ಬೆಂಗಳೂರು: ಅಮೇರಿಕಾ ಇಸ್ರೇಲ್ ಹಾಗು ಇರಾನ್ ನಡುವೆ ಯುದ್ಧ ನಡೆಯುತ್ತಿದೆ. ಕಚ್ಚಾ ತೈಲ ಎಲ್.ಪಿ.ಜಿ ಮೇಲೆ ಯಾವ ರೀತಿ ಪರಿಣಾಮ ಆಗುತ್ತಿದೆ ಗೊತ್ತಿದೆ. ಪ್ರಧಾನಿ ನರೇಂದ್ರ ಮೋದಿ ಗ್ರಾಹಕರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಿದ್ದಾರೆ ಕಾಂಗ್ರೆಸ್ ನವರಿಗೆ ಮಾನ ಮರ್ಯಾದೆ ಯಾವುದು ಇಲ್ಲ ಎಂದು ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಇಷ್ಟಾದರೂ ಕಾಂಗ್ರೆಸ್ ನವರು ಪ್ರತಿಭಟನೆ ಮಾಡುತ್ತಾರೆ ಅಂದರೆ, ಅವರು ಬೌಧಿಕ ವಾಗಿ ಎಷ್ಟು ದಿವಾಳಿಯಾಗಿದ್ದಾರೆ ಗೊತ್ತಾಗುತ್ತೆ. ರಾಜ್ಯ ಸರ್ಕಾರ ಇನ್ನು ಪೊಲೀಸ್ ಸಿಬ್ಬಂದಿಗೆ ಸಂಬಳವನ್ನೇ ಕೊಟ್ಟಿಲ್ಲ. ಸಂಬಳ ನೀಡಿಲ್ಲ ಅಂದರೆ ರಾಜ್ಯದ ದಿವಾಳಿಯಾಗಿದೆ ಎಂದು ಗೊತ್ತಾಗಿದೆ. ಸಿಎಂ ಸಿದ್ದರಾಮಯ್ಯ ಎಲ್ಲವನ್ನು ನೋಡುತ್ತಾ ಕುಳಿತಿದ್ದಾರೆ ಎಂದು ಬಿ. ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ



