ಚಳ್ಳಕೆರೆ: ಗ್ರಾಮೀಣ ಭಾಗದ ಜನರ ಬದುಕು ಹಸನಾಗುವುದು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿದಾಗ ಮಾತ್ರ ಸಾಧ್ಯ ಎಂದು ಚಲನಚಿತ್ರ ಹಿರಿಯ ನಟ ಡಾ.ಶ್ರೀನಾಥ್ ತಿಳಿಸಿದರು.ಚಳ್ಳಕೆರೆ ತಾಲೂಕಿನ ಸಾಣಿಕೆರೆ ಗ್ರಾಮದ ಬಳಿ ಇರುವ ವೇದ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ವೇದೋತ್ಸವ ಸಮಾರಂಭದಲ್ಲಿ ಭಾಗವಹಿಸಿ.ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಕರ್ನಾಟಕದಲ್ಲಿ ಅತಿ ಕಡಿಮೆ ಮಳೆ ಬೀಳುವ ತಾಲೂಕು ಕೇಂದ್ರವಾದ ಚಳ್ಳಕೆರೆಯಲ್ಲಿ.
ರೈತರು ಹಾಗೂ ಬಡ ಕೂಲಿ ಕಾರ್ಮಿಕರಿಗೆ ತಮ್ಮ ಬದುಕಿನ ಭದ್ರತೆ ಇಲ್ಲದೆ. ಜೀವನ ನಡೆಸುವುದೇ ಬದುಕಿನ ಹೋರಾಟವಾಗಿದೆ. ಇಂತಹ ದಯನೀಯ ಪರಿಸ್ಥಿತಿಯಲ್ಲಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು. ಅದು ಕನಸಿನ ಮಾತಾಗಿದೆ. ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ. ವೇದ ವಿದ್ಯಾ ಸಂಸ್ಥೆ ಗ್ರಾಮೀಣ ಭಾಗದಲ್ಲಿ ಮಕ್ಕಳ ಶಿಕ್ಷಣಕ್ಕೆ ಸಹಾಯ ವಾಗಲೆಂದು.
ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ. ಗ್ರಾಮೀಣ ಮಕ್ಕಳ ವಿದ್ಯಾ ವಿಕಾಸದಲ್ಲಿ ಈ ಸಂಸ್ಥೆ ಮಹತ್ವದ ಪಾತ್ರವಹಿಸಿದೆ. ಈ ಸಂಸ್ಥೆ ಸೇವೆ ಅಭಿನಂದನೀಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಸಿದ್ದ ಚಲನ ಚಿತ್ರ ರಂಗದ ಹಿರಿಯ ನಟ ಪ್ರಣಯರಾಜ ಡಾ.ಶ್ರೀನಾಥ್ ಅವರಿಗೆ ವೇದ ಕಾಯಕ ರತ್ನ ಪ್ರಶಸ್ತಿ ಪ್ರಧಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ನಟ ಡಾ.ಶ್ರೀನಾಥ್. ಈ ಶಿಕ್ಷಣ ಸಂಸ್ಥೆಯ ಹೆಸರಿನಲ್ಲಿ ವೇದ ಇರುವುದು. ಪುರಾತನ ಭಾರತೀಯ ಗುರುಕುಲ ಪದ್ಧತಿಯು ನೆನಪಿಗೆ ಬರುವಂತಿದೆ.ಗ್ರಾಮೀಣ ಭಾಗದಲ್ಲಿ ಆಧುನಿಕ ನಗರಗಳಲ್ಲಿ ಇರುವಂತಹ ವಿದ್ಯಾಸಂಸ್ಥೆಯಲ್ಲಿ ಇರುವ ಎಲ್ಲಾ ಸೌಕರ್ಯಗಳನ್ನು ವೇದಾ ವಿದ್ಯಾ ಸಂಸ್ಥೆಯಲ್ಲಿ ಇದ್ದು. ನುರಿತ ಶಿಕ್ಷಕ, ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿರುವುದು ಈ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗ ಪುಣ್ಯವಾಗಿದೆ ಎಂದು ಹೇಳಿದರು.
ಮೊದಲು ಈ ಸಂಸ್ಥೆಯವರು ನನ್ನನ್ನು ಅತಿಥಿಯಾಗಿ ಆಹ್ವಾನಿಸಿದಾಗ. ಇವರು ನನ್ನನ್ನು ಚಲನಚಿತ್ರನಟನೆಂದು. ಇವರ ಕಾರ್ಯಕ್ರಮಕ್ಕೆ ಜನ ಸೇರಲೆಂದು ಕರೆದಿದ್ದಾರೆಂದು ತಿಳಿದಿದ್ದೆ. ಈ ಕಾರ್ಯಕ್ರಮಕ್ಕೆ ಬರಲು ಮೊದಲು ನಿರಾಕರಿಸಿದ್ದೆ. ಆದರೂ ಇವರ ಪ್ರೀತಿಯ ಒತ್ತಡಕ್ಕೆ ಮಣಿದು ಬಂದೆ. ಬಂದಮೇಲೆ ನನಗೆ ಅನಿಸಿದ್ದು. ಇಂತಹ ಶಿಕ್ಷಣದಲ್ಲಿ ಬಡ ವಿದ್ಯರ್ಥಿಗಳಿಗೆ ಸೇವೆ ಮಾಡುವಂತಹ ಸಂಸ್ಥೆಯನ್ನು ನೋಡಿದ್ದು ನನ್ನ ಭಾಗ್ಯ ಎಂದರು.
ವೇದ ವಿದ್ಯಾಸಂಸ್ಥೆ ಅಧ್ಯಕ್ಷ ರವೀಂದ್ರ ಮಾತನಾಡಿ. ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ದೂರದ ನಗರದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಜನೆ ಮಾಡಲು. ಹಣವಿಲ್ಲದೆ ವಂಚಿತರಾಗುತ್ತಿರುವುದನ್ನು ಗಮನಿಸಿ. ಕಡಿಮೆ ಖರ್ಚಿನಲ್ಲಿ ಉತ್ತಮ ಶಿಕ್ಷಣವನ್ನು ವಿದ್ಯಾರ್ಥಿ ಗಳಿಗೆ ಕೊಡುವುದಕ್ಕೆ ನಮ್ಮ ಸಂಸ್ಥೆಯನ್ನು ಸ್ಥಾಪಿಸಿದೆವು ಎಂದರು.
ಈ ಕಾರ್ಯಕ್ರಮದಲ್ಲಿ ಡಿ.ಆರ್.ಕಿರಣ್, ಪ್ರಾಂಶುಪಾಲೆ ಪುಷ್ಪರಾಣಿ, ಪುಟ್ಟಸ್ವಾಮಿ, ಪ್ರಗತಿಪರ ರೈತ ಡಾ.ಎ.ದಯಾನಂದ ಮೂರ್ತಿ, ಪರಿಸರ ಪ್ರೇಮಿ ಮಲ್ಲಿಕಾರ್ಜುನಪ್ಪ, ದಿನೇಶ್ ರೆಡ್ಡಿ, ಮಲ್ಲೇಶಪ್ಪ, ರವಿನಾಯಕ, ಪ್ರಸನ್ನ, ರಾಜು, ಕೃಷ್ಣಾರೆಡ್ಡಿ, ಪ್ರಶಾಂತ, ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶಿಕ್ಷಕರು, ವಿದ್ಯಾ ಸಂಸ್ಥೆಯ ಸಿಬ್ಬಂದಿ ಮತ್ತು ಸಾಣಿಕೆರೆ ಗ್ರಾಮದ ಇತರೆ ಮುಖಂಡರು ಭಾಗವಹಿಸಿದ್ದರು.