ಗುಂಡ್ಲುಪೇಟೆ: ತಾಲ್ಲೂಕಿನ ರಾಘವಾಪುರದಲ್ಲಿ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ನೀರಿಲ್ಲದೆ ಪಾಳು ಬಿದ್ದಿರುವ ಬಾವಿಗೆ ಗ್ರಾಮಸ್ಥರು ಕಸ ಕಡ್ಡಿ ಹಾಕಿ ಕೊಳೆತು ಗಬ್ಬು ವಾಸನೆ ಬೀರುತ್ತಿದೆ.
ಗ್ರಾಮದ ಮದ್ಯ ಭಾಗದಲ್ಲಿ ಈ ಭಾವಿ ಇರುವುದರಿಂದ ಅಲ್ಲಿನ ಜನರು ಕಸ ಕಡ್ಡಿ ಹಾಕಿಬಹುತೇಕ ಮುಚ್ಚಿಹೋಗಿದ್ದು ಕೆಲವೇ ಅಡಿಗಳಷ್ಟು ಬಾಕಿ ಇದೆ. ಆದರೆ ಇಲ್ಲಿ ಕಸ ತುಂಬಿದ್ದರಿಂದ ಮಳೆ ಬಿದ್ದ ಸಂದರ್ಭದಲ್ಲಿ ಅಕ್ಕ ಪಕ್ಕದ ಮನೆಗಳಿಗೆ ನಿಲ್ಲಲಾರದಂತ ವಾಸನೆ ಬರುತ್ತಿರುತ್ತದೆ. ವಾಸನೆಯಿಂದ ಸಣ್ಣ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀಳಲಿದೆ.
ಹಾಗೆಯೇ ಈ ಬಾವಿ ಹಾವು ಚೇಳುಗಳ ವಾಸಸ್ಥಾನವಾಗಿದ್ದು ಅಕ್ಕ ಪಕ್ಕದ ನಿವಾಸಿಗಳು ಭಯಭೀತರಾಗಿದ್ದಾರೆ. ಬಾವಿಯಿಂದ ಮನೆಗಳಿಗೆ ಜಿರಳೆಗಳು ಚೇಳುಗಳು ಹರಿದು ಬರುತ್ತಿವೆ ಇದರ ಬಗ್ಗೆ ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿ ಸಂಬಂಧಪಟ್ಟ ಅಧಿಕಾರಿಗಳಿಗೂ ಲಿಖಿತ ಮೂಲಕ ದೂರು ನೀಡಿದರು ಏನು ಪ್ರಯೋಜನವಾಗಿಲ್ಲ.
ಚುನಾವಣಾ ಸಂದರ್ಭದಲ್ಲಿ ಮಾತ್ರ ನೆನಪಾಗುವ ಜನಪ್ರತಿನಿಧಿಗಳು ಇತ್ತ ತಿರುಗಿ ನೋಡುವುದಿಲ್ಲ ಎಷ್ಟು ಸಾರಿ ಗ್ರಾಮ ಸಭೆಯಲ್ಲಿ ತಿಳಿಸಿದರು ಬಾವಿ ಮುಚ್ಚುವ ಕೆಲಸ ಆಗಿಲ್ಲ ಏನಾದರೂ ಒಂದು ನೆಪ ಹೇಳಿ ಮುಂದೂಡುತ್ತಿದ್ದಾರೆ. ಇದರಿಂದ ಮುಂದೆ ಏನಾದರೂ ಅನಾಹುತಗಳಾದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಆ ಭಾಗದ ನಿವಾಸಿಗಳು ಆರೋಪಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷದಿಂದ ಬೇಸರವಾಗಿದ್ದು ಸ್ಥಳೀಯ ಜನ ಪ್ರತಿನಿಧಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸುವರೂ ಕಾದು ನೋಡಬೇಕಾಗಿದೆ ಎಂದು ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ. ಹೀಗೆ ಮುಂದುವರೆದರೆ ಪಂಚಾಯಿತಿ ಮುಂದೆ ಉಪವಾಸ ಕೂರುವುದಾಗಿ ಅಲ್ಲಿನ ನಿವಾಸಿ ದೊರೆಸ್ವಾಮಿ ತಿಳಿಸಿದ್ದಾರೆ.