ಕೆಂಗೇರಿ: ಕೃತಿಗಳು ಮತ್ತು ಕವನಗಳು ಸಮಾಜದ ಸ್ವಾಸ್ಥ್ಯ ಕಾಪಾಡಲು ಸಹಕಾರಿಯಾಗುತ್ತದೆ ಎಂದು ಇತಿಹಾಸ ತಜ್ಞರು ಜಾಗು ಕನ್ನಡಪರ ಚಿಂತಕರಾದ ತಲಕಾಡು ಚಿಕ್ಕರಂಗೇಗೌಡರು ಅಭಿಪ್ರಾಯ ವ್ಯಕ್ತಪಡಿಸಿದರು.ಭಾನುವಾರ ಸಂಜೆ ಚಾಮರಾಜಪೇಟೆಯ ಮಾತಿನ ಮನೆಯಲ್ಲಿ ಸುಮಿತಾ ಸುನಿಲ್ ಅವರ ಚೊಚ್ಚಲ ಕೃತಿ ಶಿವರಂಜಿನಿಯಿಂದ ಅಮೃತವರ್ಷಿಣಿಯೆಡೆಗೆ ಕವನ ಸಂಕಲನವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಸಮಾಜದಲ್ಲಿನ ಸ್ವಾಸ್ಥ್ಯ ಕಾರ್ಯನೀತಿಯನ್ನು ಅನುಸರಿಸಿ ಪಾಲಿಸಲು ಕೃತಿಗಳು ಮತ್ತು ಕವನಸಂಕಲನಗಳಿಂದ ಮಾತ್ರ ಸಾಧ್ಯ ಇಂತಹ ಕೃತಿಯನ್ನು ನಿರ್ಮಿಸಿದ ಲೇಖಕಿ ವಿಜಯಲಕ್ಷ್ಮಿ ಸತ್ಯಮೂರ್ತಿ ರವರ ಕಾರ್ಯ ಶ್ಲಾಘನೀಯ ವಾದದ್ದು ಎಂದು ತಿಳಿಸಿದರು.
ಲೇಖಕಿ ವಿಜಯಲಕ್ಷ್ಮಿ ಸತ್ಯ ಮೂರ್ತಿ, ಮಾತಿನ ಮನೆಯ ರಾ ಸು ವೆಂಕಟೇಶ, ಶೈಲಸುತೆ ರಂಜಿತಾ ಮತ್ತಿತರರು ಉಪಸ್ಥಿತರಿದ್ದರು.