ಮಾಗಡಿ: ಇಂದಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮ ಪುಸ್ತಕದ ಓದಿನ ಜೊತೆಗೆ ಪ್ರಾಯೋಗಿಕ ಕಲಿಕೆಗೆ ಸೀಮಿತವಾಗಿರದೇ ವಿಜ್ಞಾನ ಮತ್ತು ತಂತ್ರಜ್ಞಾನದ ಕಡೆಗೆ ಹೆಚ್ಚಿನ ಗಮನಹರಿಸಬೇಕಿದೆ ಎಂದು ಹುಲೀಕಟ್ಟೆ ನ್ಯಾಷನಲ್ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿಯಾದ ವಿಮಾ ಹೆಚ್.ಎನ್.ಅಶೋಕ್ ಹೇಳಿದರು.
ತಾಲ್ಲೂಕಿನ ಹುಲೀಕಟ್ಟೆ ಗ್ರಾಮದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ನಡೆದ ವಿಜ್ಞಾನ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ
ಮಾತನಾಡಿದ ಅವರು ನಾವುಗಳು ಆಧುನಿಕ ಪ್ರಪಂಚದಲ್ಲಿದ್ದೇವೆ.ಇದೀಗ ವಿವಿಧ ಸ್ಥರಗಳಲ್ಲಿ ಸ್ಪರ್ದೆಗಳನ್ನು ಒಡ್ಡಬೇಕಾದರೆ ವಿಜ್ಞಾನ ಮತ್ತು ತಂತ್ರಜ್ಞಾನಗಳು ಪ್ರಮುಖ ಹಾಗೂ ಮಗತ್ವದ ಪಾತ್ರ ವಹಿಸುತ್ತಿವೆ. ಇದನ್ನು ನಾವುಗಳು ಅಥ್ಸಿಕೊಂಡು ಮತ್ತು ವಸ್ತು ಪ್ರದರ್ಶನಗಳನ್ನು ಅಯೋಜಿಸಿದ್ದೇವೆ.ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಜೊತೆಗೆ ತಮ್ಮಲ್ಲಿ ಅಡಗಿರುವ ಪ್ರತಿಭೆಗಳನ್ನು ಭಿತ್ತರಿಸಬೇಕು. ಪೋಷಕರು ಸಹ ತಮ್ಮ ಮಕ್ಕಳ ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹ ನೀಡಬೇಕು ಎಂದು ವಿಮಾ ತಿಳಿಸಿದರು.
ದೈಹಿಕ ಶಿಕ್ಷಕ ಎಚ್.ವಿ.ರಾಜೇಶ್ ಮಾತನಾಡಿ ಆಧುನಿಕತೆ ಬೆಳೆದಂತೆ ವೈಜ್ಞಾನಿಕ ಒಂದಲ್ಲಾ ಒಂದು ನೂತನ ಆವಿಷ್ಖಾರಗಳು ಪ್ರಪಂಚದಾದ್ಯAತ ಮುನ್ನೆಲೆಗೆ ಬರುತ್ತಿವೆ. ವಿದ್ಯಾರ್ಥಿಗಳು ಕೇವಲ ಪಠ್ಯೇತರ ಚಟುವಟಿಕೆಗಳಿಗೆ ಸೀಮಿತವಾದರೆ ಸಾಲದು. ತಂತ್ರಜ್ಞಾನ ವಿಜ್ಞಾನದ ಪರಿಕಲ್ಪನೆಯನ್ನು ಅಳವಡಿಸಿಕೊಂಡರೆ ಮುಂದಿನ ಭವಿಷ್ಯಕ್ಕೆ ಇವುಗಳು ಸಹಕಾರಿಯಾಗಲಿವೆ ಎಂದರು.
ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ಸೌರಶಕ್ತಿ
ಬಳಕೆ, ಪರಿಸರ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ, ಚಂದ್ರಯಾನ, ಜಲಾನಯನ ಮಾದರಿ, ಸೊಪ್ಪು, ತರಕಾರಿ, ನೇಗಿಲು, ಸ್ಮಾರ್ಟ್ ಸಿಟಿ ಯೋಜನೆ, ರೋಬೋಟ್, ಖಾಸಗಿ ಕಾರ್ಖಾನೆ, ಅರಣ್ಯ ಉಳಿಸಿ
ನಾಡು ಬೆಳೆಸಿ, ಗೃಹ ನಿರ್ಮಾಣ ಮತ್ತು ಆದುನಿಕ
ತಂತ್ರಜ್ಞಾನಕ್ಕೆ ಸಂಭಂದಿಸಿದ ವಿವಿಧ ಮಾದರಿಯನ್ನು ಪ್ರದರ್ಶಿಸಿದರು. ಮುಖ್ಯ ಶಿಕ್ಷಕ ವಾಸುದೇವ್, ಸಿ.ಆರ್.ಪಿ.ಕುಮಾರಸ್ವಾಮಿ, ರವಿಕುಮಾರ್, ಕುಮಾರ್, ರಂಗಸ್ವಾಮಿ, ಮುದಯ್ಯ, ಕವಿತಾ, ಭಾರತಿ,
ಪಸಿಯಾ, ಬಿಂದು ಸೇರಿದಂತೆ ಮತ್ತಿತರಿದ್ದರು.
ವಿಜ್ಞಾನ ತಂತ್ರಜ್ಞಾನದತ್ತ ಗಮನಹರಿಸಬೇಕಿದೆ: ವಿಮಾ ಅಶೋಕ್



