This is the title of the web page
This is the title of the web page

ವಿಜಯ ಸಂಕಲ್ಪ ಅಭಿಯಾನ: ಸಿಎಂ ಬೊಮ್ಮಾಯಿ

ನಂಜನಗೂಡು: ನಗರದ ಮೇದರಗೇರಿ ಬಡಾವಣೆಯಲ್ಲಿ ಬಿಜೆಪಿ ಸರಕಾರದ ಸಾಧನೆಗಳ ಕರಪತ್ರವನ್ನು ಜನರಿಗೆ ವಿತರಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾರತೀಯ ಜನತಾ ಪಕ್ಷದ ವಿಜಯ ಸಂಕಲ್ಪ ಅಭಿಯಾನದಲ್ಲಿ ಭಾಗಿಯಾದರು.
ಭಾನುವಾರ ನಗರದ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಮುಂಭಾಗದಲ್ಲಿ ವಿಕಲ ಚೇತನರಿಗೆ ಸಾಧನ ಸಲಕರಣೆಗಳನ್ನು ವಿತರಿಸಿ ಬಳಿಕ ಬೈಪಾಸ್ ರಸ್ತೆಯಲ್ಲಿರುವ ಮೇದರ ಗೇರಿ ಬಡಾವಣೆಗೆ ಆಗಮಿಸಿದ ಅವರು ಬುಟ್ಟಿ ಹೆಣೆಯುವ ವೃತ್ತಿಯನ್ನವಲಂಭಿಸಿರುವ ಸ್ಥಳೀಯರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಗಳನ್ನು ಬಿಂಬಿಸುವ ಕರಪತ್ರಗಳನ್ನು ವಿತರಿಸಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡರು.

ಈ ಸಂದರ್ಭ ಸ್ಥಳದಲ್ಲಿ ನೆರೆದಿದ್ದ ಬುಟ್ಟಿ ಹೆಣೆಯುವ ಮಹಿಳೆಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಅವರಿಂದ ಕರಪತ್ರಗಳನ್ನು ಸ್ವೀಕರಿಸಿ ಪ್ರತಿಯಾಗಿ ಅವರಿಗೆ ಇಡ್ಲಿಗಳನ್ನು ತಯಾರಿಸುವ ಚಿಬ್ಲುಗಳನ್ನು ಉಡುಗೊರೆ
ಯಾಗಿ ನೀಡಿದರು. ಈ ವೇಳೆ ಸ್ಥಳೀಯರು ನೀಡಿದ ಉಡುಗೊರೆ ಸ್ವೀಕರಿಸಿದ ಮುಖ್ಯಮಂತ್ರಿ ಬೊಮ್ಮಾಯಿ ನಿಮ್ಮ ಪ್ರೀತಿಯ ಉಡುಗೊರೆಗೆ ಧನ್ಯವಾದಗಳು ಎಂದು ಹೇಳಿ ಮುಂಬರುವ ದಿನಗಳಲ್ಲಿ ಇದರಿಂದ ತಯಾರಿಸಲಾದ ಇಡ್ಲಿಯನ್ನೂ ಕಳುಹಿಸಿಕೊಡುವಂತೆ ಕೇಳಿದರು.

ಈ ಸಂದರ್ಭ ಶಾಸಕ ಬಿ.ಹರ್ಷವರ್ಧನ್ ಜನವರಿ 21ರಿಂದ 29ರವರೆಗೆ ನಂಜನಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಜಯ ಸಂಕಲ್ಪ ಅಭಿಯಾನವನ್ನು ನಡೆಸಲಾಗಿದ್ದು 9 ದಿಗಳ ಅವಧಿಯಲ್ಲಿ ಪಕ್ಷದ ಕಾರ್ಯಕರ್ತರು ಜನರ ಮನೆ ಬಾಗಿಲಿಗೆ ತೆರಳಿ ಮತದಾರರಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಗಳನ್ನು ತಿಳಿಸಿಕೊಟ್ಟಿದ್ದಾರೆ ವಿಶೇಷವಾಗಿ ಅಭಿಯಾನದ ಕೊನೆ ದಿನ ಮುಖ್ಯಮಂತ್ರಿಯವರೇ ನಂಜನಗೂಡಿಗೆ ಆಗಮಿಸಿ ಮತದಾರರನ್ನು ಭೇಟಿ ಮಾಡಿ ಕರಪತ್ರಗಳನ್ನು ಹಂಚಿರುವುದರಿಂದ ಪಕ್ಷದ ಕಾರ್ಯಕರ್ತರ ಉತ್ಸಾಹ ಹೆಚ್ಚಳವಾಗಿದೆ ಎಂದು ಹೇಳಿದರು.

ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ನಗರಸಭೆ ಅಧ್ಯಕ್ಷ ಮಹದೇವಸ್ವಾಮಿ, ತಾಲೂಕು ಬಿಜೆಪಿ ಅಧ್ಯಕ್ಷ ಮಹೇಶ್, ನಗರ ಘಟಕದ ಅಧ್ಯಕ್ಷ ಶ್ರೀನಿವಾಸರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು. ಇನ್ನು ಸಾಧನ ಸಲಕರಣೆ ವಿತರಣಾ ಸಮಾರಂಭದ ಉದ್ಘಾಟನೆಯಲ್ಲಿ ಭಾಗಿಯಾಗುವ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.