This is the title of the web page
This is the title of the web page

ಕುರಾನ್ ಪಠಣ ವಿರೋಧಿಸಿ ವಿಹಿಂಪ ಬೃಹತ್ ಪ್ರತಿಭಟನೆ

ಬೇಲೂರು :ವಿಶ್ವ ವಿಖ್ಯಾತ ಚನ್ನ ಕೆಡಶವನ ರಥೋತ್ಸವದ ಸಂದರ್ಭದಲ್ಲಿ , ಮುಸ್ಲಿಂ ಖಾಜಿಗಳಿಂದ ನಡೆಯುವ ಕುರಾನ್ ಪಠಣ ವಿರೋದಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ಬೃಹತ್ ಪ್ರತಿಭಟನೆ ಮಾಡಲಾಯಿತು.
ನಗರದ ಜೂನಿಯರ್ ಕಾಲೇಜು ಮೈದಾನದಿಂದ ಮೆರವಣಿಗೆ ಹೊರಟು, ಚನ್ನ ಕೇಶವನ ದೇವಾಲಯದ ಆವರಣದಲ್ಲಿ ಭಜರಂಗದಳದ, ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಕುರಾನ್ ಪಠಣ ವಿರೋದಿಸಿ ಘೋಷಣೆ ಕೂಗಿ ಪ್ರತಿಭಟಿಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಮುಕಂಡ ಸಂತೋಷ್ ಕೆಂಚಾಂಬ ಮಾತನಾಡಿ, ಬ್ರಹ್ಮ ರಥೋತ್ಸವದ ವೇಳೆ ಅನ್ಯ ಧರ್ಮಿಯರು ಕುರಾನ್ ಪಠಣ ಮಾಡುವುದು ಲಕ್ಷಾಂತರ ಹಿಂದೂಗಳ ಮನಸ್ಸಿಗೆ ನೋವು ತಂದಿದೆ. ದೊಡ್ಡ ಮೇದೂರಿನ ಖಾಜಿ ಸಾಹೇಬ್ ಅವರಿಂದ ಕುರಾನ್ ಪಠಣ ಮಾಡಿಸಿದ ನಂತರ ರಥೋತ್ಸವ ಎಳೆಯುವ ಪದ್ದತಿ ಆತಂಕಕಾರಿಯಾಗಿದೆ. ಇದು ಹಿಂದೂ ಧಾರ್ಮಿಕ ಪದ್ದತಿಗೆ ವಿರುದ್ದವಾಗಿದೆ. ಕುರಾನ್ ಪಠಣ ಮಾಡುವುದು ಶಾಶ್ವತವಾಗಿ ನಿಲ್ಲಿಸಬೇಕು. 1932 ರಲ್ಲಿ ಪ್ರಕಟವಾಗಿರುವ ಮುಜರಾಯಿ ಇಲಾಖೆ ಮ್ಯಾನ್ಯುಯಲ್ ನಲ್ಲಿ ಇದಕ್ಕೆ ಅವಕಾಶವಿದೆ. ಆದರೆ ಇದು ಸರಿಯಲ್ಲ. ಈ ಭಾರಿ ರಥೋತ್ಸವ ಸಂದರ್ಭದಲ್ಲಿ ಕುರಾನ್ ಪಠಣ ಮಾಡುವುದು ರದ್ದಾಗಬೇಕು ಎಂದು ಆಗ್ರಹಿಸಿದರು.

ಭಜರಂಗದಳ, ಹಾಗೂ ವಿ. ಹಿ. ಪರಿಷತ್ ಒಂದು ಕಡೆ ವಿರೋಧ ವ್ಯಕ್ತಪಡಿಸಿದರೆ, ಮತ್ತೊಂದೆಡೆ ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಸಾಂಕೇತಿಕವಾಗಿ, ಒಂದೆಡೆ ಸಭೆ ಸೇರಿ, ಗುರುವಾರದಂದು ಇವರ ವಿರುದ್ದ ಪ್ರತಿಭಟನೆ ಮಾಡುವುದಾಗಿ ತೀರ್ಮಾನಿಸಿದ್ದಾರೆ.

ಇದೇ ಸಂದರ್ಭದಲ್ಲಿ ರೈತಸಂಘದ ಪ್ರಧಾನ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಮಾತನಾಡಿ, ಕುರಾನ್ ಪಠಣ ಮಾಡುವುದು ಇತಿಹಾಸದಿಂದಲೂ ನಡೆದುಬಂದ ಪದ್ದತಿ. ಯಾರೋ ಇತಿಹಾಸಕಾರ ಶ್ರೀ ವತ್ಸ ವಟಿ ಎಂಬುವನು ಕುರಾನ್ ಪಠಣ ಮಾಡುವುದು ಇತಿಹಾಸದಲ್ಲಿಯೇ ಉಲ್ಲೇಖವಿದೆ. ಎಂದ ವ್ಯಕ್ತಿ ಇಂದು ರಾಜಕಾರಣಿಗಳ ಪರಿಸ್ಥಿತಿಯ ಕೈಗೊಂಬೆಯಾಗಿ, ಉಲ್ಲೇಖ ವಿಲ್ಲ. ಎಂಬ ಹೇಳಿಕೆ ನೀಡುವುದನ್ನು ನೋಡಿದರೆ, ಇವನೊಬ್ಬ ಇತಿಹಾಸಕಾರನಾ.. ಎಂಬುದೆ ಅನುಮಾನ ವ್ಯಕ್ತವಾಗಿದೆ.

ಬೇಲೂರಿನ ರಾಜಕಾರಣ ಮಾಡಲು ಬಂದಿರುವ, ಸಿದ್ದೇಶ್ ನಾಗೇಂದ್ರ, ಸಂತೋಷ್ ಕೆಂಚಾಂಬ ಆಮದು ಗಿರಾಕಿಗಳಿಗೆ ಕೈಗೊಂಬೆಯಾಗಿ ಕೆಲಸ ಮಾಡುವ ಶ್ರೀವತ್ಸ ವಟಿಗೆ ನಾಚಿಕೆಯಾಗಬೇಕು. ಬೆಲೆ ಏರಿಕೆ ಬಗ್ಗೆ, ದ್ವನಿ ಎತ್ತದವ ಬೇಲೂರಿನಲ್ಲಿ ಜಾತಿ, ಜಾತಿ ಗಳ ನಡುವೆ ವಿಷ ಬೀಜ ಬಿತ್ತುವ ಕೆಲಸಕ್ಕೆ ಕೈ ಹಾಕಲು ನಾವು ಬಿಡುವುದಿಲ್ಲ. ಬೇಲೂರಿನ ಜನ ಶಾಂತಿ ಪ್ರೀಯರು. ಕಳೆದ ವರ್ಷವು ನಾವು ವಿರೋಧ ಮಾಡಿದ್ದೆವು.

ಇದು ತಲಾ. ತಲಾಂತರದಿಂದ ನಡೆದುಕೊಂಡು ಬಂದಿದೆ. ಚನ್ನಕೇಶವನನ್ನು ದಾಸ್ಯದಿಂದ ಬಿಡುಗಡೆ ಮಾಡುವ ಉದ್ದೇಶದಿಂದ ಪ್ರತಿಭಟನೆ ಮಾಡುತ್ತಿದ್ದಾರಂತೆ. ಚನ್ನಕೇಶವನೇ ದಾಸ್ಯದಲ್ಲಿದ್ದಾನೆ ಎಂದರೆ ನಾವೆಲ್ಲ ಯಾರು? ಎಂಬ ಪ್ರಶ್ನೆ ನಮ್ಮಲ್ಲಿ ಆತಂಕ ಸೃಷ್ಟಿಸಿದೆ. ಕೂಡಲೆ ಸಂತೋಷ್ ಕೆಂಚಾಂಬ ಮತ್ತು ಸಿದ್ದೇಶ್ ನಾಗೇಂದ್ರ ನನ್ನು ಗಡಿಪಾರು ಮಾಡಬೇಕಾದ ಅನಿವಾರ್ಯತೆ ಇದೆ. ಎಂದು ಕಿಡಿಕಾರಿದರು.

ಕರವೇ ಪ್ರವೀಣ್ ಶೆಟ್ಟಿ ಬಣದ ತಾಲ್ಲೂಕು ಅದ್ಯಕ್ಷ, ಭೋಜೆಗೌಡ ಮಾತನಾಡಿ, ನಾವು ಪಕ್ಷಾತೀತವಾಗಿ ಗುರುವಾರ ಇವರ ವಿರುದ್ದ ಸಾಂಕೇತಿಕ ವಾಗಿ ತಾಲ್ಲೂಕಿನ ವಿವಿಧ ಸಂಘಟನೆ ಗಳಿಂದ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಸಂತೋಷ ಕೆಂಚಾಂಬ ಮತ್ತು ಸಿದ್ದೇಶ್ ನಾಗೇಂದ್ರ ಹೊರ ತಾಲ್ಲೂಕಿನಿಂದ ಚುನಾವಣೆಗಾಗಿ ಬಂದು ಬೇಲೂರಿನ ಜನತೆಯ ಶಾಂತಿ ಕದಡುವ ಕೆಲಸಕ್ಕೆ ಮುಂದಾಗಿರುವುದು ಖಂಡನೀಯ. ಬೇಲೂರು ದೇವಾಲಯಕ್ಕೆ 900 ವರ್ಷಗಳ ಇತಿಹಾಸವಿದೆ.

ಆದರೆ ಯಾರೂ ಅವಿವೇಕಿಗಳು ಜಾತಿ, ಜಾತಿಗಳ ನಡುವೆ ವಿಷಬೀಜ ಬಿತ್ತಿ ಬೇಲೂರಿನ ನೆಮ್ಮದಿ ಹಾಳು ಮಾಡಲು ಹೊರಟಿದ್ದಾರೆ. ಬೇಲೂರು ಜನ ಶಾಂತಿ ಪ್ರೀಯರು ಮುಂದಿನ ದಿನದಲ್ಲಿ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ. ಸರ್ಕಾರವಾಗಲಿ, ಪೊಲೀಸ್ ಇಲಾಖೆಯಾಗಲಿ ಇವರ ಮನವಿಯನ್ನು ಪುರಸ್ಕರಿಸಬಾರದು ಎಂದು ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಶಾಸಕ ಲಿಂಗೇಶ್, ಪ್ರತಿಕ್ರಿಯೆ ನೀಡಿ. ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯಗಳನ್ನು ತಿರಿಚಲು ಯಾರಿಂದಲೂ ಸಾದ್ಯವಿಲ್ಲ. ಸಂಪ್ರದಾಯದಂತೆ ರಥೋತ್ಸವ ನಡೆಯುತ್ತೆ. ಯಾರೋ ಹೇಳಿದ ತಕ್ಷಣಕ್ಕಾಗಲಿ, ದಮ್ಕಿ ಹಾಕಿದ ತಕ್ಷಣ ಹೆದರುವ ಶಾಸಕ ನಾನಲ್ಲ. ಸರ್ಕಾರ ತನ್ನದೆಯಾದ ಕಾನೂನು ವ್ಯವಸ್ಥೆ, ರಕ್ಷಣೆ ನೀಡುತ್ತದೆ. ಹಿಂದೂ ಪರ ಸಂಘಟನೆಗಳಿರಬಹುದು, ಮುಸ್ಲಿಂ ಸಂಘಟನೆಗಳಿರಬಹುದು ಯಾವುದು ಲೆಕ್ಕಕ್ಕಿಲ್ಲ.

ಸಂವಿಧಾನವೇ ಮೇಲು ನಾವೆಲ್ಲ ಸಂವಿದಾನದ ವ್ಯವಸ್ಥೆಯಲ್ಲಿ ರಬೇಕು. ಇದುವರೆವಿಗೂ ಯಾವ ಅಡ್ಡಿ ಆತಂಕಗಳು ನಡೆದಿಲ್ಲ ಮುಂದೆಯೂ ನಾನು ಶಾಸಕನಾಗಿರುವ ವರೆಗೂ ಬಿಡುವುದಿಲ್ಲ. ಇದು ಮಂಗಳೂರಲ್ಲ. ಬೇಲೂರು. ಬೇಲೂರಿನಲ್ಲಿ ಶಾಂತಿ ಕದಡಲು ಅವಕಾಶವಿಲ್ಲ. ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು ಸೇರಿದಂತೆ ಕಾರ್ಯಕರ್ತರು ಭಾಗಿಯಾಗಿದ್ದರು.