ಕಳೆದಒಂದು ತಿಂಗಳಿನಿಂದಉದಯ ಟಿ ವಿ ಯಲ್ಲಿ ಪ್ರಸಾರವಾಗುತ್ತಿರುವ ಹೊಸ ಧಾರಾವಾಹಿ ಮೈನಾ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಹಿರಿಯ ಕಲಾವಿದರಾದ ಭವ್ಯ ಶ್ರಿ, ಟಿ ಎಸ್ ನಾಗಾ ಭರಣ ಅಪೂರ್ವ ಮುಂತಾದ ಕಲಾವಿದರು ನಟಿಸುತ್ತಿದ್ದಾರೆ.
ನಾಯಕ ನಟಿಯಾಗಿ ಲಕ್ಷಣ ಖ್ಯಾತಿಯ ವಿಜಯಲಕ್ಷ್ಮಿ ನಟಿಸುತ್ತಿದ್ದಾರೆ.ಉತ್ತಮ ಕಥಾ ಹಂದರ ಹೊಂದಿರುವ ಮೈನಾ ದಿನದಿಂದ ದಿನಕ್ಕೆ ಜನರ ಮನಸಲ್ಲಿ ಮನೆ ಮಾತಾಗುತ್ತಿದೆ.ಹಾಗೆಯೇ ಉತ್ತರ ಕರ್ನಾಟಕದ ಬೀದರ್ ನ ಹೊಸ ಪ್ರತಿಭೆ ರಂಭಾ ಸಜ್ಜನ್ ರವರು ನಟಿಸುತ್ತಿದ್ದು ಇದು ಉತ್ತರ ಕರ್ನಾಟಕದ ಜನರಿಗೆ ಸಂತಸದ ಸುದ್ದಿಯಾಗಿದೆ.
ಜೊತೆಗೆ ಶ್ರೀ ವಾಣಿ, ಭುವನ, ಅನುಷಾ, ಯಶಸ್ವಿನಿ ಮುಂತಾದವರ ತಾರಾ ಬಳಗ ಇದೆ.ಆನಂದ್ ಆಡಿಯೋ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಈ ಮೈನಾ ಧಾರವಾಹಿಗೆ ವಿವೇಕ್ ಸಜ್ಜನ್ ರವರ ಸಹ ನಿರ್ದೇಶನ ಹಾಗೂ ಸಂತೋಷ್ ಗೌಡ ಅವರ ನಿರ್ದೇಶನವಿದೆ.