ ಭಾಗವಹಿಸಿದ್ದು ಸಂತೋಷ ತಂದಿದೆ ಎಂದರು.ನಟ ವಿನೋದ್ ರಾಜ್ ಅವರ ಬೇಡಿಕೆ: ಚಿತ್ರರಂಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಲಾವಿದರಿಗೆ ಪಿಂಚಣಿ ವ್ಯವಸ್ಥೆ ಕಲ್ಪಿಸಬೇಕು ಎಂಬುದು. ಹಾಗೂ ಈ ಭಾಗದ ರೈತರು ದಶಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿತ್ತು ಜಮೀನನ್ನು ಅರಣ್ಯ ವಶಪಡಿಸಿಕೊಂಡಿದೆ.
ಬದಲು ಸೇರಿದಂತೆ ಕೆಲ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದರು. ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಮಾಪಕರ ಸಂಘ ಕಲಾವಿದರ ಸಂಘದಿಂದ ಮಾಹಿತಿ ಪಡೆದುಕೊಂಡು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕಾನೂನಿನ ಚೌಕಟ್ಟಿನಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಎಂಎಲ್ಸಿ ರವಿ. ಶಾಸಕ ಎನ್ ಶ್ರೀನಿವಾಸ್. ನಟ ವಿನೋದ್ ರಾಜ್. ಜಿಲ್ಲಾಧಿಕಾರಿ ಶಿವಶಂಕರ್ ಎಸ್ ಪಿ. ಮಲ್ಲಿಕಾರ್ಜುನ ಬಾಲದಂಡಿ. ಪಶು ಇಲಾಖೆ ಪಶುವೈದ್ಯಾಧಿಕಾರಿ ಸಿದ್ದಪ್ಪ. ನಿರ್ಮಾಪಕ ಭಾ ಮಾ ಹರೀಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿಆರ್ ಗೌಡ. ಮುಖಂಡರಾದ ನಾರಾಯಣಗೌಡ. ನಾಗರಾಜು. ಸಿಎಂ ಗೌಡ. ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.