ದೇವನಹಳ್ಳಿ: ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ನಡೆದ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕಾರ್ಯಕ್ರಮವನ್ನು ಮಾಜಿ ಸಚಿವ ಡಾ.ಕೆ.ಸುಧಾಕರ್ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.ಈ ವೇಳೆ ಮಾತನಾಡಿದ ಸಚಿವರು, ಸಮೃದ್ಧ ಭಾರತದ ಸಂಕಲ್ಪ ಈ ವಿಕಸಿತ ಭಾರತದ ಸಂಕಲ್ಪವಾಗಿದೆ.
ಈ ಹೊಸ ಯಾತ್ರೆಯು ವಿಕಾಸಶೀಲ ಭಾರತದ ಪರಿಕಲ್ಪನೆಗೆ ಇಂಬುನೀಡಲಿದೆ. ಭಾರತ ಬಡತನ ಮುಕ್ತವಾಗ ಬೇಕು. ಸ್ವಚ್ಛ ಭಾರತವಾಗಬೇಕು, ಆರೋಗ್ಯಯುಕ್ತ ಭಾರತವಾಗಬೇಕು. ಬಡವರ ಸಶಸ್ತೀಕರಣವಾಗಬೇಕು ಎನ್ನುವ ಸಂಕಲ್ಪಗಳನ್ನು ಹೊಂದಿದೆ. ಪ್ರಧಾನಿಯವರ ಕನಸನ್ನುನನಸು ಮಾಡಬೇಕಾಗಿರುವುದು ನಮ್ಮೆಲ್ಲರಹೊಣೆಯಾಗಿದ್ದು, ಕೇಂದ್ರದ ಜನಪರ ಯೋಜನೆಗಳನ್ನು ಸದುಪಯೋಗಪಡಿಸಿ ಕೊಂಡು ಮುನ್ನಡೆಯಾಗಬೇಕಿದೆ.
ಮನೆ ಮನೆಗೂ ಗಂಗೆ ನೀರಿನ್ನು ತಲುಪಿಸಿದೆ, ಹೊಗೆಮುಕ್ತ ಜೀವನ ಮಾಡಲು ಉಜ್ವಲಭವಿಷ್ಯ ಯೋಜನೆ ಮಾಡಲಾಗಿದೆ, ದುಡಿಯುವ ಕೈಗಳನ್ನು ಭದ್ರಗೊಳಿಸುವ ಉದ್ದೇಶದೊಂದಿಗೆ ಮುದ್ರಾ ಯೋಜನೆಯಲ್ಲಿ ಸಾಲಸೇವಾ ಸೌಲಭ್ಯ, ಪ್ರಧಾನ ಮಂತ್ರಿ ಸುರಕ್ಷಾ ಯೋಜನೆಗಳು ಇಂತಹ ಮಹಾನ್ ಪ್ರಧಾನಿಯವರ ಮಹತ್ವಾಕಾಂಕ್ಷೆ ಹೊಂದಿರುವ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸಬೇಕಾಗಿದೆ ಈ ವೇಳೆ ಸಚಿವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಂವಾದ ಕಾರ್ಯಕ್ರಮದ ಪ್ರಸಾರವನ್ನು ಸಾರ್ವಜನಿಕರೊಂದಿಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಭಾರತದ ಜೆಡಿಪಿ ಪ್ರವಾಸೋದ್ಯಮದ ಮೇಲೆ ಅವಲಂಭಿತವಾಗಿದೆ, ಜಪಾನ್ ನಂತರ 5 ನೇ ಸ್ಥಾನದಲ್ಲಿ ದೇಶದ ಪ್ರಗತಿಯಲ್ಲಿ ಮುಂದೆ ಇದ್ದೀವಿ, ಸ್ಥಳೀಯ ಮಟ್ಟದಲ್ಲಿ ಬ್ಯಾಂಕ್ಗಳೊಂದಿಗೆ ಸಂಯೋಜನೆ ಮಾಡಿ ಅರಿವು ಮೂಡಿಸಬೇಕು, ಕೋವಿಡ್ ಸಮಯದ ನಷ್ಟಕ್ಕೆ ಆಹಾರಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ 5ಕೆ.ಜಿ ನೀಡುತ್ತಿದೆ, ರಾಜ್ಯ ಸರ್ಕಾರದ ಮಹಾಸುಳ್ಳು ಹೇಳಿ ಮತಗಳನ್ನು ಪಡೆದಿದ್ದಾರೆ, ರಾಜ್ಯದಲ್ಲಿ ಬರ ಗ್ಯಾರಂಟಿಯಾಗಿದ್ದು,
ರೈತರಆತ್ಮಹತ್ಯೆಗಳು ಹೆಚ್ಚಾಗಿದ್ದು, ದೇವನಹಳ್ಳಿ ಯಲ್ಲಿ ಯಾವುದಾದರೂ ರಸ್ತೆಗಳು ದುರಸ್ತ ಯಾಗಿದ್ದೀಯಾ, ಈ ಗ್ಯಾರಂಟಿಯ ಉಚಿತ
ಗಳೆಲ್ಲವೂ ಲೋಕಸಭೆ ಚುನಾವಣೆಯವರೆಗೂ ಸೀಮಿತವಷ್ಟೇ ಎಂದರು.9.50 ಲಕ್ಷ ಮನೆಗಳಿಗೆ ಹರ್ ಘರ್ಜಲ್ ಸಂಪರ್ಕ ಕಲ್ಪಿಸಲಾಗಿದೆ, ವಿಶ್ವಕರ್ಮ ಯೋಜನೆಯಡಿಯಲ್ಲಿ ಕೌಶಲ್ಯ ಅಭಿವೃದ್ಧಿಮಾಡಿ ತರಬೇತಿಯಿಂದ ಉದ್ಯಮದಾರರ ನ್ನಾಗಿ ಮಾಡುವ ಉದ್ದೇಶ, 500 ವರ್ಷಗಳ ಶ್ರಮದ ಫಲ ಶ್ರೀರಾಮರ ಪ್ರಾಣ ಪ್ರತಿಷ್ಠಾಪನೆ ಯಾಗುತ್ತಿದೆ, ಪ್ರಧಾನಿಯವರೊಂದಿಗೆ ಹಬ್ಬಕ್ಕೆಎಲ್ಲರೂ ಸಿದ್ದರಾಗಿ ಎಂದು ತಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಪಟ್ಟಣದ ಕೆಲವು ಮನೆಗಳಿಗೆ ಮಂತ್ರಾಕ್ಷತೆಯನ್ನು ವಿತರಿಸಿದರು.
ಇದೇ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಸಂಸ್ಥೆಯ ಮುಖ್ಯಸ್ಥರುಗಳಾದ ತ್ರಿಪುರಾರಿ ಸಿಂಗ್ ಮತ್ತು ಮಧುಕರ್ ಬಿಜೆಪಿ ಬೆಂ.ಗ್ರಾ.
ಜಿಲ್ಲಾಧ್ಯಕ್ಷ ಎ .ವಿ ನಾರಾಯಣಸ್ವಾಮಿ, ಉಪಾಧ್ಯಕ್ಷ ಸಿ.ನಾರಾಯಣಸ್ವಾಮಿ, ಜಿಲ್ಲಾ ರೈತ ಮೋರ್ಚಾ ಆಧ್ಯಕ್ಷ ಎಚ್.ಎಂ.ರವಿಕುಮಾರ್, ಮಾಜಿ ಜಿಲ್ಲಾ ಅಧ್ಯಕ್ಷ ನಾರಾಯಣ್ ಗೌಡ, ಅಸಂಘಟಿತ ಕಾರ್ಮಿಕ ಪ್ರಕೋಷ್ಠ ಜಿಲ್ಲಾಪ್ರಧಾನ ಸಂಚಾಲಕ ಅಂಬರೀಶಗೌಡ, ತಾಲೂಕುಅಧ್ಯಕ್ಷ ಸುಂದರೇಶ್, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ತಾಲೂಕು ರೈತ ಮೋರ್ಚಾ ಅಧ್ಯಕ್ಷ ವಿನಯ್ ಕುಮಾರ್ ಮಹಿಳಾ ಮುಖಂಡರಾದ ದೇ.ಸು.ನಾಗಾರಾಜ್, ಓಬದೇನಹಳ್ಳಿ ಮುನಿಯಪ್ಪ, ಚೇತನ್ ಗೌಡ, ಸಾಗರ್, ಚೇತನ್ ದಾಕ್ಷಾಯಣಿ, ಪುನೀತಾ, ನಾಗವೇಣಿ ಮತ್ತಿತರರು ಭಾಗವಹಿಸಿದ್ದರು.