ಬೆಂಗಳೂರು: ಆಡಳಿತ ಪಕ್ಷದ ಬಾಯಲ್ಲಿ ಮಹಾತ್ಮರ ಹೆಸರು ಕೇಳಿ ಬರುತ್ತಿದೆ. ಇದು ಭೂತದ ಬಾಯಲ್ಲಿ ಭಗವದ್ಗೀತೆ ಎಂಬತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮುಂದುವರೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಪರಿಸ್ಥಿತಿ ೪೧೫ ಗೆದ್ದಿದ್ದ ಕಾಂಗ್ರೆಸ್ ೯೯ಕ್ಕೆ ಇಳಿದಿದೆ. ಇಂದು ಕಾಂಗ್ರೆಸ್ ಹೀನಾಯ ಪರಿಸ್ಥಿತಿಗೆ ಬಂದಿದೆ. ಕಾಂಗ್ರೆಸ್ ಗಾಂಧಿ ಹೆಸರು ಬಳಕೆ ಮಾಡಿ ಟೋಪಿ ಹಾಕುತ್ತಿದೆ. ಗರೀಬಿ ಹಠಾವೋ ಹೆಸರಿ ನಲ್ಲಿ ಮಕ್ಮಲ್ ಟೋಪಿ ಹಾಕುತ್ತಿದೆ. ಕೇಂದ್ರ ಸರ್ಕಾರ ತೆರಿಗೆ ಹಣವನ್ನ ಲೂಟಿ ಮಾಡಿದೆ ಎಂಬ ಅರ್ಥದಲ್ಲಿ ಕಾಂಗ್ರೆಸ್ ನವರು ಮಾತನ್ನಾಡುತ್ತಿದಾರೆ. ಕಾಂಗ್ರೆಸ್ ಇದ್ದಾಗ ಅಭಿವೃದ್ಧಿ ಚರ್ಚೆ ಆಗುತ್ತಿರಲಿಲ್ಲ, ಭ್ರಷ್ಟಾಚಾರ ಚರ್ಚೆ ಆಗುತ್ತಿತ್ತು. ಆದರೆ ಮೋದಿ ಸರ್ಕಾರ ಬಂದ ಬಳಿಕ ಭ್ರಷ್ಟಾಚಾರ ಚರ್ಚೆ ಆಗುತ್ತಿಲ್ಲ ಎಂದರು.
೨೦೧೪-೨೫ರವರೆಗೆ ದೇಶದಲ್ಲಿ ಆಗುವ ಬದಲಾವಣೆ ಬಗ್ಗೆ ಚರ್ಚೆ ಆಗಬೇಕಿದೆ. ದೇಶದ ಮೂಲಭೂತ ಸೌಕರ್ಯ, ಭದ್ರತೆ, ಉದ್ಯೋಗ ಸೃಷ್ಟಿಗೆ ಹಣ ವ್ಯಯ ಮಾಡುತ್ತಿದೆ. ದೇಶ ಮೊದಲು ಎಂದು ಬಲಿಷ್ಠ ಭಾರತ ನಿರ್ಮಿಸಲು ಕೆಲಸ ಮಾಡುತ್ತಿದೆ. ದೇಶದ ರಕ್ಷಣಾ ಬಜೆಟ್ ೬.೨೨ ಲಕ್ಷ ಕೋಟಿ ಹೆಚ್ಚಳವಾಗಿದೆ ಎಂದು ವಿವರಿಸಿದರು.
ಅಹಿಂದ ಹೆಸರಿನಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಇದೆ. ಒಂದುವರೆ ಕೋಟಿ ಹಿಂದುಳಿವ ಸಮು
ದಾಯ ಇದೆ. ಹಿಂದುಳಿದ ವರ್ಗಕ್ಕೆ ಶಕ್ತಿ ತುಂಬಲು ಬಿಜೆಪಿ ಸರ್ಕಾರ ನಿಗಮ ಸ್ಥಾಪನೆ ಮಾಡಿತ್ತು. ಆದರೆ ಈ ನಿಗಮಗಳಿಗೆ ಅನುದಾನ ಕಡಿತಗೊಳಿಸಲಾಗಿದೆ. ಈ ಸಮುದಾಯಗಳನ್ನು ಓಟ್ ಬ್ಯಾಂಕ್ ಆಗಿ ಬಳಕೆ ಮಾಡುತ್ತಿದೆ. ಆದರೆ ಸಮುದಾಯದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿಲ್ಲ. ಯಾವ ಪುರುಷಾರ್ಥಕ್ಕಾಗಿ ನಿಗಮಗಳು ಇವೆ. ದೇವರಾಜ ಅರಸು ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಇದೆ. ಇತರ ನಿಗಮಗಳಿಗೆ ಅನುದಾನ ಕಡಿತ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಬಾಯಲ್ಲಿ ಮಹಾತ್ಮರ ಹೆಸರು ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ: ವಿಜಯೇಂದ್ರ ವ್ಯಂಗ್ಯ



