10ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನವನ್ನು ನೀಡುತ್ತಿರುವ ಜೈಪೂರ್ ಪಿಂಕ್ ಪ್ಯಾಂಥರ್ಸ್ ತನನ್ನ ಗೆಲುವಿನ ದಂಡ ಯಾತ್ರೆಯನ್ನು ಮುಂದುವರೆಸಿದೆ. ಪ್ರಸಕ್ತ ಋತುವಿನಲ್ಲಿ ಜೈಪೂರ್ ಸತತ 10ನೇ ಗೆಲುವಿನ ನಗೆ ಬೀರಿದೆ.
ಬುಧವಾರ ಎಸ್ಎಂಎಸ್ ಇಂದೋರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಜೈಪೂರ್ 37-27 ರಿಂದ ಹರಿಯಾಣ ಸ್ಟೀಲರ್ಸ್ ತಂಡವನ್ನು ಮಣಿಸಿ ಅಬ್ಬರಿಸಿತು.ಈ ಮೂಲಕ ಜೈಪೂರ್ ಆಡಿದ 14 ಪಂದ್ಯಗಳಲ್ಲಿ 10 ಗೆಲುವು, 2 ಸೋಲು, 2 ಡ್ರಾ ಸಾಧಿಸಿದ್ದು 58 ಅಂಕಗಳನ್ನು ಕಲೆ ಹಾಕಿದ್ದು, ಮೊದಲ ಸ್ಥಾನ ಭಧ್ರ ಪಡಿಸಿಕೊಂಡಿದೆ.
ಹರಿಯಾಣ ಸ್ಟೀಲರ್ಸ್ ಆಡಿದ 13 ಪಂದ್ಯಗಳಲ್ಲಿ 7 ಜಯ ಸಾಧಿಸಿದ್ದು, 39 ಅಂಕಗಳನ್ನು ಕಲೆ ಹಾಕಿದ್ದು ಐದನೇ ಸ್ಥಾನದಲ್ಲಿದೆ. ಮೊದಲಾವಧಿಯಲ್ಲಿ ಜೈಪೂರ್ ಪಿಂಕ್ ಪ್ಯಾಂಥರ್ಸ್ ಭರ್ಜರಿ ಪ್ರದರ್ಶನ ನೀಡಿತು. ಈ ವೇಳೆ ಟ್ಯಾಕಲ್ನಲ್ಲಿ 9 ಅಂಕಗಳನ್ನು ಕಲೆ ಹಾಕಿ ಅಬ್ಬರಿಸಿತು. ಇನ್ನು ದಾಳಿಯಲ್ಲಿ ಐದು ಅಂಕ ಕಲೆ ಹಾಕಿದರು. ಹರಿಯಾಣ ಸ್ಟೀಲರ್ಸ್ ಒಂದು ಬಾರಿ ಅಂಕಗಳನ್ನು ಕಲೆ ಹಾಕಿತು.