ಬೆಂಗಳೂರು: ಹಿರಿಯ ಪತ್ರಕರ್ತ ವೆಂಕಟಸುಬ್ಬು ಮೋಕ್ಷಗುಂಡಂ ಅವರು ಚಳ್ಳಕೆರೆಯ ನಿವಾಸದಲ್ಲಿ ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ.
ಸಂಯುಕ್ತ ಕರ್ನಾಟಕದಲ್ಲಿ ಸುಧಿರ್ಘಕಾಲ ಸೇವೆ ಸಲ್ಲಿಸಿದ್ದ ಅವರು ಇಳಿವಯಸ್ಸಿನಲ್ಲಿಯೂ ಕ್ರಿಯಾಶೀಲವಾಗಿದ್ದ ಸ್ನೇಹಜೀವಿ.
ಕೆಯುಡಬ್ಲ್ಯೂಜೆ ಸಂತಾಪ: ಹಿರಿಯ ಪತ್ರಕರ್ತ ವೆಂಕಟಸುಬ್ಬು ಅವರ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಬೆಂಗಳೂರು ಬಂದಾಗಲೆಲ್ಲ ಕೆಯುಡಬ್ಲ್ಯೂಜೆ ಕಚೇರಿಗೆ ಭೇಟಿ ನೀಡುವ ಸೌಜನ್ಯ ಇಟ್ಟುಕೊಂಡಿದ್ದ ವೆಂಕಟಸುಬ್ಬು ಅವರು ಕಿರಿಯ ಪತ್ರಕರ್ತರ ಜೊತೆಗೂ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ಸದಾ ಹಸನ್ಮುಖಿಯಾದ ವೆಂಕಟಸುಬ್ಬು ಅವರ ನಿಧನದಿಂದ ಸುದ್ದಿಮನೆಯ ಹಿರಿಯ ಕೊಂಡಿ ಕಳಚಿದಂತಾಗಿದೆ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಶೋಕಿಸಿದ್ದಾರೆ.