ಬೆಂಗಳೂರು: 2024 ರ ಲೋಕ ಸಭಾ ಕ್ಷೇತ್ರದ ಚುನಾವಣೆಯ ಹಿನ್ನೆಲೆ ಬಿಜೆಪಿಯಿಂದ ನಿನ್ನೆ ಅಭ್ಯರ್ಥಿಗಳ 5 ನೇ ಪಟ್ಟಿ ಬಿಡುಗಡೆಯಾಗಿದ್ದು, ಪ್ರಕಟಗೊಂಡ ಅಭ್ಯರ್ಥಿಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಶುಭ ಹಾರೈಸಿದ್ದಾರೆ.
ನಿನ್ನೆ ಬಿಡುಗಡೆ ಮಾಡಿರುವ ಲೋಕಸಭಾ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯಲ್ಲಿ ಅವಕಾಶ ಪಡೆದುಕೊಂಡ ಬೆಳಗಾವಿ, ಉತ್ತರ ಕನ್ನಡ, ರಾಯಚೂರು ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
ಹೆಮ್ಮೆಯ ಪ್ರಧಾನಿ ಶ್ರೀ @narendramodi ಜೀ ಅವರ ನೇತೃತ್ವದಲ್ಲಿ ವಿಜಯ ಸಾಧಿಸುವ ಮೂಲಕ ವಿಕಸಿತ ಭಾರತ ಸಂಕಲ್ಪ ಸಾಕಾರಗೊಳಿಸಲು `ಮತ್ತೊಮ್ಮೆ ಮೋದಿ’ ನಮ್ಮೆಲ್ಲರ ಹೆಗ್ಗುರಿಯಾಗಲಿ ಎಂದಿದ್ದಾರೆ.